ನವದೆಹಲಿ: ಬರಹಗಾರ ಚೇತನ್ ಭಗತ್ ಅವರು ಸಮಸ್ತ ಭಾರತೀಯರು ಹೆಮ್ಮೆಪಡುವಂತಹ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕತ್ರಾ ರೈಲ್ವೇ ಸ್ಟೇಶನ್ನ ಫೋಟೋವನ್ನು ಹಂಚಿಕೊಂಡಿರುವ ಅವರು, ಇದು ದೇಶದ ಅತೀ ಸ್ವಚ್ಛ ಸ್ಟೇಶನ್ ಎಂದು ಹೇಳಿದ್ದಾರೆ. ಇಲ್ಲಿನ ನೆಲಗಳು ಹೊಳೆಯುತ್ತಿವೆ, ಇದು ವಿಮಾನನಿಲ್ದಾಣದ ಅಥವಾ ವಿದೇಶದ ರೈಲ್ವೇ ನಿಲ್ದಾಣ ಅಂದುಕೊಮಡರೆ ತಪ್ಪು. ಇದು ಭಾರತದ ರೈಲ್ವೇ ನಿಲ್ದಾಣ ಎಂದಿದ್ದಾರೆ.
ಅವರು ಹಂಚಿಕೊಂಡಿರುವ ಫೋಟೋದಲ್ಲಿನ ರೈಲ್ವೇ ಸ್ಟೇಶನ್ ಅತ್ಯಂತ ಸ್ಚವ್ಛವಾಗಿದ್ದು, ಅದರ ಫ್ಲೋರ್ಗಳು ಬೆಳಕಿನಂತೆ ಹೊಳೆಯುತ್ತಿವೆ. ದೇಶ ಇತರ ರೈಲು ನಿಲ್ದಾಣಗಳಿಗಿಂತ ಇದು ಅತ್ಯಂತ ಸ್ವಚ್ಛವಾಗಿ ಕಾಣುತ್ತಿದೆ.
ಕತ್ರಾ ಸ್ಟೇಶನ್ ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಇರುವ ಪ್ರವೇಶ ದ್ವಾರವಾಗಿದೆ.
The shiny clean floors in the pictures are not at an airport or a station abroad. This is the railway station in Katra. One of the cleanest stations in India, at one of the holiest places on the planet! pic.twitter.com/SBgKbXLeYG
— Chetan Bhagat (@chetan_bhagat) January 17, 2019