ಇಂದಿನ ಯುಗದಲ್ಲಿ, ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಡೆಯುವುದು ಒಂಥರಾ ಖುಷಿಯ ಅಚ್ಚರಿ. ವೇತನವಾಗಲಿ ಅಥವಾ ಸ್ನೇಹಿತರ ಮತ್ತು ಸಂಬಂಧಿಗಳ ಉಡುಗೊರೆಯಾಗಲಿ ನೇರ ಹಣ ವರ್ಗಾವಣೆ ಅತ್ಯಂತ ಶ್ಲಾಘನೀಯ ಕಾರ್ಯವಾಗಿರುತ್ತದೆ. ಪರೋಕ್ಷವಾಗಿ ವಿವಿಧ ರೀತಿಯಲ್ಲಿ ಹಣ ಪಡೆಯುವುದು ಅಷ್ಟೊಂದು ಸಮಂಜಸವಲ್ಲ.
ಕೆಲವು ಸಮಯಗಳಿಂದ ಸರ್ಕಾರ ಮಧ್ಯಮ ವರ್ಗದ ಜನರಿಗಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ಜನಸಂಖ್ಯೆಯ ಹೆಚ್ಚಿನ ಪಾಲನ್ನು ಹೊಂದಿರುವ ದೇಶದ ಮಧ್ಯಮ ವರ್ಗಕ್ಕೆ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ನೇರ ಹಣ ವರ್ಗಾವಣೆಯಿಂದ ಹಿಡಿದು ಮಧ್ಯಮವರ್ಗಗಳ ಅನುಕೂಲಕ್ಕಾಗಿಯೇ ಹಲವಾರು ಯೋಜನೆಗಳನ್ನು ತರಲಾಗಿದೆ.
ಮಧ್ಯಮವರ್ಗದ ಅನುಕೂಲಕ್ಕಾಗಿ ಇತ್ತೀಚಿಗೆ ತೆಗೆದುಕೊಂಡ ದೊಡ್ಡ ಕ್ರಮವೆಂದರೆ ತೆರಿಗೆಯಲ್ಲಿ ವಿನಾಯಿತಿ. 2019-10ರ ಬಜೆಟ್ನಲ್ಲಿ ವಾರ್ಷಿಕ ರೂ.5 ಲಕ್ಷದವರೆಗೆ ಆದಾಯವಿರುವವರು ತೆರಿಗೆಯನ್ನು ಕಟ್ಟಬೇಕಾಗಿಲ್ಲ. ಇದು ಮಧ್ಯಮವರ್ಗದ ಪರವಾಗಿ ಮೋದಿ ಸರ್ಕಾರ ತೆಗೆದುಕೊಂಡ ದೊಡ್ಡ ಕ್ರಮವಾಗಿ ಕಂಡು ಬರುತ್ತದೆ, ಆದರೆ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿಯಾದ ಹೆಜ್ಜೆಗಳನ್ನು ಭಾರತ ಮಧ್ಯಮವರ್ಗದವರ ಪರವಾಗಿ ತೆಗೆದುಕೊಂಡಿದೆ. ಜಿಎಸ್ಟಿಯ ಪರಿಚಯ ಈ ನಿಟ್ಟಿನಲ್ಲಿನ ಒಂದು ದೊಡ್ಡ ಕ್ರಮವಾಗಿದೆ. ಇದರಿಂದ ತೆರಿಗೆಗಳು ಗಣನೀಯವಾಗಿ ಇಳಿಕೆಯಾಗಿದ್ದು, ಜನರ ಪಾಕೆಟ್ನಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತಿದೆ. ಹಣದುಬ್ಬರದಲ್ಲೂ ಇದರ ಪ್ರಭಾವ ಎದ್ದು ಕಾಣುತ್ತಿದ್ದು, 2019ರ ಜನವರಿಯಲ್ಲಿ ಶೇ. 2 ರಷ್ಟು ಹಣದುಬ್ಬರವಿತ್ತು. ಯುಪಿಎ ಅವಧಿಯಲ್ಲಿ ಶೇ. 10 ರಷ್ಟು ಇತ್ತು.
