5 ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರು, ಕೊಟ್ಟ ಮಾತುಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಿಂದಿನ ಪ್ರಧಾನಿಗಳಿಗಿಂತ ವಿಭಿನ್ನವಾಗಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮತ್ತು ಅದರ ಈಡೇರಿಕೆಯನ್ನು ಅಳೆದು ತೂಗಿ, ಅದನ್ನು ಮೋದಿ ಸರಕಾರದೊಂದಿಗೆ ಹೋಲಿಸಿದರೆ ಕಾಂಗ್ರೆಸ್ನ ನಿರಾಶಾದಾಯಕ ವ್ಯಕ್ತಿತ್ವ ಸ್ಪಷ್ಟವಾಗಿ ತೋರಿಸುತ್ತದೆ. ವಿಶೇಷವೆಂದರೆ, ಕಾಂಗ್ರೆಸ್ ನೀಡಿದ ಭರವಸೆಯನ್ನು ಈಡೇರಿಸುವಲ್ಲೂ ಮೋದಿ ಯಶಸ್ವಿಯಾಗಿದ್ದಾರೆ! ಇದು ನಾವು ಇಂದು ವಾಸಿಸುತ್ತಿರುವ ಭಾರತದ ಮಾದರಿ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ. ಚುನಾವಣೆ ನಂತರ ಮರೆತುಹೋಗುವಂತಹ ಟೊಳ್ಳಾದ ಭರವಸೆಗಳನ್ನು ನೀಡುವ ದಿನಗಳು ಕಳೆದು ಹೋಗಿವೆ. ನುಡಿದಂತೆ ನಡೆಯುವುದು ಮೋದಿ ಸರಕಾರದ ಅತೀ ದೊಡ್ಡ ಮಂತ್ರವಾಗಿದೆ, ಈ ಲೇಖನದ ಮೂಲಕ, ಮೋದಿ ಸರಕಾರದ ಮಹತ್ವದ ಆಯಾಮಗಳ ವಿವರಗಳ ಮೇಲೆ ಬೆಳಕು ಚೆಲ್ಲಲಾಗಿದೆ, ಯುಪಿಎ ಸರಕಾರಗಳಿಗೆ ಹೋಲಿಸಿದರೆ, ಮೋದಿ ಸರ್ಕಾರ ಐದು ವರ್ಷಗಳಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. ಸಾಮಾನ್ಯ ವ್ಯಕ್ತಿಗೆ ಅದರಿಂದ ಹೇಗೆ ಪ್ರಯೋಜನವಾಗಿದೆ, ಬನ್ನಿ ನೋಡೋಣ!
ರೈತರಿಗೆ ನೇರ ವರಮಾನ ಬೆಂಬಲ
2004ರ ಕಾಂಗ್ರೆಸ್ ಪ್ರಣಾಳಿಕೆ ಈ ರೀತಿ ಹೇಳಿದೆ, “ರೈತರಿಗೆ ನೇರ ಬೆಂಬಲ ಅಥವಾ ಆದಾಯದ ಬೆಂಬಲವನ್ನು ಒದಗಿಸುವ ಒಂದು ಕೃಷಿ ಸ್ಥಿರೀಕರಣ ನಿಧಿಯ ಕಾರ್ಯಸಾಧ್ಯತೆಯನ್ನು ಕಾಂಗ್ರೆಸ್ ಪರಿಶೀಲಿಸುತ್ತದೆ’ ಎಂದಿತ್ತು. ಆದರೆ ಇದು ಕೂಡ ಈಡೇರದ ಅವರ ಭರವಸೆಗಳಲ್ಲಿ ಒಂದಾಗಿ ಉಳಿಯಿತು. 2009ರಲ್ಲೂ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅದನ್ನೇ ಮತ್ತೆ ಉಲ್ಲೇಖಿಸಿತ್ತು ಮತ್ತು ನಾನು ’ಭಾರತದ ದುರ್ಬಲ, ಕ್ಲಿಷ್ಟಕರ ಪ್ರದೇಶಗಳಲ್ಲಿನ ರೈತರಿಗೆ ನೇರ ಆದಾಯದ ನೆರವು ಸಾಧ್ಯತೆಗಳನ್ನು ಕಾಂಗ್ರೆಸ್ ಪರಿಶೀಲಿಸುತ್ತದೆ’ ಎಂದು ಹೇಳಿತ್ತು. ಹಿಂದಿನಂತೆಯೇ ಅದು ಕೂಡ ಕಾಗದದಲ್ಲೇ ಉಳಿಯಿತು. ಕಾರ್ಯಗತಗೊಳಿಸುವ ಒಂದಿಷ್ಟು ಪ್ರಯತ್ನಗಳನ್ನೂ ಅದು ಮಾಡಲಿಲ್ಲ. ಸಾಮಾನ್ಯ ಮನುಷ್ಯನಿಗೆ ಕನಸುಗಳನ್ನು ತೋರಿಸುವುದು, ನಂತರ ಅದನ್ನು ಅನುಷ್ಠಾನಕ್ಕೆ ತರದೆ ದ್ರೋಹ ಮಾಡುವ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ.
