ಮಾತೃಪ್ರೇಮ ಮತ್ತು ರಾಷ್ಟ್ರಪ್ರೇಮ ಪರಸ್ಪರ ಕನ್ನಡಿ ಹಿಡಿಯುವ ಭಾವನೆಗಳು. ನಮ್ಮನ್ನು ಏನೂ ಇಲ್ಲದ ಸ್ಥಿತಿಯಿಂದ ಒಂದಿಷ್ಟು ಇರುವ ಸ್ಥಿತಿಗೆ ತಂದ ತಾಯಿ ಮತ್ತು ದೇಶ ಎಂಬ ಎರಡು ಶಕ್ತಿಗಳನ್ನು ನಿಸ್ವಾರ್ಥವಾಗಿ ಪ್ರೀತಿಸುವುದು ಒಂದು ಸ್ವಾಭಾವಿಕ ಭಾವನೆ. ಶಿಶು ತನ್ನ ಪೋಷಕರಿಗೆ ತೋರಿಸುವ ಪ್ರೀತಿಯ ಹೊರತಾಗಿ ಈ ಜಗತ್ತಿನಲ್ಲಿ ಎಲ್ಲವೂ ಕಲಬೆರಕೆಯೇ ಆಗಿದೆ.
ದೇಶಭಕ್ತಿಯು ಅದೇ ರೀತಿಯ ಭಾವನೆಯಾಗಿದೆ, ಅದು ಕೂಡ ಕಲಬೆರಕೆಯಿಂದ ಮುಕ್ತವಾಗಿದೆ, ಸಂತೋಷದಾಯಕ ಮತ್ತು ಸ್ಪೂರ್ತಿದಾಯಕವಾದ ವರ್ಣಣಾತೀತವಾದ ಭಾವವಾಗಿದೆ. ಅದು ಒಬ್ಬರ ರಾಷ್ಟ್ರೀಯ ಗುರುತಿನೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಒಂದು ಕೊಂಡಿಯಾಗಿದೆ.
ಭಾರತವು ಸ್ವಾಭಾವಿಕವಾಗಿ ದೇಶಭಕ್ತಿಯಿಂದ ಕೂಡಿದ ರಾಷ್ಟ್ರ. ಯಾವುದೇ ಹಸ್ತಕ್ಷೇಪವಿಲ್ಲದ ಭಾರತದಲ್ಲಿ ದೇಶಪ್ರೀತಿಯ ಸ್ವಾಭಾವಿಕ ಹೊರಹೊಮ್ಮುವಿಕೆಯನ್ನು ನಾವೂ ಯಾವಾಗಲೂ ಕಾಣುತ್ತೇವೆ, ಅದು ಕ್ರಿಕೆಟ್ನ ಗೆಲುವೇ ಆಗಲಿ ಅಥವಾ ಯುದ್ಧದ ಗೆಲುವೇ ಆಗಲಿ ಅದನ್ನು ನಾವು ಸಂಭ್ರಮಿಸುತ್ತೇವೆ. ದೇಶಭಕ್ತಿ ಎನ್ನುವುದು ಒಂದು ಹೆಮ್ಮೆ, ಸಂತೋಷದ ಭಾವನೆ. ಆದರೆ ಕೆಲವು ರಾಷ್ಟ್ರದ್ವೇಷಿ ನಕಲಿ ಬುದ್ಧಿಜೀವಿಗಳನ್ನು ಕಂಡಾಗ ಇದಕ್ಕೆ ತದ್ವಿರುದ್ಧದ ಭಾವನೆಗಳೂ ಗೋಚರಿಸುತ್ತವೆ.
ಈ ರಾಷ್ಟ್ರ ದ್ವೇಷಿ ನಕಲಿ ಬುದ್ಧಿಜೀವಿಗಳು ಯಾರು?
