ಮುಂಬೈ: ಏಷ್ಯಾದ ಅತಿದೊಡ್ಡ ಏಕೀಕೃತ ಕಾಫಿ ಕಂಪನಿ ಟಾಟಾ ಕಾಫಿ 2018-19 ಹಣಕಾಸು ವರ್ಷದಲ್ಲಿ 757 ಕೋಟಿ ರೂಪಾಯಿಗಳ ಆದಾಯವನ್ನು ಪಡೆದುಕೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 762 ಕೋಟಿ ರೂಪಾಯಿ ಆದಾಯಗಳಿಸಿತ್ತು.
ಈ ವರ್ಷ ತೆರಿಗೆ ಪಾವತಿಯ ಬಳಿಕ ಟಾಟಾ ಕಾಫಿ ಸಂಸ್ಥೆಯು 72 ಕೋಟಿ ರೂಪಾಯಿಗಳ ಲಾಭವನ್ನು ಪಡೆದುಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪಡೆದ ಲಾಭ ರೂ.63 ಕೋಟಿ ಆಗಿತ್ತು. ಕಾಫಿ ಬೆಳೆಯಲ್ಲಿ ಸುಧಾರಣೆ ಮತ್ತು ನಿರಂತರ ಕಾಫಿ ಕಾಫಿ ಉತ್ತೇಜನದ ಫಲವಾಗಿ ಹೆಚ್ಚಿನ ಲಾಭವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮಾರ್ಚ್ 31ರಂದು ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ರೂ.212ಕೋಟಿಗಳ ಆದಾಯವನ್ನು ದಾಖಲಿಸಿದೆ. 2018ರ ಜನವರಿ- ಮಾರ್ಚ್ ತಿಂಗಳ ತ್ರೈಮಾಸಿಕದಲ್ಲಿ 207 ಕೋಟಿ ರೂಪಾಯಿ ಲಾಭವಾಗಿತ್ತು.
ಆಫ್ರಿಕಾ ಮತ್ತು ಯುರೋಪಿಯನ್ ಭೂಪ್ರದೇಶಗಳು ಬಲಿಷ್ಠವಾಗಿದ್ದು, ನಮ್ಮ ಗ್ರಾಹಕ ಬೇಸ್ ವಿಸ್ತಾರಗೊಂಡಿದೆ ಎಂದು ಟಾಟಾ ಕಾಫಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚಾಕೋ ತೋಮಸ್ ಹೇಳಿದ್ದಾರೆ.
ಕಳೆದ ಮಾರ್ಚ್ 6ರಂದು ಕಂಪನಿಯು ಸಾಗರೋತ್ತರ ಫ್ರೀಝ್ ಡ್ರೈಡ್ ಕಾಫಿ ಪ್ರೊಡಕ್ಷನ್ ಪ್ಲಾಂಟ್ ಅನ್ನು ಅನಾವರಣಗೊಳಿಸಿತು. ವಾರ್ಷಿಕ ಐದು ಸಾವಿರ ಮಿಲಿಯನ್ ಟನ್ ಕಾಫಿ ಬೆಳೆಯುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.