ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಭಾರತದ ವಾಯುಗಡಿಯನ್ನು ಉಲ್ಲಂಘಿಸಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಹೆಸರನ್ನು ಅತ್ಯುನ್ನತ ಶೌರ್ಯ ಪ್ರಶಸ್ತಿ, ವೀರ ಚಕ್ರಕ್ಕೆ ಶಿಫಾರಸ್ಸು ಮಾಡಲು ವಾಯುಸೇನೆ ನಿರ್ಧರಿಸಿದೆ.
ಅಭಿನಂದನ್ ಅವರೊಂದಿಗೆ, ಪಾಕಿಸ್ಥಾನದ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿದ್ದ 12 ಮಿರಾಜ್ 2000 ಯುದ್ಧವಿಮಾನದ ಪೈಲೆಟ್ಗಳನ್ನೂ ವಾಯುಸೇನಾ ಪದಕಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ.
ಅಭಿನಂದನ್ ಅವರಿಗೆ ಅಪಾಯವಿರುವ ಕಾರಣ, ಶ್ರೀನಗರ ವಾಯುನೆಲೆಯಿಂದ ದೇಶದ ಇನ್ನೊಂದು ವಾಯುನೆಲೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಲಾಕೋಟ್ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತಿಕಾರ ತೀರಿಸಲು ಫೆ.16ರಂದು ಭಾರತ ವಾಯುಗಡಿಯನ್ನು ಉಲ್ಲಂಘಿಸಿ ಒಳಗೆ ನುಸುಳಲು ಪಾಕಿಸ್ಥಾನದ ಎಫ್-16 ಯುದ್ಧವಿಮಾನ ಪ್ರಯತ್ನಿಸಿತ್ತು, ಈ ವೇಳೆ ಆ ವಿಮಾನವನ್ನು ಮಿಗ್-21 ಮೂಲಕ ಬೆನ್ನತ್ತಿದ್ದ ಅಭಿನಂದನ್ ಅದನ್ನು ಹೊಡೆದುರುಳಿಸುವಲ್ಲಿ ಸಫಲರಾಗಿದ್ದರು. ಬಳಿಕ ಅವರ ವಿಮಾನವೂ ಪತನಗೊಂಡಿತ್ತು, ಈ ವೇಳೆ ಪ್ಯಾರಾಚೂಟ್ ಹಿಡಿದು ಕೆಳಕ್ಕೆ ಹಾರಿದ್ದ ಅಭಿನಂದನ್ ಪಾಕ್ ನೆಲದಲ್ಲಿ ಬಿದ್ದಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿತ್ತು, ಎರಡು ದಿನಗಳ ಬಳಿಕ ಬಿಡುಗಡೆಗೊಳಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.