ಕಾಶ್ಮೀರಿ ಯುವತಿಯೊಬ್ಬಳನ್ನು ಇಸಿಸ್ ಮಾದರಿಯಲ್ಲಿ ಪೈಶಾಚಿಕವಾಗಿ ಕೊಂದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಘಟನೆ ನಡೆದು ಮೂರು ದಿನಗಳೇ ಕಳೆದಿವೆ. ಪುಲ್ವಾಮದ ಡೇಂಜರ್ಪುರದ ನಿವಾಸಿ, 25 ವರ್ಷದ ಇಶ್ರತ್ ಮುನೀರ್ ಎಂಬಾಕೆಗೆ ಪಾಕಿಸ್ಥಾನ ಮೂಲದ ಉಗ್ರರು ಶರಿಯತ್ ಕಾನೂನಿನ ಅನ್ವಯ ಶಿಕ್ಷೆಯನ್ನು ನೀಡಿ ಕೊಂದೇ ಹಾಕಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಪಾಕಿಸ್ಥಾನಿಯರು ತಮ್ಮ ಶರಿಯಾ ಸಾಮ್ರಾಜ್ಯವನ್ನು ಸ್ಥಾಪನೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತದೆ. ದುರಾದೃಷ್ಟವೆಂದರೆ, ಪಾಕಿಸ್ಥಾನೀಯರ ಆರ್ಭಟ ದಿನಕ್ಕಿಂತ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
एक आतंकी की बहन, जिसकी आंखों में ‘आतंकवाद से आज़ाद’ कश्मीर का ख्वाब था, कायर आतंकियों ने की हत्या
कश्मीर घाटी में आतंकियों ने आतंक की नयी हद पार की है, घाटी में अब महिलाएं भी आतंकियों से सुरक्षित नहीं हैं। गुरूवार रात जम्मू कश्मीर में एक वीडियो वायरल हुआ, जिसमें आतंकी फेरन पहने एक मासूम लड़की की लाइव हत्या कर रहे हैं। 10 सेकंड के इस वीडियो में लड़की हाथ जोड़े घुटनों बल बैठी है, तभी अचानक आतंकी उसके सर में 2 गोलियां मारते हैं। इस्लामिक स्टेट स्टाइल आतंकियों की ये कायराना बर्बरता देख आपका खून खौलने लगेगा, कि आतंकी घाटी में किस कदर हैवानियत पर उतर आये हैं। शुक्रवार सुबह तक वीडियों से जुड़ी तमाम
ಆಘಾತಕಾರಿ ವಿಷಯವೆಂದರೆ, ದೇಶದಾದ್ಯಂತ ಎಲ್ಲಾ ಬುದ್ಧಿಜೀವಿ ಪತ್ರಕರ್ತರು, ಹೋರಾಟಗಾರರು ಈ ವಿಷಯದ ಬಗ್ಗೆ ಸ್ಮಶಾನ ಮೌನ ವಹಿಸಿದಂತಿದೆ. ಈ ಮುಸಲ್ಮಾನ ಕಾಶ್ಮೀರಿ ಮಹಿಳೆಯ ಹತ್ಯೆಯ ಬಗ್ಗೆ ಒಂದು ಚಕಾರವನ್ನೂ ಅವರು ಎತ್ತಿಲ್ಲ. ಓರ್ವ ಉಗ್ರನ ಹತ್ಯೆಯ ಬಗ್ಗೆ ನೂರಾರು ಟ್ವೀಟ್ಗಳನ್ನು ಮಾಡುವ ರಾಜ್ದೀಪ್ ಸರ್ದೇಸಾಯಿ, ಬರ್ಖಾ ದತ್ತ್, ರವೀಶ್ ಕುಮಾರ್, ನಿಧಿ ರಾಜ್ದನ್, ಶೋಹಲ್ ರಶೀದಿ ಮುಂತಾದವರು ಈ ವಿಷಯದಲ್ಲಿ ಒಂದು ಟ್ವೀಟ್ ಮಾಡುವುದಿರಲಿ, ಕಾಶ್ಮೀರದ ಬಗ್ಗೆ ಒಂದು ಮಾತನ್ನೂ ಕೂಡಾ ಆಡಿಲ್ಲ.
