ನಾವಿಷ್ಟು ದಿನ ನಮ್ಮ ದೇಶ ಅಭಿವೃದ್ಧಿ ಹೊಂದದೇ ಇರಲು ಗಾಂಧೀಜಿಯವರು ಪಟೇಲರ ಜಾಗದಲ್ಲಿ ನೆಹರುರವರನ್ನು ಆಯ್ಕೆ ಮಾಡಿದ್ದೇ ಕಾರಣ ಎಂದು ಅವಕಾಶ ಸಿಕ್ಕಿದಾಗಲೆಲ್ಲಾ ಹೇಳುತ್ತಲೇ ಇರುತ್ತೇವೆ. ಸರ್ದಾರ್ ವಲ್ಲಭಭಾಯ್ ಪಟೇಲ್ರವರು ಎಲ್ಲಾದರೂ ನಮ್ಮ ಮೊದಲ ಪ್ರಧಾನಮಂತ್ರಿ ಆಗಿರುತ್ತಿದ್ದಿದ್ದರೆ ಈ ದೇಶದ ಚಿತ್ರಣವೇ ಬೇರೆ ಆಗಿರುತ್ತಿತ್ತು ಎಂದು ಕಲ್ಪನಾ ಲೋಕಕ್ಕೆ ಹೋಗಿಬಿಡುತ್ತೇವೆ ಕೂಡ.
ಆದರೆ ನಾವು ಇಷ್ಟು ವರ್ಷಗಳಾದರೂ ಒಂದನ್ನು ಅರ್ಥಮಾಡಿಕೊಂಡೇ ಇಲ್ಲ. ಅದೇನೆಂದರೆ ಒಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೇವಲ ಪ್ರಧಾನಮಂತ್ರಿಯಷ್ಟೇ ಸಮರ್ಥರಾಗಿದ್ದರೆ ಸಾಲದು ಆ ಸಮರ್ಥರಿಗೆ “ಹೆಗಲಿಗೆ ಹೆಗಲು ಕೊಡುವ ಜನರು ಬೇಕೆಂಬುದು! ಅಂದು ಪಟೇಲರು ಪ್ರಧಾನಮಂತ್ರಿಯಾಗುತ್ತಿದ್ದರೂ ಜನ ನೆಹರುರವರನ್ನು ಗೆಲ್ಲಿಸಿದ ರೀತಿಯಲ್ಲಿ ಮತ್ತೆ ಮತ್ತೆ ಗೆಲ್ಲಿಸುತ್ತಿದ್ದರೇ ಎಂಬುದು ಯೋಚಿಸಬೇಕಾದ ವಿಚಾರ.
ಯಾಕೆಂದರೆ ಜನ ಅಭಿವೃದ್ಧಿ ಹೊಂದದೇ ಇರಲು ನೆಹರು ಕುಟುಂಬ ಹಾಗೂ ಕಾಂಗ್ರೇಸ್ ಕಾರಣ ಎಂದು “ಹರಟೆಕಟ್ಟೆ”ಯಲ್ಲಿ ಕುಳಿತು ಹೇಳಿಕೊಳ್ಳುತ್ತಿದ್ದರೇ ಹೊರತು ಅವರ ಜಾಗಕ್ಕೆ ಬೇರೆಯವರನ್ನು ಗೆಲ್ಲಿಸಬೇಕೆಂಬ ಕಡೆಗೆ ಪ್ರಯತ್ನ ಮಾಡೇ ಇರಲಿಲ್ಲ.
