ವಾರಣಾಸಿ: ಉತ್ತರಪ್ರದೇಶದ ದೇಗುಲ ನಗರಿ ವಾರಣಾಸಿಯಲ್ಲಿ ಮಂಗಳವಾರ, ಸಂಪೂರ್ಣ ಸಂಸ್ಕೃತಮಯವಾದ ಕ್ರಿಕೆಟ್ನ್ನು ಆಯೋಜನೆಗೊಳಿಸಲಾಗಿದೆ. ಇದರ ಕಮೆಂಟರಿಯನ್ನೂ ಸಂಪೂರ್ಣ ಸಂಸ್ಕೃತದಲ್ಲೇ ಹೇಳಲಾಗಿದೆ, ಆಟಗಾರರೆಲ್ಲಾ ಸಾಂಪ್ರದಾಯಿಕ ಧೋತಿ ಕುರ್ತಿಯನ್ನು ತೊಟ್ಟು ಕ್ರಿಕೆಟ್ ಆಡಿದ್ದಾರೆ. ಸಂಸ್ಕೃತ ಕ್ರಿಕೆಟ್ ಲೀಗ್ ಎಂದು ಇದಕ್ಕೆ ಹೆಸರಿಡಲಾಗಿತ್ತು.
10 ಓವರ್ಗಳ ಕ್ರಿಕೆಟ್ ಇದಾಗಿದ್ದು, ವಿವಿಧ ಸಂಸ್ಕೃತ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ತೋರಿಸಿದ್ದಾರೆ. ಮೂರು ನಾಮವನ್ನು ಬಳಿದುಕೊಂಡು ಬರಿಗಾಲಲ್ಲಿ ಇವರು ಕ್ರಿಕೆಟ್ ಆಡಿದ್ದನ್ನು ನೋಡುವುದೇ ಒಂದು ಸೋಜಿಗವಾಗಿತ್ತು. ಅಂಪೈರ್ ಮತ್ತು ಕಮೆಂಟರಿಯವರೂ ಧೋತಿ ಕುರ್ತಿ ಧರಿಸಿದ್ದರು.
ಸಂಪೂರ್ಣಾನಂದ ಸಂಸ್ಕೃತಿ ವಿದ್ಯಾಲಯ ತನ್ನ 75ನೇ ಸ್ಥಾಪಕ ದಿನದ ಅಂಗವಾಗಿ ಈ ಕ್ರಿಕಟ್ನ್ನು ಆಯೋಜನೆಗೊಳಿಸಿತ್ತು.
ವಾರಣಾಸಿಯ ಎಲ್ಲಾ ಸಂಸ್ಕೃತ ಶಾಲೆಗಳು ಇದರಲ್ಲಿ ಭಾಗಿಯಾಗಿದ್ದವು. ಐದು ಟೀಮ್ಗಳು ಭಾಗಿಯಾಗಿದ್ದರು. ಶ್ರೇಷ್ಠ ನಾರಾಯಣ ಮಿಶ್ರಾ ಮತ್ತು ಡಾ.ವಿಕಾಸ್ ದೀಕ್ಷಿತ್ ಸಂಸ್ಕೃತದಲ್ಲಿ ಕಾಮೆಂಟರಿ ಹೇಳಿದ್ದಾರೆ.
ಇಂತಹ ಸಂಪೂರ್ಣ ಸಂಸ್ಕೃತಮಯ ಕ್ರಿಕೆಟ್ನ್ನು ದೇಶದಲ್ಲೇ ಮೊದಲ ಬಾರಿಗೆ ಆಯೋಜನೆಗೊಳಿಸಲಾಗಿದೆ.