ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನೆಹರೂ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ವಾದ್ರಾ. ಇತ್ತೀಚಿಗೆ ಟ್ವಿಟರ್ ಖಾತೆಯನ್ನು ತೆರೆಯುವ ಮೂಲಕವೂ ಸದ್ದು ಮಾಡಿದ್ದಾರೆ. 2 ಲಕ್ಷ ಫಾಲೋವರ್ಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಆದರೆ ಯಾರಾದರೂ ಅವರ ಖಾತೆಗೆ ಎಂಟ್ರಿ ಕೊಟ್ಟು ನೋಡಿದರೆ, ದೊಡ್ಡ ಕಪ್ಪು ಅಕ್ಷರಗಳಲ್ಲಿ ’@priyankagandhi hasn’t Tweeted’ ಎಂಬ ಬರಹ ಕಾಣಿಸಿಕೊಳ್ಳುತ್ತದೆ. ಅಂದರೆ ಅವರು ಇದುವರೆಗೆ ಒಂದೇ ಒಂದು ಟ್ವಿಟ್ಗಳನ್ನು ಮಾಡಿಲ್ಲ ಎಂದು.
ಖಾತೆ ಸಂಪೂರ್ಣವಾಗಿ ಸಜ್ಜುಗೊಂಡಿದೆ, ಅವರದ್ದೇ ಖಾತೆ ಎಂಬುದನ್ನು ಸಾಕ್ಷೀಕರಿಸುವ ಬ್ಲೂ ಟಿಕ್ ಮಾರ್ಕ್ ಕೂಡ ಇದೆ. ಮೂಲೆಯಲ್ಲಿ 2 ಲಕ್ಷ ಫಾಲೋವರ್ಗಳು ಎಂಬುದನ್ನೂ ತೋರಿಸುತ್ತಿದೆ. ಆಕೆ ಕೇವಲ 7 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.
2 ಲಕ್ಷ ಫಾಲೋವರ್ಗಳೊಂದಿಗೆ ಖಾಲಿ ಟ್ವಿಟರ್ ಖಾತೆ ಹೊಂದಿರುವುದು, ಕಾಂಗ್ರೆಸ್ ವಂಶಾಡಳಿತ ಭಾರತದೊಂದಿಗೆ ಇಟ್ಟುಕೊಂಡಿರುವ ಸಂಪರ್ಕ ಕೊಂಡಿಯ ಒಂದು ಪರಿಪೂರ್ಣ ರೂಪಕವಾಗಿದೆ.
ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಿಯಾಂಕ ವಾದ್ರಾ ಇದುವರೆಗಿನ ರಾಜಕೀಯ ವೃತ್ತಿಯನ್ನು ನಾವು ನೋಡಿದ್ದೇವೆಯೇ?. ಖಂಡಿತಾ ಇಲ್ಲ. ನಾವು ನೋಡಿದ್ದು ಅವರ ಆಗಮನದ ಬಗೆಗಿನ ಸುದ್ದಿ ಅಬ್ಬರಗಳನ್ನು ಮತ್ತು ಕಾಂಗ್ರೆಸ್ ಕೇಂದ್ರ ಕಛೇರಿಯಲ್ಲಿನ ಅವರ ನೂತನ ಕಛೇರಿಯನ್ನು ಮಾತ್ರ.
ಈಗ 1.95 ಲಕ್ಷ ಫಾಲೋವರ್ಗಳನ್ನು ಹೊಂದಿರುವ ಅವರ ಖಾಲಿ ಖಾಲಿ ಟ್ವಿಟರ್ ಖಾತೆ, ಅವರ ಮುಚ್ಚಿದ ಕಛೇರಿಯ ಹೊರಗಡೆ ಗಂಟೆಗಟ್ಟಲೆ ಸಾಲುಗಟ್ಟಿ ಕಾಯುತ್ತಿರುವ ಡಿಜಿಟಲ್ ವರ್ಶನ್ ಅಷ್ಟೇ.
ಇದುವರೆಗೆ ಪ್ರಿಯಾಂಕ ಅವರು ಕೆಲವೇ ಕೆಲವು ಕಾಂಗ್ರೆಸ್ ಪಕ್ಷದ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಎರಡು ಮರೆಯಲಾರದ ಪ್ರಚಾರಗಳೆಂದರೆ, ತಮ್ಮ ಸಹೋದರ ರಾಹುಲ್ ಗಾಂಧಿ ಪರವಾಗಿ 2014ರಲ್ಲಿ ಅಮೇಥಿಯಲ್ಲಿ ಪ್ರಚಾರ ನಡೆಸಿದ ವೇಳೆ ಅವರು ಸ್ಮೃತಿ ಇರಾನಿಯನ್ನು ‘ಯಾರು?’ ಎಂದು ಪ್ರಶ್ನಿಸಿದ್ದು, ಮತ್ತೊಂದು ಬಿಜೆಪಿಯನ್ನು ’ಇಲಿಯಂತೆ ಹಾರುತ್ತಿದೆ’ ಎಂದು ಮೂದಲಿಸಿದ್ದು, ಈ ಎರಡು ಅಭಿಯಾನ ತಕ್ಕ ಮಟ್ಟಿಗೆ ನೆನಪಿನಲ್ಲಿ ಇದೆ.