ಶ್ಯಾಮ್ಪ್ರಸಾದ್ ಮುಖರ್ಜಿಯವರು ಪಕ್ಷ ಕಟ್ಟಿದ್ದು ಯಾವಾಗ ಅದು ಬಿಜೆಪಿಯ ರೂಪ ತಳೆದು ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದು ಯಾವಾಗ? ಎಷ್ಟು ವರ್ಷಗಳ ಹರ ಸಾಹಸದ ನಂತರ ಪ್ರಧಾನಮಂತ್ರಿಯಾಗಿ ವಾಜಪೇಯಿಯವರು ಅತೀ ಉತ್ತಮ ಆಡಳಿತ ನೀಡಿದರೂ ಕೂಡ ದಿನಬೆಳಗಾದರೆ ನೆಹರು, ಇಂದಿರಾ ಕಾಂಗ್ರೇಸಿನವರಿಂದ ದೇಶ ಹಾಳಾಯಿತು ಎನ್ನುತ್ತಿದ್ದ ನಮ್ಮ ಜನ ಮತ್ತೊಂದು ಅವಕಾಶ ವಾಜಪೇಯಿಯವರಿಗೆ ಕೊಡಲೇ ಇಲ್ಲ. ಅವರದೇ ಹಾದಿಯಲ್ಲಿ ಸಾಗುತ್ತಿದ್ದ ಅಡ್ವಾಣಿಯವರಿಗೂ ಅವಕಾಶ ಕೊಡಲೇ ಇಲ್ಲ. ಅದರ ಬದಲು ಸೋನಿಯಾ ಗಾಂಧಿಯವರ ಅಡಿಯಾಳಾಗಿ ಹೆಸರಿಗೆ ಮಾತ್ರ ಪ್ರಧಾನಮಂತ್ರಿಯಾಗಿದ್ದ ಮನಮೋಹನ ಸಿಂಗ್ ರವರನ್ನು ಮತ್ತೆ ಮತ್ತೆ ಗೆಲ್ಲಿಸುತ್ತಾ ಬಂದ ಪರಂಪರೆ ಈ ಭಾರತೀಯರದ್ದು.
ಆದರೆ ಆ ಹತ್ತು ವರ್ಷಗಳ ಮನಮೋಹನ್ ಸಿಂಗ್ ಆಡಳಿತ ಮತ್ತು ಹಗರಣಗಳಿಂದ ಬೇಸತ್ತು ಬದಲಾವಣೆಯ ಜೊತೆಗೆ ಅಭಿವೃದ್ಧಿಯೇ ಮೂಲಮಂತ್ರವಾಗಬೇಕೆಂದು ಮೋದಿಯವರನ್ನು ಗೆಲ್ಲಿಸಿದಾಗ ಜನರ ಆಸೆಗಳು ನಿರಾಸೆಯಾಗಬಾರದೆಂದು ರಾತ್ರಿಹಗಲೆನ್ನದೇ ವೈಯಕ್ತಿಕ ಜೀವನದತ್ತ ಯೋಚಿಸದೇ ಶಕ್ತಿಮೀರಿ ಕೆಲಸ ಮಾಡಿದ್ದು ನಮ್ಮ ಎದುರಿಗೇ ಕಾಣುತ್ತಿದ್ದರೂ ನಾವಿಂದು ವಿರೋಧ ಪಕ್ಷಗಳ “ಸುಳ್ಳಿನ ಷಡ್ಯಂತ್ರ”ಕ್ಕೆ ಬಲಿಯಾಗುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ.
ಎಷ್ಟೋ ಜನ “ಅಯ್ಯೋ… ಯಾಕೆ ತಲೆಕೆಡಿಸಿಕೊಳ್ಳುತ್ತೀರಾ? ಈ ಬಾರಿ ಮೋದಿಯೇ ಮತ್ತೆ ಗೆಲ್ಲುವುದು” ಎನ್ನುತ್ತಾರೆ. ಆದರೆ ನಾವಿಲ್ಲಿ ಯೋಚಿಸಬೇಕಾದ ವಿಚಾರವೆಂದರೆ ಮೋದಿಯವರ ಗೆಲುವು “Just pass ” ಆಗಿರುತ್ತದೆಯೋ ಅಥವಾ ” distinction “ನಲ್ಲಿ ಅವರು ಪಾಸಾಗುತ್ತಾರೋ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಚುನಾವಣೆಯಲ್ಲಿ Just pass ಎಂದಾದರೆ ಮೋದಿಯವರಿಂದ ಒಂದು ಹೆಜ್ಜೆಯೂ ಮುಂದಿಡಲು ಈ ವಿರೋಧಪಕ್ಷಗಳು ಬಿಡಲಾರವು.
