ಪಾಶ್ಚ್ಯಾತೀಕರಣಗೊಂಡಿರುವ ಭಾರತ ಒಂದು ಗಣ್ಯ ವರ್ಗ, ನಮ್ಮ ದೇಶದೊಳಕ್ಕೆ ವಿದೇಶಿ ಸಾಮಾಜಿಕ ಸಿದ್ಧಾಂತಗಳನ್ನು ಹೇರುವ ಕೆಟ್ಟ ಚಾಳಿಯನ್ನು ಮುಂದುವರೆಸುತ್ತಲೇ ಇದೆ. ಕಮ್ಯೂನಿಸ್ಟ್ ನಾಯಕ ಕಾರ್ಲ್ಮಾರ್ಕ್ಸ್ನ ‘ಧರ್ಮ ಎಂಬುದು ಒಂದು ಅಫೀಮು’ ಎಂಬ ವಾಕ್ಯವನ್ನು ಈ ವರ್ಗ ಪದೇ ಪದೇ ಉಚ್ಚರಿಸುತ್ತಲೇ ಇರುತ್ತದೆ. ಧರ್ಮ ಅಫೀಮು ಎಂಬುದಕ್ಕೆ ಯಾವ ಐತಿಹಾಸಿಕ ಸಾಕ್ಷ್ಯಾಧಾರಗಳೂ ಇಲ್ಲ. ಧಾರ್ಮಿಕ ಮೆರವಣಿಗಳಲ್ಲಿ ಭಾಗವಹಿಸುವ ಜನರನ್ನು ನಿರುದ್ಯೋಗಿಗಳು, ಬಡವರು ಎಂದು ಈ ವರ್ಗ ವಾದಿಸುತ್ತದೆ. ದೀರ್ಘ ಕನ್ವರ್ ಯಾತ್ರೆಯ ಯಶಸ್ಸಿಗೆ ನಿರುದ್ಯೋಗವೇ ಕಾರಣ ಎಂಬುದಾಗಿಯೂ ಇವರುಗಳು ವಾದಿಸುತ್ತಾರೆ.
ಕೋಟ್ಯಾಂತರ ಜನರು ಪವಿತ್ರ ಸ್ನಾನ ಮಾಡುತ್ತಿರುವ ಕುಂಭಮೇಳದ ಬಗ್ಗೆಯೂ ಇವರು ಇಂತಹುದೇ ವಾದ ಮುಂದಿಡುತ್ತಿದ್ದಾರೆ. ‘ಪಿಂಕ್ ನ್ಯೂಸ್ಪೇಪರ್’ಗಳು ಈ ಧಾರ್ಮಿಕ ಸಮಾವೇಶ ದೇಶದ ನಿರುದ್ಯೋಗ ಮತ್ತು ಬಡತನದ ಸಂಕೇತ ಎಂದು ವಾದಿಸುವ ಲೇಖನಗಳಿಂದ ತುಂಬಿ ಹೋಗಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ ಪ್ರೈ.ಲಿ. ನ ಸಿಇಓ ಮಹೇಶ್ ವ್ಯಾಸ್ ಅವರು, ಬ್ಯುಸಿನೆಸ್ ಸ್ಟ್ಯಾಂಡರ್ಡ್ಗೆ ಲೇಖನವನ್ನು ಬರೆದಿದ್ದು, ಇದರಲ್ಲಿ ಧಾರ್ಮಿಕತೆ ಮತ್ತು ಬಡತನಕ್ಕೆ ನೇರವಾದ ಸಂಬಂಧ ಇದೆ ಎಂದು ವಾದಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಮೇಲ್ವರ್ಗದ ಜನ ಕಡಿಮೆ ಧಾರ್ಮಿಕರಾಗಿರುತ್ತಾರೆ, ಭಾರತಕ್ಕೂ ಇದು ಅನ್ವಯಿಸುತ್ತದೆ ಎಂಬುದು ಬ್ರಿಟಿಷ್ ಮಾನಸಿಕತೆಯ ವ್ಯಾಸ್ ಅವರ ವಾದವಾಗಿದೆ. ಅವರು ಪ್ರಸ್ತಾಪಿಸಿದ ಈ ಥಿಯರಿ ಅಥವಾ ಫ್ಯಾಂಟಸಿಗೆ ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲ.
ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಜೊತೆಗೂಡಿ ಲೋಕನೀತಿ ರಿಸರ್ಚ್ ಪ್ರೋಗ್ರಾಂ ನಡೆಸಿದ ಅಧ್ಯಯನದಲ್ಲಿ, ಭಾರತದಲ್ಲಿ ಧಾರ್ಮಿಕ ಭಾಗಿತ್ವಕ್ಕೆ ವರ್ಗ ವಿಭಾಗಗಳಿಲ್ಲ ಎಂಬುದು ತಿಳಿದು ಬಂದಿದೆ. ಸಮೀಕ್ಷೆಯಲ್ಲಿ, ಎಲ್ಲರಿಗೂ ನೀವು ತುಂಬಾ ಧಾರ್ಮಿಕರೆ, ಸ್ವಲ್ಪ ಮಟ್ಟಿಗೆ ಧಾರ್ಮಿಕರೆ ಅಥವಾ ಧಾರ್ಮಿಕರು ಅಲ್ಲವೇ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಶೇ. 90ಕ್ಕಿಂತಲೂ ಅಧಿಕ ಹಿಂದೂಗಳ ತಮ್ಮನ್ನು ತಾವು ಧಾರ್ಮಿಕರು ಎಂದು ಹೇಳಿಕೊಂಡಿದ್ದಾರೆ. ಶೇ. 31ರಷ್ಟು ಮಂದಿ ತುಂಬಾ ಧಾರ್ಮಿಕರು ಎಂದಿದ್ದಾರೆ, ಶೇ. 60ರಷ್ಟು ಮಂದಿ ಸ್ವಲ್ಪ ಧಾರ್ಮಿಕರು ಎಂದಿದ್ದಾರೆ. ಇದೇ ಸಮೀಕ್ಷೆಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಮೆರವಣಿಗೆ, ಸಮಾರಂಭದಲ್ಲಿ ಭಾಗಿಯಾಗಿದ್ದೀರಾ ಎಂದು ಕೇಳಲಾಗಿದೆ. ಇದಕ್ಕೆ ಶೇ. 51ರಷ್ಟು ಮಂದಿ ಹೌದು ಎಂದಿದ್ದಾರೆ.
ಪಾಶ್ಚಿಮಾತ್ಯ ಮನಸ್ಥಿತಿಯ ಗಣ್ಯರ ವಾದಕ್ಕೆ ವಿರುದ್ಧ ಎಂಬಂತೆ, ಹಿಂದೂ ಧರ್ಮ ಕೇವಲ ವರ್ಗ ಮಾತ್ರವಲ್ಲ ಜಾತಿಯನ್ನೂ ಮೀರಿ ನಿಂತಿದೆ, ಪ್ರಾಯೋಗಿಕ ಪುರಾವೆಯಿದ್ದರೂ ಇದನ್ನು ಈ ಗಣ್ಯರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಮೀಕ್ಷೆಯಲ್ಲಿ, ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾದ ಮೇಲ್ವರ್ಗ ಮತ್ತು ದಲಿತರ ನಡುವಣ ವ್ಯತ್ಯಾಸ ಕೇವಲ ಶೇ.4ರಷ್ಟು ಮಾತ್ರ ಇದೆ. ಶೇ.51ರಷ್ಟು ಮೇಲ್ವರ್ಗದವರು ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ, ಶೇ.47ರಷ್ಟು ದಲಿತರು ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಗ್ರಾಮೀಣ ಮತ್ತು ನಗರ ವಿಭಾಗಗಳು ಕೂಡ ಧಾರ್ಮಿಕ ವಿಭಾಗಗಳನ್ನು ಮಾಡುವಲ್ಲಿ ವಿಫಲವಾಗಿವೆ. ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾದ ಗ್ರಾಮೀಣ ಜನರ ಮತ್ತು ನಗರ ಜನರ ವ್ಯತ್ಯಾಸ ಕೇವಲ ಶೇ.3ರಷ್ಟು ಮಾತ್ರ. ಶೇ.47ರಷ್ಟು ನಗರ ವಾಸಿಗಳು, ಶೇ.50ರಷ್ಟು ಗ್ರಾಮೀಣರು ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಶೇ.54ರಷ್ಟು ಮಹಿಳೆಯರು ಧಾರ್ಮಿಕ ಸಮಾರಂಭಗಳಿಗೆ ನಿರಂತರವಾಗಿ ಹೋಗುತ್ತಾರೆ, ಶೇ.45ರಷ್ಟು ಪುರುಷರು ಧಾರ್ಮಿಕ ಸಮಾವೇಶಗಳಿಗೆ ನಿರಂತರವಾಗಿ ಹೋಗುತ್ತಾರೆ. ಪಾಶ್ಚಿಮಾತ್ಯ ದೇಶಗಳಿಗೆ ವಿರುದ್ಧ ಎಂಬಂತೆ, ಭಾರತೀಯ ಯುವ ಜನತೆ ಹೆಚ್ಚು ಧಾರ್ಮಿಕರಾಗಿದ್ದಾರೆ. 18ರಿಂದ 25 ವರ್ಷದ ಶೇ.52ರಷ್ಟು ಮಂದಿ ನಿರಂತರವಾಗಿ ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ.