ಇಂತಹ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯವಿದ್ದುದು ಬಲಿಷ್ಠ ಪ್ರಧಾನಿ, ಈ ದೇಶದ ಸಾಮಾನ್ಯ ಜನರಿಗಾಗಿ ಅವಿರತ ಶ್ರಮಿಸುವ, ಯೋಜನೆಗಳನ್ನು ಸಕಾಲದಲ್ಲಿ ಕಾರ್ಯಗತಗೊಳಿಸುವ ಪ್ರಧಾನಿ. 2019ರ ಮಧ್ಯಂತರ ಬಜೆಟ್ನಲ್ಲಿ, ರೈತರಿಗೆ ನೇರ ಆದಾಯದ ಯೋಜನೆಯನ್ನು ಘೋಷಿಸಲಾಯಿತು, ‘ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಎಂದು ಇದಕ್ಕೆ ಕರೆಯಲಾಯಿತು. ರೈತರಿಗೆ ವರ್ಷಕ್ಕೆ 6,000 ರೂ. ನೀಡುವ ಯೋಜನೆ ಇದಾಗಿದೆ. ಇದರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಬಜೆಟ್ನಲ್ಲಿ ಹಣವನ್ನೂ ಹಂಚಿಕೆ ಕೂಡ ಮಾಡಲಾಗಿದೆ. ಇದೇ ಕಾರಣಕ್ಕೆ, ಮಾತು ಕೊಟ್ಟಂತೆ ನಡೆದುಕೊಳ್ಳದ ಯುಪಿಎಗಿಂತ ಮೋದಿ ಸರ್ಕಾರ ವಿಭಿನ್ನವಾಗಿ ನಿಲ್ಲುತ್ತದೆ.
ಪ್ರತಿ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಕ್ರಮ
2004ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, “ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಪ್ರತಿ ಕುಟುಂಬವು ವಿದ್ಯುತ್ ಪಡೆಯುವುದನ್ನು ಖಚಿತಪಡಿಸಲು ಕಾಂಗ್ರೆಸ್ ವಿಶೇಷ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಿದೆ’ ಎಂದು ಹೇಳಿತ್ತು. ಯುಪಿಎ ಬಂದ ಬಳಿಕ ಮೂರರಿಂದ ಐದು ವರ್ಷಗಳವರೆಗೆ ಬಿಡಿ, 8 ವರ್ಷ ಕಳೆದರೂ ವಿದ್ಯುತ್ ಪ್ರತಿ ಮನೆಯನ್ನೂ ತಲುಪಲಿಲ್ಲ. ಕೊಟ್ಟ ಮಾತನ್ನು ಇಲ್ಲೂ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲಿಲ್ಲ.
