ಲೋಕಸಭಾ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲು ರಾಹುಲ್ ಗಾಂಧಿಯಿಂದ ಹಿಡಿದು ಸ್ಯಾಮ್ ಪಿತ್ರೊಡಾರಂತಹ ರಾಜಕಾರಣಿಗಳು ಅತೀ ಕೆಳಮಟ್ಟಕ್ಕೆ ಇಳಿದಿರುವುದನ್ನು ನಾವು ನೋಡುತ್ತಿದ್ದೇವೆ. ಕ್ಯಾರವಾನ್ ಮ್ಯಾಗಜೀನ್ ಈ ನಿಟ್ಟಿನಲ್ಲಿ ಮತ್ತೊಂದು ಹೊಸ ಕಥೆಯನ್ನು ಸೃಷ್ಟಿಸಿ ಕೆಟ್ಟ ಯಶಸ್ಸನ್ನು ಪಡೆಯುವ ಪ್ರಯತ್ನ ನಡೆಸಿದೆ. ವರದಿಯನ್ನು ಸಿದ್ಧಪಡಿಸಲು ಕ್ಯಾರವಾನ್ ಮ್ಯಾಗಜೀನ್ ಬಳಸಿದ ದಾಖಲೆಗಳ ಬಗ್ಗೆ ಒಂಚೂರು ಗಮನ ಹರಿಸಿದರೆ ಅದರ ವರದಿಯ ನಿಜಬಣ್ಣ ಏನೆಂಬುದು ತಿಳಿದು ಬರುತ್ತದೆ. ‘ಯಡ್ಡಿ ಡೈರೀಸ್’ ಎಂಬ ಶೀರ್ಷಿಕೆಯ ವರದಿಯಲ್ಲಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಧಿಕಾರ ದುರುಪಯೋಗಪಡಿಸಿಕೊಂಡು ಕಿಕ್ ಬ್ಯಾಕ್ ಪಡೆದುಕೊಂಡ ಬಗೆಗಿನ ಸಾಕ್ಷ್ಯಗಳು ನಮಗೆ ಸಿಕ್ಕಿದೆ ಎಂದಿದೆ. ಆದರೆ ವರದಿಯಲ್ಲಿನ ತಾಂತ್ರಿಕ ದೋಷ ಮತ್ತು ಅಸಮಂಜಸತೆಗಳನ್ನು ಆ ಮ್ಯಾಗಜೀನ್ನ ಉಸಿರುಗಟ್ಟಿಸುವ ಇಂಗ್ಲೀಷ್ಗೂ ಮರೆಮಾಚಲು ಸಾಧ್ಯವಾಗಿಲ್ಲ. ಡೈರಿ ಎಂಟ್ರಿ ಅಥವಾ ವರದಿಗೆ ಬಳಸಲಾದ ಸಾಕ್ಷಿಗಳನ್ನು ಗಮನಿಸಿದರೆ ಕ್ಯಾರವಾನ್ ಹೇಳಿಕೆ ಸಂಪೂರ್ಣ ಸುಳ್ಳು ಎಂಬುದು ತಿಳಿದು ಬರುತ್ತದೆ.