ಪ್ರಾದೇಶಿಕ ವಿಭಾಗವನ್ನೂ ಧಾರ್ಮಿಕತೆ ಮೀರಿದ್ದು, ದೇಶದಾದ್ಯಂತ ಜನರು ಧಾರ್ಮಿಕ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಶೇ.53ರಷ್ಟು ಜನ, ಪಶ್ಚಿಮ ಭಾರತದಲ್ಲಿ ಶೇ.52ರಷ್ಟು ಜನ, ದಕ್ಷಿಣ ಭಾರತದಲ್ಲಿ ಶೇ.44 ಜನ, ಪೂರ್ವ ಭಾರತದಲ್ಲಿ ಶೇ.43ರಷ್ಟು ಜನ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವವರಾಗಿದ್ದಾರೆ.
ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಮೀಕ್ಷೆಯು, ಹಿಂದೂ ಬಹುಸಂಖ್ಯಾತರ ಧಾರ್ಮಿಕತೆಯು ಸರ್ವತ್ರವಾಗಿದೆ. ಪಾಶ್ಚಿಮಾತ್ಯ ಶಿಕ್ಷಿತ ಆರ್ಥಿಕ ತಜ್ಞರು ಮತ್ತು ಗಣ್ಯರು ನಿರಂತರವಾಗಿ ಹಿಂದೂ ಸಂಸ್ಕೃತಿಯನ್ನು ಅವಮಾನಿಸಲು ಪ್ರಯತ್ನಿಸಿದ್ದಾರೆ. ಸಾಮಾಜಿಕ ಆರ್ಥಿಕ ನಿಯಮಗಳಿಂದಾಗಿ ಭಾರತದ ಪ್ರಗತಿ ಕುಸಿತವಾಗಿದ್ದಾಗ, ಮೂರ್ಖ ಆರ್ಥಿಕತಜ್ಞರು ಇದನ್ನು ’ಹಿಂದೂ ಪ್ರಗತಿ ದರ’ ಎಂದು ಜರೆದು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸಿದರು. 1990ರಲ್ಲಿ ಆರ್ಥಿಕ ಉದಾರೀಕರಣದಿಂದಾಗಿ, ಭಾರತ ವೇಗದ ಆರ್ಥಿಕತೆಯಾಗಿ ರೂಪುಗೊಂಡಿತು. ಇದು ಧಾರ್ಮಿಕತೆ ಮತ್ತು ನಿರುದ್ಯೋಗದ ಅರ್ಧ ಬೆಂದ ಥಿಯರಿಯನ್ನು ಪ್ರಸ್ತಾಪಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದ ಆರ್ಥಿಕತಜ್ಞರಿಗೆ ಕಪಾಳಮೋಕ್ಷದಂತಾಯಿತು. ಕಡಿಮೆ ಆರ್ಥಿಕ ಪ್ರಗತಿಗೆ ಹಿಂದೂ ಧರ್ಮವನ್ನು ಇನ್ನು ದೂರಲು ಸಾಧ್ಯವಿಲ್ಲ ಎಂದು ಅರಿತಿರುವ ವಸಾಹತುಶಾಹಿ ಮನಸ್ಥಿತಿಯ ಸಾಂಸ್ಕೃತಿಕ ಮಾರ್ಕ್ಸ್ವಾದಿಗಳು ಈಗ ಬಡತನ ಮತ್ತು ನಿರುದ್ಯೋಗದತ್ತ ವಾಲಿದ್ದಾರೆ. ಆದರೆ ಎಲ್ಲಾ ಪ್ರಾಯೋಗಿಕ ಪುರಾವೆಗಳು ಅವರ ವಿರುದ್ಧವೇ ಇದೆ ಎಂಬುದು ಸತ್ಯ.
source: rightlog.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.