ಮಧ್ಯಮವರ್ಗದವರಿಗೆ ಮತ್ತೊಂದು ಪ್ರಯೋಜನಕಾರಿ ಮಾತ್ರವಲ್ಲ, ಸ್ಪೂರ್ತಿದಾಯಕ ಹಾಗೂ ಮಹತ್ವಾಕಾಂಕ್ಷೆಯ ಯೋಜನೆಯೆಂದರೆ ಅದು ಸ್ಟಾರ್ಟ್ಅಪ್ ಇಂಡಿಯಾ. ಭಾರತದಲ್ಲಿ ಸ್ಟಾರ್ಟ್ಅಪ್ ಬ್ಯುಸಿನೆಸ್ನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದರಡಿಯಲ್ಲಿ ಜನರಿಗೆ ಉದ್ದಿಮೆ ಆರಂಭಿಸಲು ಸಾಲವನ್ನು ನೀಡಲಾಗುತ್ತಿದೆ. ಸರ್ಕಾರಕ್ಕೆ ತನ್ನ ಜನರ ಮೇಲೆ ಎಷ್ಟು ನಂಬಿಕೆ ಇದೆ ಎಂಬುದನ್ನು ಮತ್ತು ಅವರ ಪ್ರಗತಿಗೆ ಎಷ್ಟು ಬೆಂಬಲ ನೀಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. 59 ನಿಮಿಷದಲ್ಲಿ ಸಾಲವನ್ನು ಮಂಜೂರು ಮಾಡುವುದರಿಂದ ಮಧ್ಯಮವರ್ಗದ ಜನರ ಬೆಳವಣಿಗೆಗೆ ಸರ್ಕಾರ ಎಷ್ಟು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಸರ್ಕಾರದ ಸಾಕಷ್ಟು ಯೋಜನೆಗಳು ಬಿಪಿಎಲ್ ಜನರನ್ನೇ ಅಥವಾ ಶ್ರೀಮಂತರನ್ನೇ ಟಾರ್ಗೆಟ್ ಮಾಡಿದೆ ಎಂಬಂತೆ ಗೋಚರಿಸುತ್ತದೆ. ಆದರೆ ಮಧ್ಯಮ ವರ್ಗದ ಜನರ ಕಲ್ಯಾಣಕ್ಕೂ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಆಯುಷ್ಮಾನ್ ಯೋಜನೆಯೂ ಒಂದು. 50 ಕೋಟಿ ಜನರನ್ನು ಇದು ಒಳಗೊಳ್ಳುತ್ತದೆ. ಭಾರತದ ಇಡೀ ಆರೋಗ್ಯ ಸನ್ನಿವೇಶವನ್ನೇ ಈ ಯೋಜನೆ ಬದಲಾಯಿಸುತ್ತಿದೆ. ಜನರ ಮೇಲೆ ಏಕಾಏಕಿ ಬೀಳುವ ಆರ್ಥಿಕ ಒತ್ತಡವನ್ನು ಇದು ತಗ್ಗಿಸುತ್ತದೆ. ದೇಶದ ಜನರಿಗೆ ಸಹಾಯಕವಾಗುವುದು ಮಾತ್ರವಲ್ಲ, ವಿಶ್ವದ ಅತೀ ದೊಡ್ಡ ಆರೋಗ್ಯ ಸೇವೆ ಎಂಬ ದಾಖಲೆಯನ್ನೂ ಇದು ಬರೆದಿದೆ. ಆಯುಷ್ಮಾನ್ ಭಾರತ್ (ಅಮೃತ್ ಯೋಜನೆಯೊಂದಿಗೆ 202 ಕ್ಯಾನ್ಸರ್, 186 ಕಾರ್ಡಿವೋಸ್ಕ್ಯುಲರ್ ಡ್ರಗ್ಸ್ ಮತ್ತು 148 ಕಾರ್ಡಿಯಾಕ್ ಇಂಪ್ಲಾಟ್ ಔಷಧಿಗಳನ್ನು ಕೈಗೆಟಕುವ ದರಕ್ಕೆ ನೀಡುತ್ತಿದೆ) ಭಾರತದ ಆರೋಗ್ಯ ಸೇವೆಯನ್ನು ಅತ್ಯಂತ ಅಗ್ಗ ಮಾಡಿದೆ. ಬಡವರಿಗೆ ಮಾತ್ರವಲ್ಲ ಮಧ್ಯಮವರ್ಗದವರಿಗೂ ಇದು ಅತ್ಯಂತ ಸಹಕಾರಿಯಾಗಿದೆ.
ಸರ್ಕಾರದ ಮೇಲಿನ ಜನರ ವಿಶ್ವಾಸವನ್ನು ಮರು ನಿರ್ಮಾಣ ಮಾಡಲು, ಕೇಂದ್ರ ಸರ್ಕಾರ ಪಿಎಂ ಆವಾಸ್ ಯೋಜನಾ-ಅರ್ಬನ್ನನ್ನು ಆರಂಭಿಸಿ ವಸತಿಗಳನ್ನು ನಿರ್ಮಾಣ ಮಾಡುತ್ತಿದೆ. ಸರ್ಕಾರ ಜನರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಅವರ ತಲೆ ಮೇಲೊಂದು ಸೂರು ಇರುವಂತೆ ಮಾಡಿದೆ. ಇದರೊಂದಿಗೆ, ಭೂಮಿಯ ಮಾಲಿಕತ್ವ ವಿಷಯದಲ್ಲಿ ಜನರಿಗೆ ಯಾವುದೇ ಮೋಸಗಳು ಆಗಬಾರದು ಎಂಬ ಕಾರಣಕ್ಕೆ, ಮನೆಗಳ ನಿರ್ಮಾಣದಲ್ಲಿ ಬಿಲ್ಡರ್ ಜೊತೆ ಜೊತೆಗೆ ಕಾರ್ಯನಿರ್ವಹಿಸಲು ಸರ್ಕಾರ ರಿಯಲ್ ಎಸ್ಟೇಟ್ ರೆಗ್ಯುಲೇಶನ್ ಆ್ಯಂಡ್ ಡೆವಲಪ್ಮೆಂಟ್ ಕಾಯ್ದೆಯನ್ನು ತಂದಿದೆ. ಈ ಕಾಯ್ದೆಯಡಿ, ರಿಯಲ್ ಎಸ್ಟೇಟ್ನ ಇಡೀ ಕಾರ್ಯವನ್ನೇ ಅತ್ಯಂತ ಪಾರದರ್ಶಕವಾಗಿ ಮಾಡಲಾಗಿದೆ. ಸುಳ್ಳು ಹೇಳಿ ಜನರಿಗೆ ಮೋಸ ಮಾಡಲು ಯಾವುದೇ ಬಿಲ್ಡರ್ಗಳು ಸಾಧ್ಯವಾಗುವುದಿಲ್ಲ.
