ಸೂರತ್: ಈಗಾಗಲೇ ಮದುವೆ ಕಾರ್ಡ್ಗಳಲ್ಲಿ ಮೋದಿಯ ಚಿತ್ರ ಹಾಕುವುದು, ಟಿ-ಶರ್ಟ್ಗಳಲ್ಲಿ ನಮೋ ಸ್ಲೋಗನ್ಗಳನ್ನು ಹಾಕುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಇದಕ್ಕೆ ಹೊಸ ಸೇರ್ಪಡೆ ಸೀರೆ. ಮೋದಿಯ ಭಾವಚಿತ್ರವುಳ್ಳ ಸೀರೆಗಳು ಮೋದಿಯ ತವರು ರಾಜ್ಯ ಗುಜರಾತ್ನಲ್ಲಿ ಭಾರೀ ಹವಾ ಎಬ್ಬಿಸಿದೆ.
ಸೂರತ್ನಲ್ಲಿ ಮೋದಿ ಸೀರೆಯ ಟ್ರೆಂಡ್ ಆರಂಭಗೊಂಡಿದೆ, ಮಹಿಳೆಯರು ಭಾರೀ ಪ್ರಮಾಣದಲ್ಲಿ ಈ ಸೀರೆಗಳನ್ನು ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಗಳು ಈ ಸೀರೆ ಖರೀದಿಸುವವರಿಂದಲೇ ತುಂಬಿ ತುಳುಕುತ್ತಿದೆ.
ಈ ಸೀರೆಗಳಲ್ಲಿ ಮೋದಿ ಚಿತ್ರಗಳನ್ನು ಡಿಜಿಟಲ್ ಆಗಿ ಪ್ರಿಂಟ್ ಮಾಡಲಾಗಿದೆ. ಮೋದಿ ಚಿತ್ರವುಳ್ಳ ಕನಿಷ್ಠ ನಾಲ್ಕು ಬಗೆಯ ಸೀರೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಇದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಈಗಾಗಲೇ ಮೋದಿ ಚಿತ್ರವುಳ್ಳ ಟಿ-ಶರ್ಟ್, ಮದುವೆ ಕಾರ್ಡ್, ರಾಖಿ, ಮಗ್, ಗೋಲ್ಡ್ ಮತ್ತು ಸಿಲ್ವರ್ ಬಾರ್ಗಳು ಸುದ್ದಿ ಮಾಡಿವೆ. ಇದೀಗ ಸೀರೆಗಳು ಈ ಸಾಲಿಗೆ ಸೇರುತ್ತಿವೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ರಾಜಕಾರಣಿಗಳ ಇನ್ನಷ್ಟು ಸೀರೆಗಳನ್ನು ಹೊರತರುವ ಹುಮ್ಮಸ್ಸಿನಲ್ಲಿದ್ದಾರೆ ಮಾರಾಟಗಾರರು.
ಇತ್ತೀಚಿಗೆ ನವದಂಪತಿಗಳು ತಮ್ಮ ಔತಣಕೂಟದಲ್ಲಿ ಮೋದಿ ಭಾವಚಿತ್ರವನ್ನು ಹಿಡಿದು ಬಂದ ಅತಿಥಿಗಳಲ್ಲಿ ಮೋದಿಗೆ ಮತ ಹಾಕಿ ಎಂದು ವಿನಂತಿಸುತ್ತಿರುವ ಫೋಟೋ ವೈರಲ್ ಆಗಿತ್ತು.