ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಧರ್ಮ, ಜಾತಿ, ಪ್ರದೇಶಗಳೆಂಬ ಸ್ಪೀಡ್ ಬ್ರೇಕರ್ಗಳನ್ನು ತೆಗೆದು ಹಾಕಿ, ಅಭಿವೃದ್ಧಿಯ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ ಎಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಕನ್ನೌಟ್ ಪ್ಲೇಸ್ ಮಾರ್ಕೆಟ್ ಸಮೀಪದ ಸ್ಟೇಟ್ ಎಂಪೋರಿಯ ಕಾಂಪ್ಲೆಕ್ಸ್ ಬಳಿ ಹುನರ್ ಹಾತ್ ಉತ್ಸವವನ್ನು ಉದ್ಘಾಟಿಸಿದ ಬಳಿಕ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ವಿತ್ತ ಸಚಿವ ಅರುಣ ಜೇಟ್ಲಿ ಮತ್ತು ನಖ್ವಿ ಇದನ್ನು ಜಂಟಿಯಾಗಿ ಲೋಕಾರ್ಪಣೆಗೊಳಿಸಿದ್ದಾರೆ. ಉತ್ಸವದಾದ್ಯಂತ ಓಡಾಡಿದ ಇಬ್ಬರು ಸಚಿವರು, ಅಲ್ಲಿದ್ದ ಕಲಾವಿದರೊಂದಿಗೆ ಸಂವಾದ ನಡೆಸಿದ್ದಾರೆ.
22 ದೇಶಗಳ ಕಲಾವಿದರು, ಕರಕುಶಲಕರ್ಮಿಗಳು ಈ ಉತ್ಸವದಲ್ಲಿ ಭಾಗಿಯಾಗಿ ತಮ್ಮ ಕಲೆಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.
ಹುನರ್ ಹಾತ್ ವೇದಿಕೆಯ ಮೂಲಕ ಕಳೆದ ಎರಡು ವರ್ಷಗಳಿಂದ ಸುಮಾರು 1.65 ಲಕ್ಷ ಕರಕುಶಲಕರ್ಮಿಗಳಿಗೆ ಉದ್ಯೋಗವಕಾಶ ಸಿಕ್ಕಿದೆ ಎಂದು ನಖ್ವಿ ಹೇಳಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.