×
Home About Us Advertise With s Contact Us

ಜಡಿ ಮಳೆಯ ನಡುವೆಯೂ ಕರ್ತವ್ಯ ನಿರ್ವಹಿಸಿ ಹೀರೋ ಆದ ಟ್ರಾಫಿಕ್ ಪೊಲೀಸ್


ಗುವಾಹಟಿ: ಸುರಿಯುವ ಜಡಿ ಮಳೆಯ ನಡುವೆಯೂ ನಿಂತು ಸಾರಿಗೆ ದಟ್ಟಣೆಯನ್ನು ನಿಯಂತ್ರಿಸುವ ತನ್ನ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ಅಸ್ಸಾಂನ ಸಾರಿಗೆ ಪೊಲೀಸ್ ಮಿಥುನ್ ದಾಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಮಾತ್ರವಲ್ಲ, ಪೊಲೀಸ್ ಇಲಾಖೆಯಿಂದಲೂ ಶಬ್ಬಾಸ್ ಗಿರಿ ಪಡೆಯುತ್ತಿದ್ದಾರೆ.

ಎಡೆ ಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ಸಮವಸ್ತ್ರ ತೊಟ್ಟು, ಕೊಡೆ ಅಥವಾ ರೈನ್ ಕೋಟ್ ಇಲ್ಲದೆಯೇ ಅವರು ಗುವಾಹಟಿಯ ಅತ್ಯಂತ ಸಾರಿಗೆ ದಟ್ಟಣೆ ಹೊಂದಿರುವ ಇಂಟರ್­ಸೆಕ್ಷನ್­ನಲ್ಲಿ ಸಾರಿಗೆ ನಿಯಂತ್ರಣದಲ್ಲಿ ನಿರತರಾಗಿದ್ದರು. ಈ ಬಗೆಗಿನ 8 ನಿಮಿಷಗಳ ವೀಡಿಯೋವನ್ನು ಅಸ್ಸಾಂ ಪೊಲೀಸ್ ಟ್ವಿಟ್ ಮಾಡಿದೆ. ಇದು ಭಾರೀ ವೈರಲ್ ಆಗಿದೆ. ಅವರ ಕಾರ್ಯಕ್ಕೆ ಪ್ರಶಂಸೆಯ ಮಳೆಯೇ ಸುರಿದಿದೆ.

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್­ನಲ್ಲಿ ಅಸ್ಸಾಂ ಪೊಲೀಸ್, ಮಿಥುನ್ ದಾಸ್ ಅವರ ಅಸಾಧಾರಣ ಕರ್ತವ್ಯ ಪ್ರಜ್ಞೆಗಾಗಿ ವಂದಿಸಿದೆ. “ಸಮರ್ಪಣಾ ಮನೋಭಾವ ಗುಡುಗನ್ನೂ ತುಂತುರು ಆಗಿ ಪರಿವರ್ತಿಸಬಲ್ಲದು’ ಎಂದು ಕ್ಯಾಪ್ಷನ್ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇವರ ಕಾರ್ಯಕ್ಕೆ ಅಪಾರ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಕೆಲವರು ಇವರನ್ನು ದೇಶದ ಬಲಿಷ್ಠ ಸೈನಿಕ ಎಂದು ಬಣ್ಣಿಸಿದರೆ, ಇನ್ನು ಕೆಲವರು ನಿಜವಾದ ಚೌಕಿದಾರ ಎಂದು ಪ್ರಶಂಸಿಸಿದ್ದಾರೆ.

 

Recent News

Back To Top
error: Content is protected !!