ಇವರು ನೈಜ ಭಾರತೀಯ ರಕ್ತವನ್ನು ಹೊಂದಿರುವ ದೇಶದ್ರೋಹಿಗಳಾ? ಇಲ್ಲ ಅದಕ್ಕಿಂತಲೂ ಹೀನರು. ದ್ವೇಷವನ್ನು ಹೊರತುಪಡಿಸಿ ಮತ್ತೇನನ್ನೂ ತಿಳಿಯದವರು. ಭಾರತದ ಅದ್ಭುತ ಸಂಸ್ಕೃತಿ, ರೋಮಾಂಚಕ ಮತ್ತು ವೈವಿಧ್ಯಮಯ ಸಂಪ್ರದಾಯಗಳ ಬಗ್ಗೆ ಇವರಿಗೆ ದ್ವೇಷವಿದೆ. ಅವರು ಶ್ರೀರಾಮನನ್ನು ಸ್ತ್ರೀದ್ವೇಷಿ ಎಂದು ಜರೆಯುತ್ತಾರೆ. ಕೃಷ್ಣ ಕಲ್ಪನೆ ಎನ್ನುತ್ತಾರೆ. ರಾಮಾಯಣ ಮತ್ತು ಮಹಾಭಾರತಗಳನ್ನು ಕಾಲ್ಪನಿಕ ಜಾನಪದ ಕಥೆಗಳು ಎನ್ನುತ್ತಾರೆ. ಅವರು ನಮ್ಮ ದೇವರನ್ನು ಅಪಹಾಸ್ಯ ಮಾಡುತ್ತಾರೆ. ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ ಭಯೋತ್ಪಾದಕನಂತೆಯೇ ನಮ್ಮನ್ನು ಹಸುವಿನ ಮೂತ್ರ ಕುಡಿಯುವವರು ಎಂದು ವ್ಯಂಗ್ಯಮಾಡುತ್ತಾರೆ.
ಅವರು ಇಂದು ನಮ್ಮ ಸಮಾಜವನ್ನು ಆಕ್ರಮಿಸಿಕೊಂಡಿದ್ದಾರೆ. ನಮ್ಮ ಇತಿಹಾಸ ಪುಸ್ತಕಗಳನ್ನು ತಿರುಚಿದ್ದಾರೆ. ನಮ್ಮನ್ನು ಬುದ್ದಿಹೀನರು, ಕಂದು ಗುಲಾಮರು ಎಂದು ಬ್ರ್ಯಾಂಡ್ ಮಾಡಿದ್ದಾರೆ. ನಮ್ಮ ಬಗ್ಗೆ ನಾವೇ ಅನುಕಂಪ ವ್ಯಕ್ತಪಡಿಸುವಂತೆ ಮಾಡಿದ್ದಾರೆ. ಆದರೆ ಹಿಂದೂ ಪುನರುಜ್ಜೀವನದ 2014ರ ಸಂದರ್ಭ ಎಲ್ಲವನ್ನೂ ಬದಲಾಯಿಸಿದೆ. ಸಮಾಜವಾಗಿ ನಾವು ಮತ್ತೆ ಹೋರಾಡುತ್ತಿದ್ದೇವೆ ಮತ್ತು ಗುಲಾಮಗಿರಿಯ ಸಂಕೋಲೆಗಳನ್ನು ಮುರಿದುಬಿಟ್ಟಿದ್ದೇವೆ. ನಾವು ನಮ್ಮ ನಿಜವಾದ ನಾಯಕರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ.
ಭಾರತ ಕೇವಲ ಮೊಘಲರು ಮತ್ತು ಗಾಂಧಿ ನೆಹರು ಸಾಮ್ರಾಜ್ಯಕ್ಕೆ ಸೇರಿದ್ದಾಗಿದೆ ಎಂಬುದಾಗಿ ನಮಗೆ ಹೇಳಿಕೊಡಲಾಗಿತ್ತು. ಇದು ನಿಜವಾಗಿಯೂ ಸಾಧ್ಯವೇ?
10,000 ವರ್ಷದ ಹಳೆಯ ನಾಗರಿಕತೆಯು ವೀರರನ್ನು ಹೊಂದಿರದೇ ಇರಲು ಸಾಧ್ಯವೇ? ಮತ್ತೆ ಇವರು ಹೇಳಿಕೊಟ್ಟದ್ದೇನು? ಇದು ವಸಾಹತುಶಾಹಿಗಳ ಹಳೆಯ ನಿಯಮವಾಗಿದೆ. ರಾಜನನ್ನು ನಾಶಮಾಡಿ, ಆತನ ಸಾಮ್ರಾಜ್ಯವನ್ನು ಸುಟ್ಟು ಬಿಡಿ, ಸಂಸ್ಕೃತಿಯನ್ನು ನಾಶ ಮಾಡಿ, ಪದ್ಧತಿಯನ್ನು ಅಪಹಾಸ್ಯ ಮಾಡಿ ಮತ್ತು ಅಂತಿಮವಾಗಿ ಅವರ ಬಗ್ಗೆಯೇ ಅವರಿಗೆ ಕೀಳರಿಮೆ ಬರುವಂತೆ ಮಾಡಿ. ಜನರಿಗೆ ತಮ್ಮ ಸಮಾಜದ ಬಗ್ಗೆ ಹತಾಶೆಯ ಭಾವನೆ ಬರುವಂತೆ ಮಾಡುವುದು ಬ್ರಿಟಿಷರ ಹಳೇ ನಿಯಮವಾಗಿತ್ತು. ಅದನ್ನೀಗ ಭಾರತದಲ್ಲಿ ನಕಲಿ ಬುದ್ಧಿಜೀವಿ ರಾಷ್ಟ್ರ ದ್ವೇಷಿಗಳು ಪಾಲನೆ ಮಾಡುತ್ತಿದ್ದಾರೆ.