ಈ ವಿಷಯದಲ್ಲಿ ಮೋದಿ ಸರಕಾರದ ಸಾಧನೆಯನ್ನು ಗಮನಿಸಿದರೆ ಹೆಮ್ಮೆ ಎನಿಸುತ್ತದೆ. ನುಡಿದಂತೆ ಅದು ನಡೆಯಿತು, ದೇಶದ ಎಲ್ಲಾ ಗ್ರಾಮಗಳು ಈಗಾಗಲೇ ವಿದ್ಯುದೀಕರಣಗೊಂಡಿವೆ ಮತ್ತು 99.9% ರಷ್ಟು ಮನೆಗಳನ್ನು ವಿದ್ಯುತ್ನಿಂದ ಬೆಳಗುತ್ತಿವೆ. ಸ್ವಾತಂತ್ರ್ಯದ ನಂತರ ಯಾವುದೇ ಸರ್ಕಾರ ಮಾಡದ ಶ್ರೇಷ್ಠ ಸಾಧನೆಯನ್ನು ಮೋದಿ ಸರ್ಕಾರ ಇಲ್ಲಿ ಮಾಡಿದೆ. ಅನೇಕ ರಾಜ್ಯ ಸರ್ಕಾರಗಳು ಮತ್ತು ವ್ಯಕ್ತಿಗಳು ಈ ಸಾಧನೆಯನ್ನು ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಒನ್ ರ್ಯಾಂಕ್ ಒನ್ ಪೆನ್ಶನ್
2004 ರ ಕಾಂಗ್ರೆಸ್ ಪ್ರಣಾಳಿಕೆ ಹೀಗೆಂದಿತ್ತು ‘ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಯ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಮತ್ತು ತೃಪ್ತಿಕರ ಪರಿಹಾರವನ್ನು ತ್ವರಿತವಾಗಿ ನೀಡಲಾಗುವುದು’. ಆದರೆ ಕಾಂಗ್ರೆಸ್ ಅವಧಿಯಲ್ಲಿ ಆ ಯೋಜನೆಯನ್ನು ತರುವ ಯಾವ ಪ್ರಯತ್ನವನ್ನೂ ಮಾಡಲಾಗಿಲ್ಲ. ಕೇವಲ ಅದರ ಪ್ರಣಾಳಿಕೆಯಲ್ಲೇ ಆ ಭರವಸೆ ಉಳಿದು ಹೋಯಿತು. ಕೆಲವು ಕಾಂಗ್ರೆಸ್ಸಿಗರಂತು ಈ ಬಗ್ಗೆ ಅಪಹಾಹ್ಯಸವನ್ನೂ ಮಾಡಿದ್ದರು. ಮೋದಿ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈಗಾಗಲೇ ಅದರ ಪ್ರಯೋಜನಗಳನ್ನು ಫಲಾನುಭವಿಗಳಿಗೆ ನೀಡಲು ಪ್ರಾರಂಭಿಸಿದೆ. ಇದು ಮೋದಿ ಸರಕಾರದ ಹಿರಿಮೆಗೆ ಮತ್ತೊಂದು ಗರಿ.
ಜಿಎಸ್ಟಿ ಅಳವಡಿಕೆ
2009 ರ ಕಾಂಗ್ರೆಸ್ ಪ್ರಣಾಳಿಕೆ ‘2010ರ ಏಪ್ರಿಲ್ 1 ರಿಂದ ಸರಕು ಮತ್ತು ಸೇವೆಗಳ ತೆರಿಗೆಯನ್ನು ನಾವು ಪರಿಚಯಿಸುತ್ತೇವೆ’ ಎಂದಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಮೋದಿ ಸರ್ಕಾರವು ಬಲಿಷ್ಠ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಎಲ್ಲಾ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಎಸ್ಟಿ ಅನುಷ್ಠಾನದ ಸಾಧನೆ ಮಾಡಿತು. ಇದನ್ನು ತರಲು ಕಾಂಗ್ರೆಸ್ ವಿಫಲವಾದ ಕಾಂಗ್ರೆಸ್ ಬಿಜೆಪಿ ಅನುಷ್ಠಾನಕ್ಕೆ ತಂದ ಜಿಎಸ್ಟಿಯನ್ನು ಅನೇಕ ಸಂದರ್ಭಗಳಲ್ಲಿ ಟೀಕಿಸಿದೆ. ಹೀಗಾಗಿ ಕಾಂಗ್ರೆಸ್ ಭರವಸೆಗಳನ್ನು ಪೂರೈಸುವುದಿಲ್ಲ ಮಾತ್ರವಲ್ಲ, ಅವುಗಳನ್ನು ಕಾರ್ಯಗತಗೊಳಿಸುವ ಜನರನ್ನು ಟೀಕಿಸುತ್ತದೆ ಕೂಡ. ರಾಹುಲ್ ಗಾಂಧಿ ಜಿಎಸ್ಟಿಯನ್ನು ‘ಗಬ್ಬರ್ ಸಿಂಗ್ ತೆರಿಗೆ’ ಎಂದು ಕೂಡ ವ್ಯಂಗ್ಯವಾಡುತ್ತಿದ್ದಾರೆ.
