ನವದೆಹಲಿ: ಕೇಂದ್ರ ಸರ್ಕಾರವು 7.47 ಲಕ್ಷ ಕಲಶ್ನಿಕೋವ್ ಸರಣಿಯ ಅಸಾಲ್ಟ್ ರೈಫಲ್ನ್ನು ಉತ್ಪಾದನೆ ಮಾಡುವ ಪ್ರಸ್ತಾವಣೆಗೆ ಬುಧವಾರ ಅನುಮೋದನೆಯನ್ನು ನೀಡಿದೆ. ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್ ಮತ್ತು ರಷ್ಯಾ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಇದರ ಉತ್ಪಾದನೆಯಾಗಲಿದೆ, ಉತ್ತರಪ್ರದೇಶದ ಕೋರ್ವಾದಲ್ಲಿ ಈ ಗನ್ ಉತ್ಪಾದನೆಯ ಘಟಕ ಆರಂಭವಾಗಲಿದೆ.
ಕೋರ್ವಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾಗಿದೆ.
ಈ ಜಂಟಿ ಸಹಯೋಗದಲ್ಲಿ ರಷ್ಯಾದ ಷೇರು ಶೇ.49.5ರಷ್ಟು ಇದೆ ಮತ್ತು ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್ನ ಷೇರು ಶೇ.50.5ರಷ್ಟು ಇರಲಿದೆ.
ಕೋರ್ವಾ ಘಟಕ 7.62×39 ಎಂಎಂ ಕ್ಯಾಲಿಬ್ರೆ ಎಕೆ-203 ಗನ್ಗಳನ್ನು ಉತ್ಪಾದನೆ ಮಾಡಲಿದೆ, ಇದು ಎಕೆ-47 ರೈಫಲ್ನ ಸುಧಾರಿತ ಮಾದರಿಯಾಗಿದೆ. ಫೆ.15ರಂದು ಈ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ. ಫೆ.28ರಂದು ಈ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ.
ಎನ್ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ಇದು ಇನ್ನಷ್ಟು ಉತ್ತೇಜನವನ್ನು ನೀಡಲಿದೆ. ರೈಫಲ್ ಉತ್ಪಾದನೆಗೆ ಶೇ.100ರಷ್ಟು ಸ್ಥಳಿಯ ಕಂಟೆಂಟ್ಗಳನ್ನು ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ.
ಮೊನ್ನೆಯಷ್ಟೇ ಭಾರತ, 72,000 ಸಿಗ್ ಸಾರ್ 716 ಅಸಾಲ್ಟ್ ರೈಫಲ್ಸ್ನ್ನು ಯುಎಸ್ಎ ಸಂಸ್ಥೆಯಿಂದ ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ.