×
Home About Us Advertise With s Contact Us

ದಿಮಾಪುರ್ ಘಟನೆ ಸಿಬಿಐ ತನಿಖೆಗೆ

ಕೊಹಿಮಾ: ದಿಮಾಪುರದಲ್ಲಿ ಅತ್ಯಾಚಾರ ಆರೋಪಿಯನ್ನು ಹೊಡೆದು ಸಾಯಿಸಿದ ಘಟನೆಯನ್ನು ನಾಗಾಲ್ಯಾಂಡ್ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ.

ಮಾ.5ರಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಜನರು ಏಕಾಏಕಿ ಜೈಲಿನೊಳಕ್ಕೆ ನುಗ್ಗಿ ಅತ್ಯಾಚಾರ ಆರೋಪಿ ಸೈಯದ್ ಫರೀದ್ ಖಾನ್‌ನನ್ನು ಹೊರಗೆಳೆದು ಹೊಡೆದು ಸಾಯಿಸಿದ್ದರು.

ಆ ಬಳಿಕ ದಿಮಾಪುರದಲ್ಲಿ ಕೆಲ ದಿನಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕರ್ಫ್ಯೂ ವಿಧಿಸಲಾಗಿತ್ತು. ದೇಶದಾದ್ಯಂತ್ರ ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Naga

ಅಲ್ಲದೇ ಆರೋಪಿ ನಿಜವಾಗಲೂ ಅತ್ಯಾಚಾರ ಮಾಡಿದ್ದನೇ ಎಂಬ ಬಗ್ಗೆಯೂ ಹಲವು ಉಹಾಪೋಹಗಳು ಎಬ್ಬಿದ್ದವು. ಇದೀಗ ಇವೆಲ್ಲದಕ್ಕೂ ಅಂತ್ಯ ಹಾಡಲು ನಿರ್ಧರಿಸಿರುವ ನಾಗಾಲ್ಯಾಂಡ್ ಸರ್ಕಾರ ಘಟನೆಯನ್ನು ಸಿಬಿಐಗೆ ವಹಿಸಿದೆ.

 

Recent News

Back To Top
error: Content is protected !!