ಭಾರತ ವಿರೋಧಿ ಕುತಂತ್ರಗಳಿಗೆ ಹೆಸರಾಗಿರುವ ಪಾಕಿಸ್ಥಾನಿ ಸೇನೆ ಕೇವಲ ಒಂದು ಶಸ್ತ್ರಾಸ್ತ್ರ ಪಡೆಯಲ್ಲ, ಅದೊಂದು ಪ್ರಬಲ ಉದ್ಯಮ ಸಂಸ್ಥೆಯೂ ಹೌದು. ಪಾಕಿಸ್ಥಾನದ ಸಾಕಷ್ಟು ಸಂಖ್ಯೆಯ ಉದ್ಯಮಗಳು ಆ ದೇಶದ ಮಿಲಿಟರಿಯ ಮಾಜಿ ಉದ್ಯೋಗಿಗಳ ನಿಯಂತ್ರಣದಲ್ಲಿವೆ. ಸರ್ಕಾರದಲ್ಲಿರುವ ತಮ್ಮ ಆಪ್ತರ ಮೂಲಕ ಇವರು ಸರ್ಕಾರದ ಗುತ್ತಿಗೆಗಳನ್ನು ಪಡೆದುಕೊಳ್ಳುತ್ತಾರೆ. ಪಾಕಿಸ್ಥಾನ ಸೇನೆ ಖಾಸಗಿ ಆಸ್ತಿಯ ಮೌಲ್ಯವೇ 20 ಬಿಲಿಯನ್ ಡಾಲರ್ ಇದೆ. ಇದರಲ್ಲಿ 10 ಬಿಲಿಯನ್ ಮೊತ್ತದ ಭೂಮಿಯನ್ನು ಅದು ಹೊಂದಿದೆ, ಇನ್ನು 10 ಬಿಲಿಯನ್ ಇತರ ಆಸ್ತಿಗಳಿವೆ.
ಪಾಕಿಸ್ತಾನದ ಮೂರನೇ ಒಂದರಷ್ಟು ಘನ ಉತ್ಪಾದನಾ ಕೈಗಾರಿಕೆಗಳನ್ನು ಮತ್ತು ಶೇ.7ರಷ್ಟು ಖಾಸಗಿ ಆಸ್ತಿಗಳನ್ನು ಅಲ್ಲಿನ ಸೇನೆ ನಿಯಂತ್ರಿಸುತ್ತದೆ. ಮಿಲಿಟರಿ ಸಿಬ್ಬಂದಿಗಳು ನಡೆಸುವ ಉದ್ಯಮ ಸಂಸ್ಥೆಗಳ ಪ್ರಭಾವ ಎಷ್ಟಿದೆ ಎಂಬುದನ್ನು ಪಾಕಿಸ್ಥಾನ ಮೂಲದ ರಾಜಕೀಯ ವಿಜ್ಞಾನಿ ಆಯೇಶಾ ಸಿದ್ಧಿಕಾ ತಮ್ಮ ಪುಸ್ತಕ ‘ಮಿಲಿಟರಿ ಇಂಕ್: ಇನ್ಸೈಡ್ ಪಾಕಿಸ್ಥಾನ್’ಸ್ ಮಿಲಿಟರಿ ಎಕಾನಮಿ’ಯಲ್ಲಿ ಬರೆದಿದ್ದಾರೆ. ‘1990ರಲ್ಲಿ ಮಿಲಿಟರಿ ಬ್ಯುಸಿನೆಸ್ ಕಾಂಪ್ಲೆಕ್ಸ್ಗಳಿಗೆ ಯಾವ ರಾಜಕೀಯ ಪಕ್ಷದ ಸರ್ಕಾರಗಳೂ ಆಕ್ಷೇಪವನ್ನು ಎತ್ತಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.
ಮಿಲಿಟರಿ ಅಧಿಕಾರಿಗಳು ನಡೆಸುತ್ತಿರುವ ಉದ್ಯಮಗಳಿಗೆ ಅತೀದೊಡ್ಡ ಸಹಾಯಕನೆಂದರೆ, ಫೌಜಿ ಫೌಂಡೇಶನ್, ಶಹೀನ್ ಫೌಂಡೇಶನ್, ಬಹಿರ ಫೌಂಡೇಶನ್, ಆರ್ಮಿ ವೆಲ್ಫೇರ್ ಟ್ರಸ್ಟ್ ಮತ್ತು ಡಿಫೆನ್ಸ್ ಹೌಸಿಂಗ್ ಅಥಾರಿಟಿ.