ರಾಜಕೀಯದಲ್ಲಿ ಯಾವ ಅನುಭವವೂ ಇಲ್ಲದ ಪ್ರಿಯಾಂಕ ಅವರು, ಪ್ರತಿಸ್ಪರ್ಧಿಯನ್ನು ಯಾರು ಎಂದು ಕೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದರು. ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಇಲಿಗೆ ಹೋಲಿಸುವ ಮೂಲಕ ಕುಟುಂಬ ರಾಜಕಾರಣದ ಅಹಂನ್ನು ಪ್ರದರ್ಶಿಸಿದ್ದರು.
ಒಂದು ಕುಟುಂಬದ ಅಹಂನ್ನು ನಾವು ಒಂದು ರಾಷ್ಟ್ರವಾಗಿ ಪೋಷಿಸಿದ್ದೇವೆ. ನಾವೆಲ್ಲರೂ ಇದರ ತಪ್ಪಿತಸ್ಥರು. ಆಕೆಯ ಮುಚ್ಚಿದ ಕಛೇರಿಯ ಹಿಂದೆ ಕಾವಲುಗಾರರಂತೆ ಕಾಯುತ್ತಿರುವವರು, ಸ್ಪಂದನೆಯೇ ಇಲ್ಲದ ಆಕೆಯ ಟ್ವಿಟರ್ ಖಾತೆಯನ್ನು ಹಿಂಬಾಲಿಸುತ್ತಿರುವವರು ಎಲ್ಲರೂ ತಪ್ಪಿತಸ್ಥರೇ. ಆಕೆಯ ಅಹಂನ್ನು ಪೋಷಿಸುವಲ್ಲಿ ಇವರೆಲ್ಲರ ಪಾತ್ರವೂ ಇದೆ.
ಕೆಲವೊಂದು ಸುದ್ದಿ ಮಾಧ್ಯಮಗಳು, ಆಕೆಯನ್ನು ಸೂಪರ್ ವುಮೆನ್, ಜನರೊಂದಿಗೆ ಸಂಪರ್ಕ ಬೆಸೆಯುವ ಸಾಮರ್ಥ್ಯ ಇರುವವರು ಎಂದೆಲ್ಲಾ ಬಣ್ಣಿಸಿವೆ. ಆದರೆ ಅಹಂನಿಂದ ಬೀಗುತ್ತಿರುವ ಪ್ರಿಯಾಂಕ ಕಾರ್ಯಕರ್ತರೊಂದಿಗೆ ತಳಮಟ್ಟದಲ್ಲಿ ಸಂಪರ್ಕ ಸಾಧಿಸುವರೇ? ನಂಬುವುದು ಕಷ್ಟ.
ಸಮಕಾಲೀನ ರಾಜಕಾರಣದಲ್ಲಿ, ಮೋದಿಯವರನ್ನು ಅಹಂಕಾರಿ ಎಂದು ಮೂದಲಿಸಲಾಗುತ್ತಿದೆ. ಸ್ವಯಂ ರೂಪುಗೊಂಡ ಮನುಷ್ಯ ತನ್ನ ಹಿನ್ನಲೆಯ ಬಗ್ಗೆ ಗರ್ವಪಟ್ಟುಕೊಳ್ಳುತ್ತಿರುವುದಕ್ಕೆ ಅವರಿಗೆ ಈ ಪಟ್ಟ ಸಿಕ್ಕಿರಬಹುದು. ಆದರೆ ವಂಶಾಡಳಿತದ ಸೊಕ್ಕು ಇವರ ಗಮನಕ್ಕೆ ಬಾರದೆ ಇರುವುದು ವಿಸ್ಮಯವೇ ಸರಿ. ಆದರೆ ಈ ಸೊಕ್ಕನ್ನು ಪೋಷಿಸುವಲ್ಲಿ ನಮ್ಮೆಲ್ಲರ ತಪ್ಪೂ ಇದೆ ಎಂಬುದನ್ನು ಮರೆಯಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.