ಎಲ್ಲಾ ಗ್ರಾಮಗಳನ್ನು ಬ್ರಾಡ್ಬ್ಯಾಂಡ್ ನೆಟ್ವರ್ಕ್ಗೆ ಸಂಪರ್ಕಿಸಲಾಗಿದೆ
2009ರ ಕಾಂಗ್ರೆಸ್ ಪ್ರಣಾಳಿಕೆಯು ’ನಾವು ಮೂರು ವರ್ಷಗಳಲ್ಲಿ ಬ್ರಾಡ್ಬ್ಯಾಂಡ್ ನೆಟ್ವರ್ಕ್ಗೆ ಎಲ್ಲಾ ಹಳ್ಳಿಗಳನ್ನು ಸಂಪರ್ಕಿಸುತ್ತೇವೆ’ ಎಂದು ಹೇಳಿತ್ತು. ಆದರೆ 2014 ರವರೆಗೆ, ಬ್ರಾಡ್ಬ್ಯಾಂಡ್ ನೆಟ್ವರ್ಕ್ಗಳೊಂದಿಗೆ 59 ಗ್ರಾಮಗಳನ್ನು ಮಾತ್ರ ಸಂಪರ್ಕಿಸಲು ಕಾಂಗ್ರೆಸ್ ಸರ್ಕಾರವು ಯಶಸ್ವಿಯಾಗಿತ್ತು. ಆದರೆ 2014 ರ ನಂತರ, ನರೇಂದ್ರ ಮೋದಿ ಸರ್ಕಾರವು ಬಂದ ನಂತರ ಈಗಾಗಲೇ 1.19 ಲಕ್ಷ ಗ್ರಾಮಗಳನ್ನು ಸಂಪರ್ಕಿಸಲಾಗಿದೆ. ಕಾಂಗ್ರೆಸ್ ಪಕ್ಷವು ಪುನರಾವರ್ತಿತ ಭರವಸೆಗಳನ್ನು ನೆರವೇರಿಸದೆಯೇ ದೂರವಿರಬಹುದೆಂದು ಯೋಚಿಸುವ ಮೂಲಕ ಜನರಿಗೆ ಅವಮಾನ ಎಸಗಿತ್ತು. ಜನರನ್ನು ಸಬಲೀಕರಣಗೊಳಿಸುವ ಬದಲು ಜನರ ದೌರ್ಬಲ್ಯವನ್ನು ತನ್ನ ಸ್ವಾರ್ಥಕ್ಕೆ ಬಳಸುವುದು ಕಾಂಗ್ರೆಸ್ನ ಅಭ್ಯಾಸ.
ರಕ್ಷಣಾ ಸಿದ್ಧತೆಯ ಅತ್ಯುನ್ನತ ಮಟ್ಟ
2004ರಲ್ಲಿ ಕಾಂಗ್ರೆಸ್ ಪ್ರಣಾಳಿಕೆ ’ನಾವು ಸಶಸ್ತ್ರ ಪಡೆಗಳ ಆಧುನೀಕರಣದ ಎಲ್ಲಾ ವಿಳಂಬಗಳನ್ನು ನಿರ್ಮೂಲನೆ ಮಾಡುತ್ತೇವೆ’ ಎಂದಿತ್ತು. 2009ರ ಪ್ರಣಾಳಿಕೆಯಲ್ಲೂ ಇದೇ ರೀತಿ ಮಾಡುವುದಾಗಿ ವಾದಿಸಿತು. 10 ವರ್ಷಗಳ ಆಳ್ವಿಕೆಯ ಹೊರತಾಗಿಯೂ ಅವರಿಗೆ ಆ ಭರವಸೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇದು ನಾಚಿಕೆಗೇಡು. ರಫೆಲ್ ಒಪ್ಪಂದವನ್ನೂ ವಿಳಂಬ ಮಾಡಿತ್ತು. ಎನ್ಡಿಎ ಸರಕಾರ ಅಂತಿಮವಾಗಿ ರಫೆಲ್ ಒಪ್ಪಂದವನ್ನು ನವೀಕರಿಸಿತ್ತು. ಮೋದಿ ಸರ್ಕಾರ ಬಂದ ಬಳಿಕ, ಭಾರತೀಯ ಸೈನಿಕರು 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಪಡೆದರು. 2009 ರಲ್ಲಿ ಈ ಜಾಕೆಟ್ಗಳಿಗಾಗಿ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಇದನ್ನು ಈಡೇರಿಸಲು ಮೋದಿ ಸರ್ಕಾರ ಬರಬೇಕಾಯಿತು. ಮೋದಿ ಸರಕಾರ ತಮ್ಮದೇ ಆದ ಭರವಸೆಗಳನ್ನು ಪೂರೈಸಿದ್ದು ಮಾತ್ರವಲ್ಲ, ಹಿಂದಿನ ಸರಕಾರಗಳು ಬಳುವಳಿಯಾಗಿ ಕೊಟ್ಟ ಕೊರತೆಗಳನ್ನೂ ಈಡೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಹಣಕಾಸಿನ ಪ್ರಬುದ್ಧತೆ ಮತ್ತು ಕಡಿಮೆ ಹಣದುಬ್ಬರದೊಂದಿಗೆ ಬೆಳವಣಿಗೆಯನ್ನು ನಿರ್ವಹಿಸುವುದು
