ನವದೆಹಲಿ: ದೇಶದ ಅತೀದೊಡ್ಡ ಉದ್ಯೋಗದಾತನಾಗಿರುವ ಭಾರತೀಯ ರೈಲ್ವೇಯು ಮುಂದಿನ ಎರಡು ವರ್ಷಗಳಲ್ಲಿ 2,30,000 ಹೆಚ್ಚುವರಿ ಖಾಲಿಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿದೆ.
ಪ್ರಸ್ತುತ ಅನುಷ್ಠಾನದಲ್ಲಿರುವ ರೈಲ್ವೇ ನೇಮಕಾತಿ ಮಂಡಳಿ ಉದ್ಯೋಗ ಅಭಿಯಾನದ ಭಾಗವಾಗಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಹೊಸದಾಗಿ ಪರಿಚಯಿಸಿರುವ ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ರೈಲ್ವೇಯ ಈ ಹೊಸ ನೇಮಕಾತಿಗೆ ಅನ್ವಯಿಸಲಿದೆ.
ನೇಮಕಾತಿ ಪ್ರಕ್ರಿಯೆಯು ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತ 2019ರ ಫೆಬ್ರವರಿ-ಮಾರ್ಚ್ನಲ್ಲಿ ಆರಂಭವಾಗಲಿದ್ದು, 2020ರ ಎಪ್ರಿಲ್-ಮೇನಲ್ಲಿ ಅಂತ್ಯವಾಗಲಿದೆ. ಇಲ್ಲಿ 1,31,428 ನೇಮಕಾತಿಗಳನ್ನು ಮಾಡಲಾಗುತ್ತದೆ. ಎರಡನೇ ಹಂತ 2020ರ ಮೇ-ಜೂನ್ನಿಂದ ಆರಂಭವಾಗಲಿದ್ದು, 2021ರ ಜುಲೈ-ಆಗಸ್ಟ್ಗೆ ಅಂತ್ಯವಾಗಲಿದೆ. 99 ಸಾವಿರ ಹುದ್ದೆಗಳಿಗೆ ನೇಮಕಾತಿಯಾಗಲಿದೆ.
ವಿಶೇಷವೆಂದರೆ ಶೇ.10ರಷ್ಟು ಮೀಸಲಾತಿ ಕೆಟಗರಿಯಲ್ಲಿ 23 ಸಾವಿರ ಮಂದಿ ನೇಮಕವಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.