ನವದೆಹಲಿ: ಸರ್ಕಾರ, ಉದ್ಯಮ, ಎನ್ಜಿಓ, ಮಾಧ್ಯಮಗಳ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಅತ್ಯಂತ ವಿಶ್ವಾಸಾರ್ಹ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಡಾವೋಸ್ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ಸಭೆಯ ಹಿನ್ನಲೆಯಲ್ಲಿ ನಿನ್ನೆ ‘2019 ಎಡೆಲ್ಮನ್ ಟ್ರಸ್ಟ್ ಬರೋಮೀಟರ್’ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ಜಾಗತಿಕ ವಿಶ್ವಾಸ ಸೂಚ್ಯಾಂಕ ಮೂರು ಪಾಯಿಂಟ್ಗಳ ಏರಿಕೆಯನ್ನು ಕಂಡಿದೆ.
ಈ ಭರವಸೆ ಸೂಚ್ಯಾಂಕದಲ್ಲಿ ಸಾರ್ವಜನಿಕರಿಗೆ ಮಾಹಿತಿ ಮತ್ತು ಸಾಮಾನ್ಯ ಜನಸಂಖ್ಯಾ ವಲಯದಲ್ಲಿ ಚೀನಾ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಸಾರ್ವಜನಿಕರಿಗೆ ಮಾಹಿತಿ ಕೆಟಗರಿಯಲ್ಲಿ ಎರಡನೇ ಸ್ಥಾನ ಮತ್ತು ಸಾಮಾನ್ಯ ಜನಸಂಖ್ಯಾ ಕೆಟಗರಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
ಎನ್ಜಿಓ, ಉದ್ಯಮ, ಸರ್ಕಾರ ಮತ್ತು ಮಾಧ್ಯಮಗಳ ಸರಾಸರಿ ಶೇಕಡಾವಾರು ವಿಶ್ವಾಸದ ಸೂಚ್ಯಾಂಕ ಇದಾಗಿದೆ.
ಕಳೆದ ಅಕ್ಟೋಬರ್ನಿಂದ ನವೆಂಬರ್ವರೆಗೆ 27 ಮಾರುಕಟ್ಟೆಯನ್ನು ಒಳಗೊಂಡ 33 ಸಾವಿರ ಮಂದಿಯ ಸ್ಪಂದನೆಯನ್ನು ಆಧರಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.
source: http://www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.