ಆಧುನೀಕರಣ ಮತ್ತು ಜೀವನಶೈಲಿ ಬದಲಾವಣೆಯ ವಿಷಯವನ್ನು ಗಮನದಲ್ಲಿಟ್ಟುಕೊಂಡು ಉಡಾನ್ ಯೋಜನೆ ಮತ್ತು ಭೀಮ್/ಯುಪಿಐ ಅಪ್ಲಿಕೇಶನ್ಗಳನ್ನು ಆರಂಭಿಸಲಾಗಿದೆ. ಇದು ಆಧುನಿಕ ಮತ್ತು ತಂತ್ರಜ್ಞಾನದ ಅಗತ್ಯತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲ ಜನರ ದೈನಂದಿನ ಜೀವನ ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತಿದೆ. ಇದು ಕನೆಕ್ಟಿವಿಟಿಯನ್ನು ವೃದ್ಧಿಸುತ್ತದೆ ಮತ್ತು ವಾಯುಯಾನವನ್ನು ಅಗ್ಗಗೊಳಿಸಿದೆ, ಈ ಯೋಜನೆಯಡಿ 44 ವಿಮಾನನಿಲ್ದಾಣಗಳು ಕಾರ್ಯಾಚರಿಸುತ್ತಿವೆ ಮತ್ತು 33 ನಿರ್ಮಾಣ ಹಂತದಲ್ಲಿವೆ.
ಭೀಮ್/ಯುಪಿಐ ಡಿಜಿಟಲ್ ವರ್ಗಾವಣೆಯ ಪ್ರಮುಖ ಭಾಗವಾಗಿದ್ದು, ನಗದು ವಹಿವಾಟನ್ನು ಕುಗ್ಗಿಸಲು ನೆರವಾಗಿದೆ. ಇದರಡಿ 2018ರ ಡಿಸೆಂಬರ್ನಲ್ಲಿ ಭೀಮ್ನಲ್ಲಿ ರೂ.7,982 ಕೋಟಿ ವಹಿವಾಟು ಮತ್ತು ಯುಪಿಐನಲ್ಲಿ ರೂ.1,02,595 ಕೋಟಿ ವಹಿವಾಟನ್ನು ನಡೆಸಲಾಗಿದೆ. ನಗದು ವಹಿವಾಟನ್ನು ಕುಗ್ಗಿಸಿದೆ.
ಶಿಕ್ಷಣ ಮತ್ತು ಮನೆ ಮಧ್ಯಮ ವರ್ಗದವರಿಗೆ ಅತ್ಯಂತ ಅಗತ್ಯವಾದವುಗಳಾಗಿವೆ. ಅದೇ ರೀತಿ, ಸಾಲವನ್ನು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಪಡೆಯುವುದು ಅತ್ಯಂತ ಪ್ರಮುಖವಾದದ್ದು. ಆರ್ಬಿಐ ರೆಪೋ ದರವನ್ನು ತಗ್ಗಿಸಿದ್ದು, ಸಾಲಗಾರರಿಗೆ ಸಕಾರಾತ್ಮಕವಾಗಿ ಪರಿಣಮಿಸಿದೆ, ಇದರಿಂದ ಮಧ್ಯಮ ವರ್ಗಗಳ ಮೇಲಿನ ಹೊರೆ ಕಡಿಮೆಯಾಗಿದೆ.
ಹಲವಾರು ಯೋಜನೆಗಳ ಪ್ರಯೋಜನವನ್ನು ಗಮನಿಸಿದರೆ ಸರ್ಕಾರ ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂಬುದು ತಿಳಿದು ಬರುತ್ತಿದೆ. ಮಧ್ಯಮ ವರ್ಗಗಳ ಏಳಿಗೆಗಾಗಿ ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ ಎಂಬುದು ತಿಳಿದು ಬರುತ್ತದೆ.
source: inreportcard
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.