ಇದು ಹೊಸದೆ? ತುಂಬಾ ಹಿಂದಿನದಲ್ಲ, ಇದು ವಸಾಹತುಶಾಹಿಯ ಮೂಲಭೂತ ಅಂಶವಾಗಿದೆ. ವಸಾಹತುಶಾಹಿ ಭೌತಿಕ ಪರಾಕ್ರಮ ಮತ್ತು ಯುದ್ಧದ ಮೇಲೆ ಮಾತ್ರ ಕೆಲಸ ಮಾಡುವುದಿಲ್ಲ. ಮಾನಸಿಕ ಯುದ್ಧದ ಮೂಲಕ ದೈಹಿಕ ಯುದ್ಧವನ್ನೂ ನಿಯಂತ್ರಿಸುತ್ತದೆ.
ಪ್ರೇರಣೆಯ ಕೊರತೆ, ಹತಾಶೆ, ಕರುಣೆ ಮತ್ತು ಸ್ವಯಂ ದ್ವೇಷದ ಭಾವನೆಗಳು ವಿಶ್ವದ ಅತ್ಯುತ್ತಮ ಸೈನ್ಯವನ್ನು ನಾಶಪಡಿಸುವ ಭಾವನೆಗಳಾಗಿವೆ. ವಿಯೆಟ್ನಾಂನ ಕೈಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಕಹಿಯಾದ ಹೊಡೆತವನ್ನು ಅನುಭವಿಸಿದ್ದು ಇದಕ್ಕೊಂದು ಪರಿಪೂರ್ಣ ಉದಾಹರಣೆಯಾಗಿದೆ.
ಈ ದೀರ್ಘಕಾಲದ ರಾಷ್ಟ್ರದ್ವೇಷ ಭಾರತಕ್ಕೆ ಹೊಸದೇನಲ್ಲ
ಅಧಿಕಾರದ ದಾಹ ಮತ್ತು ಸಾಂಸ್ಕೃತಿಕ ದ್ವೇಷವು ಜೈಚಂದ್ ಮತ್ತು ಮಿರ್ ಜಾಫರ್ನಂತಹ ಪ್ರಸಿದ್ಧ ದ್ರೋಹಿಗಳನ್ನು ನೀಡಿದೆ ಎಂಬುದನ್ನು ನಾವು ಮರೆಯಬಾರದು.
ಅಲ್ಪ ಕಾಲದ ಪ್ರಯೋಜನಕ್ಕಾಗಿ ಈ ದೂರದೃಷ್ಟಿಹೀನ ಜನರು ದೇಶದ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದರು.
ಸಾಮಾನ್ಯ ಮಾತಿನಲ್ಲಿ ಈ ದೀರ್ಘಕಾಲದ ರಾಷ್ಟ್ರದ್ವೇಷಿಗಳು ಅಥವಾ ನಕಲಿ ಉದಾರವಾದಿಗಳು ಕೆಲವು ಸರ್ವೋತ್ಕೃಷ್ಟ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಅವರು ತಮ್ಮ ದೋಷಪೂರಿತ ತರ್ಕವನ್ನು ಪುನರಾವರ್ತಿಸುತ್ತಲೇ ಇದ್ದಾರೆ. ಅವರ ಆಶಯ ಎಂದಿಗೂ ಈಡೇರಿಲ್ಲ, ಅವರ ತರ್ಕದ ಪುನರಾವರ್ತನೆಯು ಅವರ ಅಸಂಬದ್ಧತೆಯನ್ನು ಹೆಚ್ಚಿಸುತ್ತಿದೆ. ಅವುಗಳಲ್ಲಿ ಕೆಲವು ಇಲ್ಲಿವೆ.
1) ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಆದರೆ ಅತ್ಯಾಚಾರಕ್ಕೆ ಧರ್ಮವಿದೆ. (ಭಾರತ ಶೇಕಡಾವಾರು ಕಡಿಮೆ ಅತ್ಯಾಚಾರ ಪ್ರಕರಣವನ್ನು ಹೊಂದಿದ್ದರೂ).
2) ಗೋಮಾಂಸವನ್ನು ತಿನ್ನುವುದು ಆಧುನಿಕತೆಯ ಲಿಟ್ಮಸ್ ಪರೀಕ್ಷೆ ಇದ್ದಂತೆ.
3) ಭಾರತೀಯ ಸೇನೆಯು ಕಾಶ್ಮೀರದಲ್ಲಿ ಆಕ್ರಮಣಕಾರರಾಗಿದೆ ಮತ್ತು ಕಾಶ್ಮೀರದಲ್ಲಿ ಜನಾಭಿಪ್ರಾಯವನ್ನು ಪಡೆಯಬೇಕು.
4) ಪಾಕಿಸ್ತಾನ ಸಂತರ ಭೂಮಿ. ಶಾಂತಿಯುತ ರಾಷ್ಟ್ರ.
5) ವಿಶ್ವದಲ್ಲಿಯೇ ಭಾರತದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ವೇಗವಾಗಿ ಏರಿಕೆಯಾಗದಿದ್ದರೂ ಕೂಡ ಭಾರತ ಒಂದು ಅಸಹಿಷ್ಣುತೆಯ ಭೂಮಿಯಾಗಿದೆ.
6) ಪುಷ್ಟೀಕರಿಸುವ ಘಟನೆಗಳು ನಡೆಯದಿದ್ದರೂ ಹಿಂದೂ ಭಯೋತ್ಪಾದನೆ ಇದೆ.
7) ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರಿಗೆ ವಿಮೋಚನೆಯಾಗಿದೆ, ಆದರೆ 100 ವರ್ಷಗಳ ಹಿಂದೆಯೇ ನಿರ್ಮೂಲನೆಗೊಂಡಿದ್ದರೂ ಸತಿ ಇಂದಿಗೂ ಸತಿ ಪದ್ಧತಿ ಒಂದು ದೊಡ್ಡ ಪಿಡುಗು.
8) ಶಬರಿಮಲೆ ಮಹಿಳೆಯರ ದಬ್ಬಾಳಿಕೆಯನ್ನು ಪ್ರಚೋದಿಸುತ್ತದೆ, ಆದರೆ ತ್ರಿವಳಿ ತಲಾಖ್ ಅಲ್ಲ.
9) ದೀಪಾವಳಿಯಲ್ಲಿ ಪಟಾಕಿಗಳನ್ನು ಸ್ಫೋಟಿಸುವುದು ಮಾಲಿನ್ಯವನ್ನು ಉಂಟು ಮಾಡುತ್ತದೆ, ಆದರೆ ಹೊಸ ವರ್ಷಕ್ಕೆ ಹೊಡೆಯುವ ಪಟಾಕಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
10) ನವರಾತ್ರಿ ಶಬ್ದಮಾಲಿನ್ಯವನ್ನು ಹೆಚ್ಚಿಸುತ್ತದೆ ಆದರೆ ಉಳಿದೆಲ್ಲವು ಕಿವಿಗೆ ಸಂಗೀತದಂತೆ ಕೇಳುತ್ತದೆ.
ಈ ನಕಲಿ ಉದಾರವಾದಿಗಳ ಬೂಟಾಟಿಕೆಯು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ, ಇವರು ಇವರ ಗುಂಪಿನಲ್ಲಿ ಮಾತ್ರ ಬುದ್ಧಿವಂತರು ಎನಿಸಿಕೊಂಡಿದ್ದಾರೆ. ಅವರು ಬಲೂನ್ಗಳಲ್ಲಿ ಸೀಮನ್ಗಳನ್ನು ಕಾಣುತ್ತಾರೆ ಮತ್ತು ಅದನ್ನು ಹಿಂದೂ ಹೆಮ್ಮೆ ಎಂದು ಕರೆಯುತ್ತಾರೆ, ರಾಮಾಯಣ ಅಫಘಾನಿಸ್ತಾನದಲ್ಲಿ ಸಂಭವಿಸಿದೆ ಎನ್ನುತ್ತಾ ಲೇಖನಗಳನ್ನು ಬರೆಯುತ್ತಾರೆ. ಇಮ್ರಾನ್ ಖಾನ್ (ಉಳಿದ ಜಗತ್ತು ಇವರನ್ನು ಪ್ರೀತಿಯಿಂದ ತಾಲಿಬಾನ್ ಖಾನ್ ಎಂದು ಕರೆಯುತ್ತದೆ) ವಿಶ್ವದ ಅತಿ ದೊಡ್ಡ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದರೂ ಇವರಿಗೆ ದೊಡ್ಡ ಸಂಭಾವ್ಯ ರಾಜಕಾರಣಿಯಾಗಿ ಕಾಣುತ್ತಾರೆ, ರಾಷ್ಟ್ರೀಯ ಭದ್ರತೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ, ಆದರೆ ಭಯೋತ್ಪಾದಕರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ, ದೈನಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಬಳಿಕ ತಾವೇ ಟ್ರೋಲ್ಗಳ ಬಲಿಪಶುಗಳು ಎಂದು ಕೂಗುತ್ತಾರೆ.