ಪುಲ್ವಾಮ ದಾಳಿಯ ಬಳಿಕ ಭಾರತ ಪಾಕಿಸ್ಥಾನಕ್ಕೆ ನೀಡಿರುವ ಆಪ್ತರಾಷ್ಟ್ರದ ಸ್ಥಾನವನ್ನು ಹಿಂಪಡೆದುಕೊಂಡಿದೆ ಮತ್ತು ಅಲ್ಲಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇ. 200 ರಷ್ಟು ಹೆಚ್ಚಳ ಮಾಡಿದೆ. ಪಾಕಿಸ್ಥಾನ ನಿವೃತ್ತ ಸೈನಿಕರು ನಡೆಸುತ್ತಿರುವ ಫೌಜಿ ಫೌಂಡೇಶನ್ನ ಉದ್ಯಮ ಸಂಸ್ಥೆ ಭಾರತವನ್ನು ತನ್ನ ರಫ್ತುಗಳ ನೆಚ್ಚಿನ ತಾಣವಾಗಿ ಮಾಡಿಕೊಂಡಿದೆ. ಈ ಸಂಸ್ಥೆ ಫೌಜಿ ಸೆರಿಲ್ಸ್, ಫೌಂಡೇಶನ್ ಗ್ಯಾಸ್, ಫೌಜಿ ಫರ್ಟಿಲೈಝರ್ ಕಂಪನಿ ಲಿಮಿಟೆಡ್, ಫೌಜಿ ಸಿಮೆಂಟ್ ಕೋ ಲಿಮಿಟೆಡ್ನ್ನು ನಡೆಸುತ್ತಿದೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾಗಳಿಗೆ ಇದರ ವಸ್ತುಗಳು ರಫ್ತಾಗುತ್ತದೆ. ಆದರೆ ಈಗ ಭಾರತ ವಿಧಿಸಿರುವ ಹೆಚ್ಚುವರಿ ಸುಂಕದಿಂದಾಗಿ ಫೌಜಿ ಫೌಂಡೇಶನ್ನ ಸಿಮೆಂಟ್ ರಫ್ತಿಗೆ ಸಾಕಷ್ಟು ಹೊಡೆತ ಬೀಳಲಿದೆ. ಭಾರತದಲ್ಲಿನ ಸಿಮೆಂಟ್ಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಇದರಿಂದ ಅಷ್ಟೇನು ದೊಡ್ಡ ನಷ್ಟವಿಲ್ಲ. ಪ್ರತಿ ಬ್ಯಾಗ್ಗೆ ರೂ.10-20 ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ ಫೌಜಿ ಫೌಂಡೇಶನ್ಗೆ ಸಾಕಷ್ಟು ನಷ್ಟವಾಗಲಿದೆ.
ಪಾಕಿಸ್ಥಾನವು ಬೇಲ್ಔಟ್ ಪ್ಯಾಕೇಜ್ಗಾಗಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ಗೆ ಮನವಿ ಮಾಡಿತ್ತು, ಆದರೆ ಅದು ಮಿಲಿಟರಿ ಬ್ಯುಸಿನೆಸ್ನ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಭಾರತ ಈಗ ಹೇರಿರುವ ಭಾಗಶಃ ನಿಷೇಧ, ಪಾಕಿಸ್ಥಾನದ ಮಿಲಿಟರಿ ಉದ್ಯಮ ಸೇರಿದಂತೆ ಅಲ್ಲಿನ ಸಾಕಷ್ಟು ಉದ್ಯಮಗಳ ಮೇಲೆ ನೇರ ಪರಿಣಾಮವನ್ನು ಬೀರಲಿದೆ. ಅಲ್ಲಿನ ಕಲಾವಿದರು, ಹಾಡುಗಾರರನ್ನು ಆಲ್ ಇಂಡಿಯಾ ಸಿನಿ ವರ್ಕ್ರ್ಸ್ ಅಸೋಸಿಯೇಶನ್ ನಿಷೇಧಿಸಿದೆ. ಇವರುಗಳು ಭಾರತಕ್ಕೆ ಬಂದು ಅಭಿನಯಿಸಿ ಪಾಕಿಸ್ಥಾನಕ್ಕೆ ಹೋಗಿ ತೆರಿಗೆ ಕಟ್ಟುತ್ತಾರೆ. ಪಾಕಿಸ್ಥಾನ ಸಾಕಷ್ಟು ಪ್ರಮಾಣದ ಹಣವನ್ನು ಮಿಲಿಟರಿಗೆ ನೀಡುತ್ತದೆ ಮತ್ತು ಈ ಹಣದ ಸಾಕಷ್ಟು ಪ್ರಮಾಣವನ್ನು ಅದು ತನ್ನ ನಟರಿಂದಲೇ ಸಂಗ್ರಹಿಸುತ್ತದೆ. ಈ ನಟರುಗಳು ಬಾಲಿವುಡ್ನಲ್ಲಿ ದುಡಿದು ಈ ಹಣವನ್ನು ಸಂಪಾದಿಸಿರುತ್ತಾರೆ.