1. ಯಡಿಯೂರಪ್ಪನವರು ತಪ್ಪಿತಸ್ಥ ಎಂದು ಆರೋಪಿಸಲು ದೊಡ್ಡ ಮಟ್ಟದ ಸಾಕ್ಷ್ಯ ಎಂದು ಪರಿಗಣಿಸಲಾಗಿರುವ ಕಿಕ್ ಬ್ಯಾಕ್ ಮೊತ್ತ ಪಡೆದ ಬಗೆಗಿನ ವಿವರಗಳುಳ್ಳ ಡೈರಿಗಳಲ್ಲಿ ಸ್ವತಃ ಯಡಿಯೂರಪ್ಪನವರ ಸಹಿ ಇದೆ. ವಿಭಿನ್ನವಾಗಿ ಹೇಳುವುದಾದರೆ, ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಕ್ರಮವೊಂದರ ‘ಬಲಿಷ್ಠ ಸಾಕ್ಷ್ಯ’ದ ಮೇಲೆ ತಮ್ಮ ಜಾಡನ್ನು ಬಿಟ್ಟು ಹೋಗಿದ್ದಾರೆ. ಈ ರೀತಿ ಸಹಿಗಳನ್ನು ಹಾಕುವುದು ರಾಜಕೀಯ ಆತ್ಮಹತ್ಯೆಗೆ ಸಮಾನ. ಈ ಸಂಗತಿಯನ್ನು ಅರಿಯದಷ್ಟು ಸಕ್ರಿಯ, ಅನುಭವಿ ರಾಜಕಾರಣಿ ಯಡಿಯೂರಪ್ಪನವರು ಮುಗ್ಧರು ಎಂದೆನಿಸುವುದಿಲ್ಲ. ಒಂದು ವೇಳೆ ಯಡಿಯೂರಪ್ಪನವರು ಬರೆದಿದ್ದಾರೆಂದು ಇಟ್ಟುಕೊಂಡರೂ ಡೈರಿಯಲ್ಲಿ ಬರೆಯುವಾಗ “ಯಡಿಯೂರಪ್ಪನವನಾದ ನಾನು ” ಎಂದು ಪ್ರತಿಜ್ಞಾ ಸ್ವೀಕಾರ ಮಾಡುವ ರೀತಿಯಲ್ಲಿ ಬರೆದದ್ದು ಯಾಕೆ…??! ಮುಂದೆ ಡೈರಿ ಓದುವವರಿಗೆ ತಿಳಿಯಲಿ ಎಂದೇ…??!
2. ಯಾವುದೇ ಡೈರಿಯಲ್ಲಿ ಪ್ರತಿಪುಟದಲ್ಲೂ ವಾರಗಳ ಹೆಸರಿನ ಜೊತೆಗೆ ಆಯಾಯ ದಿನ ತಾರೀಕುಗಳು ಮುದ್ರಿತವಾಗಿರುತ್ತದೆ! ಆದರೆ ಯಡಿಯೂರಪ್ಪನವರ ಈ ಡೈರಿಯಲ್ಲಿ ತಾರೀಕು ಮುದ್ರಿಸಲು ಕಾಂಗ್ರೇಸಿಗರಿಗೆ ಮರೆತು ಹೋಗಿದ್ದೋ ಅಲ್ಲ intentionally ಮುದ್ರಿಸದೇ ಇದ್ದುದೇ ಎಂಬುದನ್ನು ಅವರೇ ಹೇಳಬೇಕಷ್ಟೇ..!!
3. ಆಗಸ್ಟಾ ವೆಸ್ಟ್ ಲ್ಯಾಂಡ್ನಂತಹ ಹಗರಣಗಳಲ್ಲಿ ಕಾನೂನು ಬಾಹಿರವಾಗಿ ಕಿಕ್ ಬ್ಯಾಕ್ಗಳನ್ನು ಪಡೆಯಲು ಕೋಡ್ ನೇಮ್ಗಳನ್ನು ಬಳಸಿದ್ದನ್ನು ನಾವು ತಿಳಿದುಕೊಂಡಿದ್ದೇವೆ. ಆದರೆ ಯಡಿಯೂರಪ್ಪ ಪ್ರಕರಣದಲ್ಲಿ ಸಾಕ್ಷಿಯಾಗಿ ಬಳಸಲಾಗಿರುವ ಡೈರಿಯಲ್ಲಿ ಆರೋಪಿಯ ಹೆಸರನ್ನು ಸ್ಪಷ್ಟವಾಗಿ ಹೇಳಲಾಗಿದೆ. ಮೊತ್ತದ ಮುಂದುಗಡೆ ಬಿಜೆಪಿ ನಾಯಕರುಗಳ ಹೆಸರನ್ನು ಸ್ಪಷ್ಟವಾಗಿ ಇಲ್ಲಿ ನಮೂದು ಮಾಡಲಾಗಿದೆ. ಕಾನೂನು ಬಾಹಿರ ಕಾರ್ಯಗಳಲ್ಲಿ ಹೆಸರುಗಳನ್ನು ಇಷ್ಟು ಸ್ಪಷ್ಟವಾಗಿ ನಮೂದಿಸುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
4. 150 ಕೋಟಿ ಮತ್ತು 50 ಕೋಟಿಯಂತಹ ರೌಂಡ್ ಫಿಗರ್ಸ್ಗಳನ್ನು ಕ್ಯಾರವಾನ್ ವರದಿಯಲ್ಲಿ ಉಲ್ಲೇಖ ಮಾಡಲಾಗಿರುವ ‘ಡೈರಿ ಎಂಟ್ರಿ’ಗಳಲ್ಲಿ ಬಳಸಲಾಗಿದೆ. ಇದೆ ಈ ಬಗೆಗಿನ ಅನುಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ದೇಶದಲ್ಲಿ ಈ ಹಿಂದೆ ನಡೆದ ಹಗರಣಗಳಲ್ಲಿ ಕಿಕ್ ಬ್ಯಾಕ್ ಮೊತ್ತಗಳು ರೌಂಡ್ ಫಿಗರ್ಗಳಾಗಿರಲಿಲ್ಲ. ಈ ರೌಂಡ್ ಫಿಗರ್ಗಳು ಮಕ್ಕಳ ಕಲ್ಪನೆಯಿಂದ ಹೊರಬಂದವು ಎಂದೆನಿಸುತ್ತದೆ.
