ನವದೆಹಲಿ; ಫೆಬ್ರವರಿ 14ರ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಉದ್ಭವಿಸಿತ್ತು. ಇದೇ ಕಾರಣಕ್ಕೆ ಉಭಯ ದೇಶಗಳ ಜಲ ಗಡಿ ಪ್ರದೇಶದಲ್ಲಿ ಭಾರತೀಯ ನೌಕೆಯು ತನ್ನ ಬಲಿಷ್ಠ ಅಸ್ತ್ರಗಳನ್ನು ನಿಯೋಜನೆಗೊಳಿಸಿತ್ತು. ಈ ಮೂಲಕ ಜಲ ಭಾಗದಲ್ಲಿ ಪಾಕಿಸ್ಥಾನ ಯಾವುದೇ ದುಸ್ಸಾಹಸವನ್ನು ಮಾಡದಂತೆ ತಡೆಗಟ್ಟಿತ್ತು.
ನ್ಯೂಕ್ಲಿಯರ್ ಚಾಲಿತ ದಾಳಿ ಜಲಾಂತಗಾರ್ಮಿಗಳನ್ನು, ಪ್ರಮುಖ ಯುದ್ಧನೌಕೆಗಳನ್ನು, ಮರಿಟೈಮ್ ಏರ್ಕ್ರಾಫ್ಟ್ಗಳನ್ನು ಭಾರತ ಜಲ ಗಡಿಯಲ್ಲಿ ನಿಯೋಜನೆಗೊಳಿಸಿತ್ತು. ಈ ಕಾರಣದಿಂದಾಗಿ ಪಾಕಿಸ್ಥಾನ ನೌಕೆಗೆ ಬಾಲಬಿಚ್ಚಲು ಸಾಧ್ಯವಾಗಲಿಲ್ಲ.
2001ರ ಸಂಸತ್ತು ದಾಳಿಯ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವೆ ಯುದ್ಧ ಸಂಭವಿಸುವ ಸನ್ನಿವೇಶ ಸೃಷ್ಟಿಯಾಗಿತ್ತು. ಈ ವೇಳೆ ನೌಕೆ ’ಆಪರೇಶನ್ ಪರಾಕ್ರಮ್’ನ್ನು ಆಯೋಜನೆಗೊಳಿಸಿತ್ತು, ಆದಾದ ಬಳಿಕ ಈ ವರ್ಷವೇ ನೌಕೆ ಅತೀದೊಡ್ಡ ಪ್ರಮಾಣದಲ್ಲಿ ತನ್ನ ಅಸ್ತ್ರಗಳನ್ನು ಜಲ ಗಡಿಯಲ್ಲಿ ನಿಯೋಜನೆಗೊಳಿಸಿದೆ.
ಭಾರತೀಯ ನೌಕೆಯ ಈ ಕ್ರಮದಿಂದಾಗಿಯೇ, ಪಾಕಿಸ್ಥಾನ ನೌಕೆಗಳು ಬಹಿರಂಗವಾಗಿ ಸಮುದ್ರದಲ್ಲಿ ತನ್ನ ಪರಾಕ್ರಮವನ್ನು ತೋರಿಸದೆ ಬಾಲ ಮುದುರಿಕೊಂಡು ಮಕ್ರಾನ್ ಕರಾವಳಿಯಲ್ಲಿ ನಿಲುಗಡೆಯಾಗಿದ್ದವು ಎನ್ನಲಾಗಿದೆ.
ಈಗಲೂ ಯುದ್ಧ ನೌಕೆಗಳು ಜಲ ಭಾಗದಲ್ಲಿ ನಿಯೋಜನೆಗೊಂಡಿದ್ದು, ಪಾಕಿಸ್ಥಾನದಿಂದ ಎದುರಾಗುವ ಯಾವುದೇ ರೀತಿಯ ಸವಾಲನ್ನು ಎದುರಿಸಲೂ ಸರ್ವ ಸನ್ನದ್ಧವಾದಂತಹ ಸ್ಥಿತಿಯಲ್ಲಿವೆ.
‘ಜಲ ಭಾಗದ ಗಡಿಯಲ್ಲಿ ಭಾರತದ ಪ್ರಾಬಲ್ಯ ಪಾಕಿಸ್ಥಾನವನ್ನು ವಿಚಲಿತಗೊಳಿಸಿದೆ. ಹೀಗಾಗಿ ಅದು ತನ್ನ ನೌಕೆಯನ್ನು ಮಕ್ರಾನ್ ಕರಾವಳಿಯಲ್ಲಿಯೇ ಉಳಿಸಿಕೊಳ್ಳಬೇಕಾಯಿತು, ಅದನ್ನು ಓಪನ್ ಸೀಗೆ ತರುವ ಪ್ರಯತ್ನವನ್ನು ಅದು ಮಾಡಲಿಲ್ಲ’ ಎಂದು ನೌಕೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.