ಆರ್ಥಿಕ ಯುದ್ಧ ಯಾವುದೇ ಶತ್ರು ರಾಷ್ಟ್ರವನ್ನು ದುರ್ಬಲಗೊಳಿಸುವ ಒಂದು ಪರಿಣಾಮಕಾರಿಯಾದ ಅಸ್ತ್ರವಾಗಿದೆ. ಈಗಾಗಲೇ ಪಾಕಿಸ್ಥಾನ ಆರ್ಥಿಕವಾಗಿ ದುರ್ಬಲಗೊಂಡಿದೆ, 4 ದಶಕಗಳಲ್ಲಿ ಕನಿಷ್ಠ 13 ಬಾರಿ ಅದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮುಂದೆ ಬೇಲ್ಔಟ್ ಪ್ಯಾಕೇಜ್ಗಾಗಿ ಅಂಗಲಾಚಿದೆ. ಚೀನಾ ಮತ್ತು ಸೌದಿ ಅರೇಬಿಯಾದ ಬೆಂಬಲದ ಹೊರತಾಗಿಯೂ ಪಾಕಿಸ್ಥಾನ ಕೇವಲ 7 ಬಿಲಿಯನ್ ಡಾಲರ್ ವಿದೇಶಿ ವಿನಿಮಯವನ್ನು ಹೊಂದಿದೆ. ಭಾರತ ಸಿಂಧು ನದಿ ಒಪ್ಪಂದವನ್ನು ಹಿಂಪಡೆಯುವುದು ಸೇರಿದಂತೆ ಒಂದಿಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಆ ದೇಶದ ಆರ್ಥಿಕತೆ ಶೀಘ್ರದಲ್ಲೇ ಸಂಪೂರ್ಣ ಕುಸಿದು ಬೀಳಲಿದೆ. ಪಾಕಿಸ್ಥಾನದ ಆರ್ಥಿಕತೆಯಲ್ಲಿ ಕೃಷಿ ಪ್ರಧಾನ ಪಾತ್ರವನ್ನು ವಹಿಸುತ್ತದೆ, ಒಟ್ಟು ಜಿಡಿಪಿಯ ಐದನೇ ಒಂದರಷ್ಟು ಕೃಷಿಯಿಂದಲೇ ಬರುತ್ತಿದೆ. ಒಂದು ವೇಳೆ ಭಾರತ ಸಿಂಧು ನದಿ ಒಪ್ಪಂದವನ್ನು ಹಿಂಪಡೆದರೆ ಪಾಕ್ನ ಕೃಷಿ ಸ್ತಬ್ಧವಾಗಲಿದೆ, ಅಲ್ಲಿನ ಆರ್ಥಿಕತೆ ಕೊಚ್ಚಿ ಹೋಗಲಿದೆ. ಮಿಲಿಟರಿ, ಭಯೋತ್ಪಾದಕರನ್ನು ಸಾಕುವುದು ಬಿಡಿ ತನ್ನ ನಾಗರಿಕರನ್ನು ಸಾಕುವುದೂ ಆ ದೇಶಕ್ಕೆ ಕಷ್ಟವಾಗಲಿದೆ.
source: rightlog.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.