ವಾಷಿಂಗ್ಟನ್: ಈ ಬಾರಿಯ ಅಂತಾರಾಷ್ಟ್ರೀಯ ಬೌದ್ಧಿಕ ಗುಣಮಟ್ಟ (ಐಪಿ) ಸೂಚ್ಯಾಂಕದಲ್ಲಿ ಭಾರತ ಎಂಟು ಸ್ಥಾನಗಳ ಸುಧಾರಣೆಯನ್ನು ಕಂಡಿದೆ. 50 ರಾಷ್ಟ್ರಗಳ ಪಟ್ಟಿಯಲ್ಲಿ 36ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಕಳೆದ ವರ್ಷ 44ನೇ ಸ್ಥಾನದಲ್ಲಿತ್ತು.
ಈ ಸೂಚ್ಯಾಂಕದಲ್ಲಿ ಅಮೆರಿಕಾ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಯುಕೆ ಎರಡನೇ ಸ್ಥಾನದಲ್ಲಿದೆ, ಸ್ವೀಡನ್ 3 ಮತ್ತು ಜರ್ಮನಿ 4ನೇ ಸ್ಥಾನದಲ್ಲಿದೆ.
ಈ ಸೂಚ್ಯಾಂಕದಲ್ಲಿ ಭಾರತ, 45 ಅಂಕಗಳ ಪೈಕಿ ಭಾರತ 16.22 ಅಂಕಗಳನ್ನು ಪಡೆದುಕೊಂಡಿದೆ, ಕಳೆದ ವರ್ಷ 12.03 ಅಂಕಗಳನ್ನು ಪಡೆದುಕೊಂಡಿತ್ತು.
ಯುಎಸ್ ಚೇಂಬರ್ಸ್ನ ಗ್ಲೋಬಲ್ ಇನ್ನೋವೇಶನ್ ಪಾಲಿಸಿ ಸೆಂಟರ್(ಜಿಐಪಿಸಿ), ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಾಂಕ 2019ನ್ನು ಗುರುವಾರ ಬಿಡುಗಡೆಗೊಳಿಸಿದ್ದು, ಭಾರತದ ಸುಧಾರಣೆಯನ್ನು ಒಂದು ಮಹತ್ವದ ಸಾಧನೆಯೆಂದು ಬಣ್ಣಿಸಿದೆ. ಬಹು ಮುಖ್ಯವಾಗಿ, ಪೇಟೆಂಟ್ ಮತ್ತು ಬೌದ್ಧಿಕ ಗುಣಮಟ್ಟ ಜಾರಿ ಪರಿಸರಗಳಲ್ಲಿ ಗಣನೀಯ ಪ್ರಮಾಣದ ಸವಾಲುಗಳು ಇವೆ ಎಂದಿದೆ.
‘ಸತತ ಎರಡನೇ ವರ್ಷದಲ್ಲಿ, ಭಾರತದ ಗಳಿಕೆಯು ಸೂಚ್ಯಾಂಕದಲ್ಲಿ ಅಳತೆ ಮಾಡಲಾದ ಯಾವುದೇ ದೇಶಕ್ಕಿಂತ ಹೆಚ್ಚಿನದ್ದಾಗಿದ್ದು, ಇದು ಜಾಗತಿಕ ತಲಾ ದೇಶೀಯ ಉತ್ಪನ್ನಗಳ ಶೇ.90ರಷ್ಟನ್ನು ಒಳಗೊಂಡಿದೆ’ ಎಂದು ಜಿಐಪಿಸಿಯ ಹಿರಿಯ ಉಪಾಧ್ಯಕ್ಷ ಪ್ಯಾಟ್ರಿಕ್ ಕಿಲ್ಬ್ರೀಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘ವಿಶ್ವ ಅತೀ ವೇಗದ ಆರ್ಥಿಕತೆಯಾಗಿ ಭಾರತ, ತನ್ನ ಇನ್ನೋವೇಶನ್ ಎಕೋಸಿಸ್ಟಮ್ ಸುಧಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಇದು ಮುಂದಿನ ತಲೆಮಾರಿನ ಭಾರತೀಯ ಆವಿಷ್ಕಾರಗಳನ್ನು ಸಬಲೀಕರಣ ಮಾಡಲಿದೆ, 21ನೇ ಶತಮಾನದ ಸೃಷ್ಟಿಗಳಿಗೆ ಕೊಡುಗೆ ನೀಡಲಿದೆ ಮತ್ತು ತನ್ನನ್ನು ತಾನು ಜ್ಞಾನ ಆಧಾರಿತ ಆರ್ಥಿಕತೆಯಾಗಿ ರೂಪಾಂತರಗೊಳಿಸಲಿದೆ’ ಎಂದು ಕಿಲ್ಬ್ರೀಡ್ ಹೇಳಿದ್ದಾರೆ.
‘ಖಂಡಿತವಾಗಿಯೂ, ಹೆಚ್ಚುವರಿ ಅರ್ಥಪೂರ್ಣ ಸುಧಾರಣೆಗಳ ಅಗತ್ಯವಿರುವ ಪ್ರಮುಖ ಸಮಸ್ಯೆಗಳು ಹಾಗೆಯೇ ಇವೆ ಮತ್ತು ಈ ಸೂಚ್ಯಾಂಕವನ್ನು ಮಾರ್ಗದರ್ಶಿಯನ್ನಾಗಿಸಿಕೊಂಡು ಭಾರತ ಮುಂದಕ್ಕೆ ಚಲಿಸಲಿದೆ ಎಂಬ ನಂಬಿಕೆ ನಮಗಿದೆ. ಭಾರತ ವೃದ್ಧಿಯಾದಾಗ ಜಾಗತಿಕ ಆರ್ಥಿಕತೆಗೆ ಲಾಭವಾಗುತ್ತದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.