ಕಾಂಗ್ರೆಸ್ ತನ್ನ 2009ರ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು, ಮೋದಿ ಸರಕಾರ ಇಂದು ಮಾಡಿ ತೋರಿಸಿದೆ. ಯುಪಿಎ ಆಡಳಿತ ತನ್ನ 10 ವರ್ಷಗಳ ಆಳ್ವಿಕೆಯ ಮೂಲಕ ಭಾರತವನ್ನು ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದನ್ನಾಗಿಸಿತು. ಮೋದಿ ಸರ್ಕಾರ, ಹಣದುಬ್ಬರ, ಹಣಕಾಸಿನ ಮೇಲೆ ರಾಜಿ ಮಾಡಿಕೊಳ್ಳದೆ ಜಿಎಸ್ಟಿ ಇತ್ಯಾದಿಗಳನ್ನು ಅನುಷ್ಠಾನಕ್ಕೆ ತಂದಿತು. ನಿರಂತರ ಪ್ರಯತ್ನಗಳ ಮೂಲಕ ಮೋದಿ ಸರ್ಕಾರವು ಹೆಚ್ಚಿನ ಬೆಳವಣಿಗೆ ಸಾಧಿಸಲು ಸಮರ್ಥವಾಯಿತು. ಮೋದಿ ದೇಶವನ್ನು ಜಗತ್ತಿನ ಅತ್ಯಂತ ವೇಗದ ಆರ್ಥಿಕತೆಯಾಗಿ ರೂಪಿಸುವಲ್ಲಿ ಯಶಸ್ವಿಯಾದರು.
ಎಲ್ಲರಿಗೂ ಆರೋಗ್ಯ ಭದ್ರತೆ
2009ರ ಪ್ರಣಾಳಿಕೆಯಲ್ಲಿ ಕೂಡ ಕಾಂಗ್ರೆಸ್ ಪೊಳ್ಳು ಭರವಸೆಯನ್ನು ನೀಡಿದೆ. 2013-14ನೇ ಸಾಲಿನಡಿ 2.5 ಕೋಟಿ ಕುಟುಂಬಗಳು ಮಾತ್ರ ಆರೋಗ್ಯ ವಿಮೆಯ ಅಡಿಯಲ್ಲಿದ್ದವು ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಆದರೆ ಮೋದಿಯವರು, ಅಯುಷ್ಮಾನ್ ಭಾರತ್ ಯೋಜನೆಯನ್ನು ತಂದು 10 ಕೋಟಿ ಕುಟುಂಬಗಳನ್ನು ಆರೋಗ್ಯ ವಿಮೆಗೆ ಒಳಪಡುವಂತೆ ಮಾಡಿದ್ದಾರೆ. ಇದು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ ಮತ್ತು ವಿಶೇಷವಾಗಿ, ಬಿಲ್ ಗೇಟ್ಸ್ನಂತಹ ಗಣ್ಯರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಸರಕಾರ ಇದನ್ನು ಪ್ರಚಾರದ ಸರಕನ್ನಾಗಿ ಮಾಡಿಕೊಂಡಿತ್ತೇ ವಿನಃ ಅನುಷ್ಠಾನಗೊಳಿಸುವತ್ತ ತುಸು ಪ್ರಯತ್ನವನ್ನೂ ಮಾಡಲಿಲ್ಲ. ಆದರೆ, ಮೋದಿ ಸರಕಾರವು ಅದನ್ನು ಜನರ ಹೃದಯಕ್ಕೆ ತೆಗೆದುಕೊಂಡು ಹೀಗೆ ಸಮಾಜದಲ್ಲಿ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಿದೆ.
ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಮೀಸಲಾತಿ
2004ರ ಕಾಂಗ್ರೆಸ್ ಪ್ರಣಾಳಿಕೆ, ‘ಕಾಂಗ್ರೆಸ್ ಆರ್ಥಿಕವಾಗಿ ವಂಚಿತ ವರ್ಗಗಳಿಗೆ ಮೀಸಲಾತಿಯನ್ನು ಮಂಜೂರು ಮಾಡಲಿದೆ’ ಎಂದು ಹೇಳಿದೆ. ಯುಪಿಎ ಅಡಿಯಲ್ಲಿ ಬಹು ಆಯಾಮಗಳಿಂದ ಇದಕ್ಕಾಗಿ ಬೇಡಿಕೆ ಬಂದಿದ್ದರೂ ಆ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಆದರೆ, ಮೋದಿ ಸರ್ಕಾರವು ಸಾಂವಿಧಾನಿಕ ತಿದ್ದುಪಡಿಯನ್ನೂ ತಂದು, ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಿದೆ. ಅವರ ವಿರೋಧಿಗಳಿಗೆ ಮೋದಿಯ ಕ್ರಮ ಇಷ್ಟವಾಗದೆ, ಅದನ್ನೂ ಟೀಕಿಸಲಾರಂಭಿಸಿದರು.
2004 ಮತ್ತು 2009ರ ಕಾಂಗ್ರೆಸ್ ಪ್ರಣಾಳಿಕೆಗಳ ಬಗ್ಗೆ ಅಧ್ಯಯನ ಅದು ನೀಡಿದ ಪ್ರಮುಖ ಭರವಸೆಗಳು ಈಡೇರದೆ ಹಾಗೆಯೇ ಉಳಿದು ಹೋಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಹತ್ತು ವರ್ಷಗಳ ಕಾಲ ಈ ಪಕ್ಷ ಅಧಿಕಾರದಲ್ಲಿದ್ದರೂ ಸಹ ಅನೇಕ ಪ್ರಮುಖ ಭರವಸೆಗಳು ಈಡೇರದೆ ಉಳಿದುಕೊಂಡಿರುವುದು ನಿಜಕ್ಕೂ ನಾಚಿಕೆಗೇಡು. ವಾಸ್ತವವಾಗಿ, 2004 ಮತ್ತು 2009ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಹಳಷ್ಟು ಪುನರಾವರ್ತಿತ ಭರವಸೆಗಳಿವೆ, ಆದರೆ ಅವುಗಳು ಎಂದಿಗೂ ಈಡೇರಿಲ್ಲ. ಕಾಗದದ ಮೇಲೆ ಮಾತ್ರ ಕಾಂಗ್ರೆಸ್ ಭರವಸೆ ನೀಡಿದೆ. ಆದರೆ ಮೋದಿ ಸರಕಾರ ಅದನ್ನು ಅರ್ಥಮಾಡಿಕೊಂಡು ಕಾರ್ಯರೂಪಕ್ಕೆ ತಂದಿದೆ. ಕಾಂಗ್ರೆಸ್ ಭರವಸೆಯನ್ನು ಈಡೇರಿಸುವುದಿಲ್ಲ ಮಾತ್ರವಲ್ಲ, ಬೇರೆ ಸರ್ಕಾರಗಳು ಜನರಿಗೆ ಒಳ್ಳೆಯದು ಮಾಡುವುದನ್ನೂ ಪ್ರೋತ್ಸಾಹಿಸುವುದಿಲ್ಲ ಕೂಡ. ಮೋದಿ ಸರಕಾರವು ಜನರಿಗೆ ಉತ್ತಮವಾದನ್ನು ನೀಡುವಲ್ಲಿ ಎಂದೂ ಹಿಂದೆ ಸರಿದಿಲ್ಲ.
source: inreportcard
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.