ಕೇವಲ 44 ಸೀಟು ಗಳಿಸಿದ್ದರೂ ಕಾಂಗ್ರೇಸ್ ಕಳೆದ 5 ವರ್ಷಗಳಲ್ಲಿ ಎನೆಲ್ಲಾ ನಡೆಸಿತೆಂದು ಒಮ್ಮೆ ಹಿಂತಿರುಗಿ ನೋಡಿದರೆ ನಿಮಗೆ ಕಾಣಿಸುವುದು – ಅಸಹಿಷ್ಣುತೆ, ಅವಾರ್ಡ್ ವಾಪ್ಸಿ, ಸಂವಿಧಾನ ಅಪಾಯದ ಸ್ಥಿತಿಯಲ್ಲಿದೆ, ನ್ಯಾಯಾಂಗ ಅಪಾಯದಲ್ಲಿದೆ, ಕತುವಾ ರೇಪ್ ಪ್ರಕರಣ, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಅಪಾಯ, JNU ದೇಶ ವಿರೋಧಿ ಅಭಿಯಾನ, ಬೀಮಾ – ಕೋರೆಗಾವ್ ದಂಗೆ, ಎಮರ್ಜೆನ್ಸಿ ಸ್ಥಿತಿ, ರಫೆಲ್ ಹಗರಣ ಎದುರಾಗಿದೆ ಹೀಗೆ ಜನರೆದುರು ಒಂದು ದೊಡ್ಡ “ಸುಳ್ಳಿನ ಪ್ರಪಂಚ”ವನ್ನೇ ಸೃಷ್ಟಿಸುವ ಮೂಲಕ ಮೋದಿ ಸರಕಾರದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪದೇ ಇರಲು ಹರಸಾಹಸ ವಿರೋಧಪಕ್ಷಗಳಿಂದ ನಡೆಯಿತು.
ಕೆಲವು ಸುದ್ದಿಗಳನ್ನು ಪಾಕಿಸ್ತಾನ ಹಾಗೂ ವಿದೇಶಗಳ ಸುದ್ದಿ ಮಾದ್ಯಮದಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಭಾರತ ದೇಶದಾದ್ಯಂತ ಪಶ್ಚಿಮ ಬಂಗಾಳವೂ ಸೇರಿದಂತೆ ಊರಿಗೆ ಊರೇ ಉರಿದು ಹಿಂದೂಗಳು ಮನೆ ಮಠ ಕಳೆದುಕೊಂಡು ಊರೇ ಬಿಟ್ಟು ಹೋದ ವಿಚಾರಗಳು ಭಾರತದ ಮಾದ್ಯಮಗಳಲ್ಲೇ ಸುದ್ದಿಯಾಗದ ರೀತಿ ನೋಡಿಕೊಳ್ಳಲಾಗುತ್ತದೆ. ದೆಹಲಿಯ ರೈಲಿನಲ್ಲಿ ಸೀಟಿಗಾಗಿ ನಡೆದ ಗಲಾಟೆಯನ್ನು ಕೋಮುಗಲಭೆಯ ಚಿತ್ರಣ ನೀಡಿ ರಾಷ್ಟ್ರೀಯ ಚರ್ಚೆಯಾಗುವಂತೆ ನೋಡಲಾಯಿತು. ಆದರೆ ಕರ್ನಾಟಕ ಕೇರಳಗಳಲ್ಲಿ ನಡೆದ ಹಿಂದೂಗಳ ಸರಣಿ ಕೊಲೆಗಳು ಆಯಾಯ ಸ್ಥಳಗಳಿಗೆ ಸೀಮಿತಗೊಳಿಸಲಾಯಿತು. ಬಿಜೆಪಿ ಆಡಳಿತದ ಸಮಯದಲ್ಲಿ ಸೈನಿಕರ ಮಾರಣ ಹೋಮ ಮಾಡುತ್ತಿದ್ದ ಛತ್ತೀಸ್ಘಡದ ನಕ್ಸಲರು ಕಾಂಗ್ರೇಸ್ ಸರಕಾರ ಬರುತ್ತಲೇ ಸೈಲೆಂಟ್ ಆಗಿವೆ! ಕತುವಾ ರೇಪ್ ಪ್ರಕರಣವನ್ನು ವಿಶ್ವದಾದ್ಯಂತ ಮುಸ್ಲಿಂ ಹುಡುಗಿಯ ಮೇಲೆ ಹಿಂದೂಗಳ ರೇಪ್ ಎಂದಾಗಿ ಪ್ರಚಾರ ಮಾಡಿಸಿದ ಶಕ್ತಿ ಅದೇ ಸಮಯದಲ್ಲಿ ಗುಜರಾತಿನಲ್ಲಿ ಹಿಂದೂ ಹುಡುಗಿಯ ಮೇಲೆ ಮುಸ್ಲಿಂ ಯುವಕರಿಂದ ನಡೆದ ರೇಪನ್ನು ಮುಖ್ಯವಾಣಿಗೆ ಬರದೇ ಇರುವಂತೆ ನೋಡಿಕೊಂಡರು! ಸ್ವಾಮಿಜೀಗಳೆನಿಸಿದವರ ಲೈಂಗಿಕ ಪ್ರಕರಣಗಳನ್ನು ದಿನಪೂರ್ತಿ ಪ್ರಚಾರ ಮಾಡುವಂತೆ ನೋಡಿಕೊಳ್ಳುವವರು ಮೌಲ್ವಿಗಳ ಮತ್ತು ಬಿಷಪ್ಗಳ ಲೈಂಗಿಕ ಪ್ರಕರಣಗಳನ್ನು ಒಂದು ಲೈನಿಗೆ ಸೀಮಿತಗೊಳಿಸಲು ಯಶಸ್ವಿಯಾಗುತ್ತಾರೆ! ಹೀಗೆ ದೇಶದ ಜನರಲ್ಲಿ ಮೋದಿ ಸರಕಾರದ ಅಭಿವೃದ್ಧಿಗಳ ಸುದ್ದಿಯ ಜಾಗದಲ್ಲಿ ಜನಜೀವನ ಅಪಾಯದಲ್ಲಿದೆಯೆಂಬ ಭಾವನೆಯನ್ನೇ ಸೃಷ್ಟಿ ಮಾಡುತ್ತಾ ಬರುತ್ತಿರುವುದು ಈ ಜನರ ಕಣ್ಣಿಗೆ ಯಾಕೆ ಕಾಣುತ್ತಿಲ್ಲವೋ ಆ ದೇವರೇ ಬಲ್ಲ..!!
ಮೋದಿ ಸರಕಾರದಲ್ಲಿ ನಮ್ಮ ದೇಶವು ಅಭಿವೃದ್ಧಿ ಪಥದಲ್ಲಿ ನಾಗಾಲೋಟದಲ್ಲಿದ್ದರೂ ಅದನ್ನು ಮುಂದುವರಿಸಲು ಜನ ಅವಕಾಶ ನೀಡದೇ ಇದ್ದಲ್ಲಿ ನಾವಿಂದು ನಮ್ಮ ಇತಿಹಾಸದ ಬಗ್ಗೆ ಮಾತಾಡಿಕೊಳ್ಳುವ ರೀತಿಯಲ್ಲೇ ನಮ್ಮ ಇಂದಿನ ಪೆದ್ದುತನದ ಅಥವಾ ಸಣ್ಣತನದ ಬಗ್ಗೆ ನಮ್ಮ ಮುಂದಿನ ಪೀಳಿಗೆ ಕೂಡ ಮಾತಾಡಿಕೊಳ್ಳಲಿದೆ ಎಂಬುದು ನಾವೆಲ್ಲಾ ನೆನಪಿನಲ್ಲಿಡಬೇಕಾದ ಕಟು ಸತ್ಯ ಸ್ನೇಹಿತರೇ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.