5. ಕ್ಯಾರವಾನ್ ಬಳಸಿರುವ ಡೈರಿ ಎಂಟ್ರಿಗಳು ಬಿಜೆಪಿ ನಾಯಕರ ಹೆಸರನ್ನು ಸ್ಪಷ್ಟವಾಗಿ ಬಳಸಿದೆ. ಆದರೆ ಕಿಕ್ ಬ್ಯಾಕ್ ಕೊಡಲಾದ ಜಡ್ಜ್ ಹೆಸರನ್ನು ಹೇಳಿಲ್ಲ. ನ್ಯಾಯಾಂಗದ ಕೆಂಗಣ್ಣಿನಿಂದ ಪಾರಾಗಿ ಕೇವಲ ರಾಜಕೀಯ ಬೇಳೆ ಬೇಯಿಸಲು ತಯಾರಿಸಿದ ವರದಿ ಇದೆಂದು ಅನಿಸುತ್ತದೆ. ಈ ಹಿಂದೆಯೂ ನ್ಯಾಯಾಂಗ ಹಲವಾರು ಪ್ರಕರಣಗಳಲ್ಲಿ ಡೈರಿ ಎಂಟ್ರಿಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ನಿರಾಕರಿಸಿದೆ.
6. ಕೆಲವೊಂದು ಕಡೆ ಬಳಸಲಾಗಿರುವ ಯಡಿಯೂರಪ್ಪನವರ ಸಹಿಗಳು ಅವರ ನೈಜ ಸಹಿಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಹಲವಾರು ಮಂದಿ ಹೇಳಿದ್ದಾರೆ. ಇದು ಡೈರಿ ಎಂಟ್ರಿಯ ನಿಖರತೆಯನ್ನು ಮತ್ತಷ್ಟು ಅನುಮಾನಿಸುವಂತೆ ಮಾಡಿದೆ.
7. ಡೈರಿ ಎಂಟ್ರಿಗಳಲ್ಲಿನ ಕೈಬರಹಕ್ಕೂ ಮತ್ತು ನಿಜವಾದ ಕೈ ಬರಹಕ್ಕೂ ಹೋಲಿಕೆಯಾಗುತ್ತಿಲ್ಲ ಎಂಬ ಬಗ್ಗೆ ಕನ್ನಡ ತಿಳಿಯದವನೂ ಅರ್ಥಮಾಡಿಕೊಳ್ಳಬಲ್ಲ.
8. ಈ ಹಿಂದೆಯೂ ವಿವಿಧ ಸಂಸ್ಥೆಗಳು ಏನೂ ಇಲ್ಲದಿದ್ದರೂ ದೊಡ್ಡ ಸಂಗತಿ ಇದೆ ಎಂಬಂತೆ ಬಿಂಬಿಸಿ ವರದಿಗಳನ್ನು ಪ್ರಕಟ ಮಾಡಿವೆ. ನ್ಯಾಯಮೂರ್ತಿ ಲೋಯಾ ಪ್ರಕರಣ ಇದಕ್ಕೆ ಪ್ರಮುಖ ಉದಾಹರಣೆ. ಲೋಯಾ ಅವರ ಸಾವಿನಲ್ಲಿ ಹಲವಾರು ವದಂತಿಗಳನ್ನು, ವಿವಾದಗಳನ್ನು ಹಬ್ಬಿಸುವ ಪ್ರಯತ್ನವನ್ನು ನಡೆಸಲಾಗಿದೆ. ಆದರೆ ಅವೆಲ್ಲವೂ ಠುಸ್ ಎಂದಿದೆ.
