ಕೊಲ್ಲಂ: ಕೇರಳದ ಎಲ್ಡಿಎಫ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯವನ್ನು ಈ ಸರ್ಕಾರ ನಿರ್ವಹಿಸಿದ ರೀತಿ ನಿಜಕ್ಕೂ ನಾಚಿಗೇಡಿನದ್ದಾಗಿದೆ ಎಂದಿದ್ದಾರೆ.
ಕೊಲ್ಲಂ ಜಿಲ್ಲೆಯಲ್ಲಿ ರಸ್ತೆ ಯೋಜನೆಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಶಬರಿಮಲೆ ವಿವಾದ ಬಗ್ಗೆ ಪಿನರಾಯಿ ವಿಜಯನ್ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಮ್ಯೂನಿಸ್ಟರು ಭಾರತದ ಇತಿಹಾಸ, ಆಧ್ಯಾತ್ಮ, ಸಂಸ್ಕೃತಿಯನ್ನು ಎಂದಿಗೂ ಗೌರವಿಸುವುದಿಲ್ಲ ಎಂದಿದ್ದಾರೆ.
‘ಶಬರಿಮಲೆ ವಿವಾದವನ್ನು ಈ ಸರ್ಕಾರ ನಿರ್ವಹಿಸಿದ ರೀತಿ ಅತೀ ಕೆಟ್ಟ ಚರಿತ್ರೆಯಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ನಮಗೆ ಗೊತ್ತಿದೆ ಕಮ್ಯೂನಿಸ್ಟರು ಭಾರತದ ಸಂಸ್ಕೃತಿ, ಇತಿಹಾಸ, ಆಧ್ಯಾತ್ಮವನ್ನು ಗೌರವಿಸುವುದಿಲ್ಲ ಎಂದು. ಆದರೆ ಅವರು ಈ ಮಟ್ಟದ ದ್ವೇಷಕ್ಕೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ’ ಎಂದಿದ್ದಾರೆ.
ಅಲ್ಲದೇ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಶಬರಿಮಲೆ ವಿಷಯದಲ್ಲಿ ನಿಲುವನ್ನು ಆ ಪಕ್ಷ ಸ್ಪಷ್ಟಪಡಿಸಬೇಕು ಎಂದರು.
ಕಾಂಗ್ರೆಸ್ಸಿಗರು ಸಂಸತ್ತಿನಲ್ಲಿ ಒಂದು ನಿಲುವು, ಪತನಂತಿಟ್ಟದಲ್ಲಿ ಒಂದು ನಿಲುವನ್ನು ಹೊಂದಿದೆ. ಆದರೆ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.