
ನವದೆಹಲಿ: ಭಾರತ ಮತ್ತು ರಷ್ಯಾವನ್ನು ಮತ್ತಷ್ಟು ಹತ್ತಿರ ತಂದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೋಬೆಲ್ ಪುರಸ್ಕಾರ ನೀಡಬೇಕು ಎಂದು ಪೆಂಟಗನ್ನ ಮಾಜಿ ಅಧಿಕಾರಿಯೊಬ್ಬರು ಕೂಹಕವಾಡಿದ್ದಾರೆ.
“ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಖಂಡಿತವಾಗಿಯೂ ನೊಬೆಲ್ ಪ್ರಶಸ್ತಿ ಸಿಗಬೇಕು. ಆದರೆ ಅವರ ಸ್ವಯಂ ಘೋಷಿತ ಶಾಂತಿ ಉಪಕ್ರಮಗಳಿಗಾಗಿ ಅಲ್ಲ, ಬದಲಾಗಿ ತಿಳಿಯದೆ ಭಾರತ ಮತ್ತು ರಷ್ಯಾವನ್ನು ಹತ್ತಿರಕ್ಕೆ ತಂದಿದ್ದಕ್ಕಾಗಿ” ಎಂದು ಮೈಕೆಲ್ ರೂಬಿನ್ ವ್ಯಂಗ್ಯದಿಂದ ಕೂಡಿದ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದ್ದಾರೆ.
ಪುಟಿನ್ ತಮ್ಮ ಎರಡು ದಿನಗಳ ಭಾರತ ಭೇಟಿಯನ್ನು ಮುಗಿಸುತ್ತಿದ್ದಂತೆ ಮಾಜಿ ಪೆಂಟಗನ್ ಅಧಿಕಾರಿ ಟ್ರಂಪ್ ಅವರನ್ನು ಟೀಕಿಸಿದ್ದು, ಟ್ರಂಪ್ ನಡೆ ಸ್ನೇಹಿತರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರೂಬಿನ್, ರಷ್ಯಾ ಅಧ್ಯಕ್ಷರ ಭಾರತ ಭೇಟಿ ಮಾಸ್ಕೋದ ದೃಷ್ಟಿಕೋನದಿಂದ ಅತ್ಯಂತ ಸಕಾರಾತ್ಮಕವಾಗಿ ಕಾಣುತ್ತದೆ. ಭಾರತವು ಪುಟಿನ್ಗೆ ನೀಡಿದ ಗೌರವಗಳು ಸಾಟಿಯಿಲ್ಲದ್ದು ಮತ್ತು ಇದನ್ನು ರೂಪಿಸುವಲ್ಲಿ ಟ್ರಂಪ್ ಅವರ ಪಾತ್ರವನ್ನು ಕಡೆಗಣಿಸಬಾರದು ಎಂದು ಅವರು ಹೇಳಿದ್ದಾರೆ.
“ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ರಷ್ಯಾವನ್ನು ಒಟ್ಟಿಗೆ ತಂದಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ನಾನು ವಾಸ್ತವವಾಗಿ ವಾದಿಸುತ್ತೇನೆ” ಎಂದು ರೂಬಿನ್ ಹೇಳಿದರು.
ಪುಟಿನ್ ಭೇಟಿಯ ಸಮಯದಲ್ಲಿ ಸಹಿ ಹಾಕಲಾದ ಒಪ್ಪಂದಗಳು ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಡೆಸಿಕೊಂಡ ರೀತಿಗೆ ಭಾರತದ ಪ್ರತಿಕ್ರಿಯೆಯಾಗಿದೆ ಎಂದಿದ್ದಾರೆ.
#WATCH | Washington, DC, USA | “Donald Trump deserves a Nobel Prize for bringing India and Russia together the way he did”, says Former Pentagon official Michael Rubin on Russian President Vladimir Putin’s visit to India.
He further says, “From Russia’s perspective, the visit… pic.twitter.com/vYXcVTwP7M
— ANI (@ANI) December 5, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