ಸಹವಾಸ ದೋಷದ ಪರಿಣಾಮವೋ ಏನೋ ಈ ಡೈರಿ ಪುಟ ಕ್ರಿಯೇಟ್ ಮಾಡಿದವರು ತನ್ನ ಅಧ್ಯಕ್ಷರಂತೆ ಎಷ್ಟು ಪೆದ್ದುಗಳಾಗಿದ್ದರೆಂದರೆ ಅವರಿಗೆ ತಾವು ಸೃಷ್ಟಿಸುತ್ತಿರುವುದು ಪತ್ರವೇ ಅಲ್ಲಾ ಡೈರಿಯ ಬರಹಗಳೇ ಎಂಬುದರ ಬಗ್ಗೆ ಗೊಂದಲ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಇದನ್ನು ಆರಂಭದಲ್ಲಿ, ಯಡಿಯೂರಪ್ಪನವರು ಯಾರಿಗೋ ಬರೆದ ಪತ್ರ ಎಂಬ ರೀತಿಯಲ್ಲಿ ರಚಿಸಲಾಯಿತು. ಆದ್ದರಿಂದ ಒಕ್ಕಣೆಯೊಂದಿಗೆ ಆರಂಭಿಸಿ ಕೊನೆಯಲ್ಲಿ ಸಹಿ ಎಂಬ ರೂಪದಲ್ಲಿ ಕೊನೆಗೊಳಿಸಲಾಯಿತು! ನಂತರ ಕೊನೆ ಗಳಿಗೆಯಲ್ಲಿ ಯಡಿಯೂರಪ್ಪ ಡೈರಿಯಲ್ಲಿ ಬರೆದದ್ದು ಎಂದಾಗಬೇಕು ಎಂಬ ಸೂಚನೆ ಬಂದಿರಬಹುದು.ಅದೇ ಗಡಿಬಿಡಿಯಲ್ಲಿ ಮೊದಲೇ ರಚಿತವಾಗಿದ್ದ ಪತ್ರದ ಪ್ರತಿಯನ್ನೇ ಡೈರಿಯ ರೂಪದಲ್ಲಿ ಮುದ್ರಿಸಲಾದ್ದರಿಂದ ಇಷ್ಟೆಲ್ಲಾ ಎಡವಟ್ಟುಗಳಾಗಿರಬೇಕು ಎಂದೆನಿಸುತ್ತದೆ!ಇಲ್ಲದಿದ್ದರೆ ಯಾರಾದರೂ ದಿನಂಪ್ರತಿ ಬರೆಯುವ ಡೈರಿಯಲ್ಲಿ ಪ್ರತಿ ಪುಟಗಳಲ್ಲೂ ಸಹಿ ಹಾಕುತ್ತಾರೆಯೇ?!
Fake ಮಾಡುವಾಗ ಸಾಮಾನ್ಯ ಜನರಿಗೂ ಇದೊಂದು fake ಎಂದು ಗೊತ್ತಾಗುವ ರೀತಿಯಲ್ಲಿ ಈ ಕಾಂಗ್ರೇಸಿಗರು ಸೃಷ್ಟಿಸುತ್ತಾರೆಂದಾದರೆ ಇವರನ್ನು ಏನೆಂದು ಕರೆಯೋಣ ?
ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಸುಳ್ಳು ವರದಿಗಳು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗೆ ದೊಡ್ಡ ಮಟ್ಟದಲ್ಲಿ ಸವಾಲುಗಳನ್ನು ಒಡ್ಡುತ್ತಿವೆ. ಎಲ್ಲದಕ್ಕೂ ಮುಖ್ಯವಾಗಿ, ಜವಾಬ್ದಾರಿಯುತ ರಾಜಕಾರಣಿಗಳು ನಿಖರವಾದ ಸಾಕ್ಷ್ಯಗಳನ್ನು ಇಟ್ಟುಕೊಂಡು ಇನ್ನೊಬ್ಬರ ಮೇಲೆ ಆರೋಪ ಮಾಡಬೇಕೇ ಹೊರತು ಯಾವುದೋ ಟೊಳ್ಳು ವರದಿಯನ್ನು ಇಟ್ಟುಕೊಂಡಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.