ಅವರ ಮೋಸಗಳನ್ನು ಅರಿತುಕೊಳ್ಳದೇ ಇರುವುದು ನಮ್ಮ ತಪ್ಪು. ಈ ಜನರು ನಮ್ಮನ್ನು ಅಸ್ಥಿರಗೊಳಿಸಲು, ನಮ್ಮನ್ನು ನಿರುತ್ಸಾಹಗೊಳಿಸಲು ಗೆರಿಲ್ಲಾ ತಂತ್ರವನ್ನು ಅನುಸರಿಸುತ್ತಿದ್ದಾರೆ. ಅವರು ಮತ್ತೆ ಮರಳುತ್ತಿದ್ದಾರೆ ಈ ಬಗ್ಗೆ ನಾವೀಗ ಚಿಂತೆ ಮಾಡಬೇಕಾಗಿದೆ. ಅವರು ನಮ್ಮನ್ನು ದುರ್ಬಲಗೊಳಿಸುವುದಕ್ಕಾಗಿಯೇ ಹಿಂದಿರುಗುತ್ತಿದ್ದಾರೆ. ನಮ್ಮನ್ನು ಮತ್ತೆ ನಿರುತ್ಸಾಹಗೊಳಿಸಲು ಅವರು ಬರುತ್ತಿದ್ದಾರೆ. ನಾವು ಯುದ್ಧವನ್ನು ಸೋಲುತ್ತಿದ್ದೇವೆ ಎಂಬುದನ್ನು ನಮಗೆ ನಂಬಿಸಲು ಈ ಎರಡು ಮುಖದ ಜನರು ಮತ್ತೆ ಪ್ರಯತ್ನಿಸುತ್ತಿದ್ದಾರೆ. ಅವರ ಕುತಂತ್ರದಲ್ಲಿ ನಂಬಿಕೆ ಇಡಬೇಡಿ, ಅವರನ್ನು ಗುರುತಿಸಿ ಮತ್ತು ಬಹಿರಂಗಪಡಿಸಿ.
ಇದು ಒಂದುಗೂಡುವ ಸಮಯ ಮತ್ತು ಶತ್ರುಗಳನ್ನು ನಾಶಮಾಡುವ ಸಮಯ. ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯು ಗಡಿಪ್ರದೇಶದಲ್ಲಿ ನಿಯಮಿತವಾಗಿ ಹೋರಾಡುತ್ತಾ, ದೇಶವನ್ನು ಕಾಯುತ್ತಾ ನಾವು ಶಾಂತಿಯಿಂದ ನಿದ್ರಿಸುವಂತೆ ಮಾಡುತ್ತಿದ್ದಾರೆ. ನಾವು ನಮ್ಮೊಳಗೆ ಬಹುಮುಖ್ಯವಾಗಿ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಈ ನಕಲಿ ಬುದ್ಧಿಜೀವಿಗಳನ್ನು ಗುರುತಿಸಲು ಮತ್ತು ಅವರನ್ನು ಅವಾಸ್ತವವನ್ನಾಗಿಸಲು ನಾವು ಸಮರ್ಥರಿದ್ದೇವಾ ಎಂಬುದು. ಯುದ್ಧವನ್ನು ದೈಹಿಕ ಹೋರಾಟಕ್ಕಿಂತ ಹೆಚ್ಚಾಗಿ ಮಾನಸಿಕ ಹೋರಾಟದ ಮೂಲಕ ಗೆಲ್ಲಲಾಗುತ್ತದೆ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು.
ನಕಲಿ ಬುದ್ಧಿಜೀವಿಗಳ ಮುಖವಾಡ ಕಳಚಿದ ದಿನ ನಾವು ನಿಜವಾದ ಯುದ್ಧವನ್ನು ಗೆಲ್ಲುತ್ತೇವೆ.
source: opindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.