ನವದೆಹಲಿ: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (United Nations International Children’s Emergency Fund (UNICEF)ಗೆ ನಿಯೋಜನೆಗೊಂಡಿರುವ ಭಾರತದ ಮೊದಲ ದಿವ್ಯಾಂಗ್ ಮೇಜರ್ ಗೋಪಾಲ್ ಮಿತ್ರಾ ಅವರ ಗೌರವಾರ್ಥ ಭಾರತೀಯ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪೂರ್ತಿದಾಯಕ ಪೋಸ್ಟ್ನ್ನು ಹಂಚಿಕೊಂಡಿದೆ.
‘ಎಲ್ಇಡಿ ಸ್ಫೋಟದಲ್ಲಿ ಮೇಜರ್ ಗೋಪಾಲ್ ಮಿತ್ರಾ ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಎಲ್ಲಾ ಸಂಕಷ್ಟದ ನಡುವೆಯೂ ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ನಲ್ಲಿ ಸೋಶಿಯಲ್ ವರ್ಕ್ ಸ್ನಾತಕೋತ್ತರ ಪದವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಡೆವಲಪ್ಮೆಂಟ್ ಮ್ಯಾನೇಜ್ಮೆಂಟ್ನಲ್ಲಿ ಎಂಎಸ್ಸಿ ಮಾಡಿದ್ದಾರೆ’ ಎಂದು ಸೇನೆ ತನ್ನ ಪೋಸ್ಟ್ನಲ್ಲಿ ತಿಳಿಸಿದೆ.
‘UN ಕೇಂದ್ರ ಕಛೇರಿಗೆ ನೇಮಕಗೊಂಡ ಭಾರತದ ಮೊತ್ತ ಮೊದಲ ದಿವ್ಯಾಂಗ ವ್ಯಕ್ತಿ ಇವರಾಗಿದ್ದಾರೆ’ ಎಂದು ಸೇನೆ ಹೇಳಿದ್ದು, #ಪ್ರೌಡ್#ಇನ್ಸ್ಪಿರೇಶನ್ ಮತ್ತು #ಇಂಡಿಯನ್ಆರ್ಮಿ ಹ್ಯಾಶ್ ಟ್ಯಾಗ್ ನೀಡಿದೆ.
ಈ ಪೋಸ್ಟ್ಗೆ 20 ಸಾವಿರ ಲೈಕ್ಗಳು ಇನ್ಸ್ಟಾಗ್ರಾಂನಲ್ಲಿ ಮತ್ತು 1 ಸಾವಿರ ಲೈಕ್ಗಳು ಫೇಸ್ಬುಕ್ನಲ್ಲಿ ಸಿಕ್ಕಿದೆ.
ಇದೊಂದು ಸ್ಪೂರ್ತಿದಾಯಕ, ಶ್ಲಾಘನೀಯ ಪೋಸ್ಟ್ ಎಂದು ಜನರು ಕಾಮೆಂಟ್ ನೀಡಿದ್ದಾರೆ.
ಮಿತ್ರಾ ಅವರು, 2000ದಲ್ಲಿ ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎಲ್ಇಡಿ ಸ್ಪೋಟದಲ್ಲಿ ಗಾಯಗೊಂಡು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