ನವದೆಹಲಿ: ತನ್ನ ತಾಯಿಗೆ ತಾನು ಪ್ರಧಾನಿಯಾದ ಕ್ಷಣ ಅಷ್ಟೊಂದು ಮಹತ್ವದ್ದಾಗಿರಲಿಲ್ಲ, ನಾನು ಗುಜರಾತ್ ಸಿಎಂ ಆಗಿ ಮೊದಲು ಆಯ್ಕೆಯಾದದ್ದು ಅವರ ಮಹತ್ವದ ಕ್ಷಣವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.
ಜನಪ್ರಿಯ ಸೋಶಿಯಲ್ ಮೀಡಿಯಾ ಪೇಜ್ ಹ್ಯೂಮನ್ಸ್ ಆಫ್ ಬಾಂಬೆಗೆ ಸಂದರ್ಶನ ನೀಡಿರುವ ಅವರು, ‘ಬಹಳಷ್ಟು ಜನರು ನೀವು ಪ್ರಧಾನಿಯಾದಾಗ ನಿಮ್ಮ ತಾಯಿಗೆ ಏನು ಅನಿಸಿತ್ತು ಎಂದು ಕೇಳುತ್ತಿರುತ್ತಾರೆ. ಆಗ ನನ್ನ ಹೆಸರು ಗಾಳಿಯಲ್ಲಿ ತೇಲುತ್ತಿತ್ತು, ನನ್ನ ಫೋಟೋಗಳು ಪ್ರಿಂಟ್ ಆಗುತ್ತಿದ್ದವು, ಎಲ್ಲ ಕಡೆಯೂ ಉತ್ಸಾಹವಿತ್ತು, ಆದರೆ ನನಗನಿಸುತ್ತದೆ ನನ್ನ ತಾಯಿಗೆ ಅದು ಮಹತ್ವದ ಕ್ಷಣವಾಗಿರಲಿಲ್ಲ, ಆದರೆ ನಾನು ಗುಜರಾತ್ ಸಿಎಂ ಆಗಿದ್ದು ಅವರಿಗೆ ಮಹತ್ವದ ಕ್ಷಣವಾಗಿತ್ತು’ ಎಂದಿದ್ದಾರೆ.
ಗುಜರಾತ್ ಸಿಎಂ ಆಗುತ್ತೇನೆ ಎಂದು ತಿಳಿದಾಗ ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೆ, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಾನು ಅಮ್ಮನ ಬಳಿಗೆ ಹೋಗಿದ್ದೆ. ಆಗ ಆಕೆ ನನ್ನನ್ನು ತಬ್ಬಿಕೊಂಡು, ಕನಿಷ್ಠ ಈಗಲಾದರೂ ನೀನು ಗುಜರಾತಿನಲ್ಲಿರುತ್ತೀಯಲ್ಲ ಎಂದಿದ್ದಳು.
ಅಮ್ಮನ ಮನಸ್ಸು ಹಾಗೆಯೇ ಇರುತ್ತದೆ. ಆಕೆಯ ಸುತ್ತ ಏನು ನಡೆಯುತ್ತಿದೆ ಎಂದೆಲ್ಲಾ ಆಕೆ ಚಿಂತಿಸಲಾರಳು, ಮಗ ತನ್ನ ಸಮೀಪದಲ್ಲಿರಬೇಕು ಎಂಬುದು ಆಕೆಯ ಯೋಚನೆಯಾಗಿರುತ್ತದೆ ಎಂದಿದ್ದಾರೆ.
‘ನೀನು ಏನು ಮಾಡುತ್ತಿಯೋ ನನಗೆ ಗೊತ್ತಿಲ್ಲ, ಆದರೆ ಒಂದು ಮಾತು ಕೊಡು, ಎಂದಿಗೂ ಲಂಚ ಪಡೆಯುವುದಿಲ್ಲ ಎಂದು’ ಎಂಬುದಾಗಿ ಅಮ್ಮ ತನ್ನ ಬಳಿ ಮಾತು ತೆಗದುಕೊಂಡಿದ್ದನ್ನು ಮೋದಿ ಜ್ಞಾಪಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.