ನವದೆಹಲಿ: ಭಾರತದ ನೌಕಾಪಡೆಯ ಸುಧಾರಿತ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ‘ಇಂಫಾಲ್’ ಅನ್ನು ಭಾನುವಾರ ಮುಂಬಯಿಯ ಮಝ್ಗಾನ್ ಡಾಕ್ ಶಿಪ್ ಬಿಲ್ಡರ್ಸ್ನಲ್ಲಿ ಅನಾವರಣಗೊಳಿಸಲಾಗಿದೆ, ಪ್ರಾಜೆಕ್ಟ್ 15-ಬಿ ಅಡಿಯಲ್ಲಿ ನಿರ್ಮಾಣವಾದ ಮೂರನೇಯ ಶಿಪ್ ಇದಾಗಿದೆ. 75 ವರ್ಷಗಳ ಹಿಂದೆ ನಡೆದಿದ್ದ ಇಂಫಾಲ ಮತ್ತು ಕೊಹಿಮಾ ಯುದ್ಧದ ಸ್ಮರಣಾರ್ಥ ಇದಕ್ಕೆ ‘ಇಂಫಾಲ’ ಎಂದು ಹೆಸರಿಡಲಾಗಿದೆ.
ನೌಕಾ ಸಂಪ್ರದಾಯದಂತೆ, ನೌಕಾ ಮುಖ್ಯಸ್ಥ ಸುನೀಲ್ ಲಾಂಬಾ ಅವರ ಪತ್ನಿ ಹಾಗೂ ನೌಕಾ ಪತ್ನಿಯರ ಕಲ್ಯಾಣ ಸಂಸ್ಥೆಯ ಮುಖ್ಯಸ್ಥೆ ರೀನಾ ಲಾಂಬಾ ಅವರು, ತೆಂಗಿನ ಕಾಯಿಯನ್ನು ಹೊಡೆಯುವ ಮೂಲಕ ಶಿಪ್ ಅನಾವರಣಗೊಳಿಸಿದರು.
ಇಂಫಾಲ ಹಡಗು 163 ಮೀಟರ್ ಉದ್ದವಿದ್ದು, 17.4 ಮೀಟರ್ ಬೀಮ್ ಹೊಂದಿದೆ, 7,300 ಟನ್ ಭಾರವಿದೆ, 30 ನಾಟ್ಸ್ ವೇಗವನ್ನು ಪಡೆಯುವ ಸಲುವಾಗಿ ನಾಲ್ಕು ಗ್ಯಾಸ್ ಟರ್ಬಿನ್ಸ್ ಅನ್ನು ಹೊಂದಿದೆ. ಹಿಂದೆ ಅನಾವರಣಗೊಂಡಿರುವ ವಿಶಾಖಪಟ್ಟಣಂ ಮತ್ತು ಮರ್ಮುಗಂ ಯುದ್ಧನೌಕೆಗಳಂತೆ, ಇಂಫಾಲ ಕೂಡ ಎರಡು ಬಹುಕಾರ್ಯ ಹೆಲೆಕಾಫ್ಟರ್ಗಳನ್ನು ಹೊತ್ತೊಯ್ಯಬಲ್ಲದು ಮತ್ತು ಕಾರ್ಯಾಚರಿಸಬಲ್ಲದು.
ನೌಕಾ ವರದಿಯ ಪ್ರಕಾರ, ”ಹಲ್ ಶೇಪಿಂಗ್ ಸ್ಟೀಲ್ತ್ ಫೀಚರ್ಗಳನ್ನು ವೃದ್ಧಿ ಮಾಡಲಾಗಿದೆ ಮತ್ತು ರಾಡಾರ್ ಟ್ರಾನ್ಸ್ಪರೆಂಟ್ ಡೆಕ್ ಫಿಟ್ಟಿಂಗ್ ಮೂಲಕ ಈ ಹಡಗನ್ನು ಪತ್ತೆ ಮಾಡುವುದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲದಂತೆ ಮಾಡಲಾಗಿದೆ.
ಬಹು ಕಾರ್ಯತಾಂತ್ರಿಕ ಕಣ್ಗಾವಲು ರಾಡಾರ್ ಮತ್ತು ಮಿಸೈಲ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸೆನ್ಸಾರ್ಗಳನ್ನು ಈ ಹಡಗು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.