ಬುದ್ಧಿಜೀವಿಗಳ ಈ ಮೌನ ಯಾಕೆ? ಇದಕ್ಕೆ ಈ ಕೆಳಗಿನ ಕಾರಣಗಳಿರಬಹುದು ಎಂದೆನಿಸುತ್ತದೆ.
⭕ ಮೊದಲ ಕಾರಣ, ಅವರು ಯುವತಿಯ ಹತ್ಯೆಯ ಕಾರಣವನ್ನು ಸಮರ್ಥಿಸುತ್ತಾರೆ, ಉಗ್ರರು ನೀಡಿದ ಹತ್ಯೆಯ ಶಿಕ್ಷೆ ಸರಿಯಾದದ್ದು ಎಂದು ಅವರು ಒಪ್ಪುತ್ತಿರಬಹುದು.
⭕ ಎರಡನೇ ಕಾರಣ, ಕಾಶ್ಮೀರದಲ್ಲಿ ಉಗ್ರರ ಅಂತ್ಯದ ಕನಸನ್ನು ಕಾಣುವ ಹಕ್ಕು ಜನ ಸಾಮಾನ್ಯನಿಗೆ ಇಲ್ಲ ಎಂಬುದು ಅವರ ಅನಿಸಿಕೆ ಇರಬಹುದು, ಆ ರೀತಿ ಕನಸು ಕಾಣುವವರ ಪರಿಸ್ಥಿತಿ ಇದೇ ಆಗಿರುತ್ತದೆ ಎಂದು ನಿರ್ಧರಿಸಿದಂತಿದೆ.
⭕ ಮೂರನೇ ಕಾರಣ, ವ್ಯಕ್ತಿತ್ವಕ್ಕೆ ಧಕ್ಕೆ ಬರಬಹುದೆಂಬ ಭಯ ಒಂದೆಡೆ. ಈ ಬುದ್ಧಿಜೀವಿಗಳಿಗೆ ಯುವತಿಯ ಹತ್ಯೆಯ ನೋವಿದೆ, ಆದರೆ ಅದನ್ನು ಖಂಡಿಸುವುದರಿಂದ ಉಗ್ರರ ಮತ್ತು ಪ್ರತ್ಯೇಕತಾವಾದಿಗಳ ನಡುವೆ ಅವರ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ಕಡಿಮೆ ಆಗಬಹುದು ಎಂಬ ಭಯವಿರಬಹುದು.
⭕ ನಾಲ್ಕನೇ ಕಾರಣ, ಬುದ್ಧಿಜೀವಿಗಳ ಬಳಿ ಈ ಸುದ್ದಿ ತಲುಪಿಯೇ ಇಲ್ಲ. ಈ ಸಂಭವ ಶೇ.೧೦೦ರಷ್ಟು ಅಸಂಭವ ಎಂದೆನಿಸುತ್ತದೆ. ಸುದ್ದಿ ಉದ್ಯಮದಲ್ಲಿ ಇರುವವರು ಅವರಿಗೆ ಇಡೀ ದೇಶವನ್ನು ತಲ್ಲಣಗೊಳಿಸಿದ, ಇಡೀ ಕಾಶ್ಮೀರ ಖಂಡಿಸುತ್ತಿರುವ ಈ ಸುದ್ದಿ ತಲುಪದಿರುವುದು ಅಸಂಭವ.
⭕ ಐದನೇ ಕಾರಣ, ಅವರ ಅಜೆಂಡಾ ರಾಜಕೀಯಕ್ಕೆ ಈ ಸುದ್ದಿ ಹೊಂದಿಕೆಯಾಗುತ್ತಿಲ್ಲವೇನೋ. ಹೀಗಾಗಿ ಇಶ್ರತ್ ಸುದ್ದಿಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸುತ್ತದೆ.
ಕಾರಣ ಏನೇ ಇರಬಹುದು, ಆದರೆ ಇದು ಆಘಾತಕಾರಿಯಾಗಿದೆ. ಇದು ಬುದ್ಧಿಜೀವಿಗಳು ಮತ್ತು ಅವರ ಅಜೆಂಡಾವನ್ನು ಬಹಿರಂಗಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.