ನವದೆಹಲಿ: ರಷ್ಯಾದ ಫೆಡರಲ್ ಕೌನ್ಸಿಲ್ನ ನಿಯೋಗ ಗುರುವಾರ, ರಾಜ್ಯಸಭಾ ಸದಸ್ಯರನ್ನು ಭೇಟಿಯಾಗಿ ರಷ್ಯಾ-ಭಾರತ ದ್ವಿಪಕ್ಷೀಯ ಸಹಕಾರದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಿತು. ಭಾರತ-ರಷ್ಯಾ ಪಾರ್ಲಿಮೆಂಟರಿ ಫ್ರೆಂಡ್ಶಿಪ್ಗೆ ವಿಶೇಷ ಒತ್ತನ್ನು ನೀಡಿಲಾಯಿತು.
ಸಭೆಯ ವೇಳೆ ಆರ್ಥಿಕತೆ, ಯುವ ಉದ್ಯಮಶೀಲತ್ವ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ, ಅಂತರ್ ಸಂಸದೀಯ ಸಂಪರ್ಕ ಉತ್ತೇಜನ ಮುಂತಾದ ಅಂತರ್ ಪ್ರಾದೇಶಿಕ ಸಹಕಾರವನ್ನೊಳಗೊಡ ಪರಸ್ಪರ ಹಿತಾಸಕ್ತಿಯ ವಿಷಗಳು ಚರ್ಚಿತಗೊಂಡವು. ಶಾಂಘೈ ಕೊ-ಆಪರೇಶನ್ ಆರ್ಗನೈಝೇಶನ್ ಮತ್ತು ಬ್ರಿಕ್ಸ್ ವೇದಿಕೆಗಳ ಅಭಿವೃದ್ಧಿಯ ಬಗ್ಗೆ ಮಾತುಕತೆ ನಡೆದವು.
ರಷ್ಯಾ ಮತ್ತು ಭಾರತ ರಾಜತಾಂತ್ರಿಕರ ಪರಸ್ಪರ ಗುರುತಿಸುವಿಕೆಯ ಸಂಬಂಧದ ಒಪ್ಪಂದಕ್ಕೆ ಶೀಘ್ರ ಸಹಿ ಹಾಕುವ ಅವಶ್ಯಕತೆಗಳ ಬಗ್ಗೆಯೂ ಚರ್ಚೆ ನಡೆದಿದೆ.
ಭಾರತ ಮತ್ತು ರಷ್ಯಾ ನಡುವಣ ವ್ಯಾಪಾರ ವಹಿವಾಟನ್ನು 30 ಬಿಲಿಯನ್ ಡಾಲರ್ಸ್ವರೆಗೆ ಏರಿಸುವ ಗುರಿಯನ್ನು ಸಾಧಿಸಲು ಉಭಯ ದೇಶಗಳ ನಡುವೆ ನೇರ ವ್ಯಾಪಾರ ಸಂಬಂಧ ವೃದ್ಧಿಸಲು ಸಮ್ಮತಿ ಸೂಚಿಸಿವೆ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಸ್ಮರಣಾರ್ಥ, ಭಾರತ ಮತ್ತು ರಷ್ಯಾಗಳು ಮಾಸ್ಕೋದಲ್ಲಿ ಸಮಾರಂಭ ನಡೆಸಲು ಉದ್ದೇಶಿಸಿವೆ.
ರಷ್ಯಾ ನಿಯೋಗವು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಭೇಟಿಯಾಯಿತು. ಭಾರತೀಯ ನಿಯೋಗದ ನೇತೃತ್ವವನ್ನು ಸಂಸದೆ ಹೇಮಮಾಲಿನಿ ವಹಿಸಿದ್ದರು.