ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಗಳ ಅವಧಿಯಲ್ಲಿ ದೇಶದ ಪ್ರಮುಖ ಬಂದರುಗಳು 518.6 ಮಿಲಿಯನ್ ಟನ್ಗಳಷ್ಟು ಸರಕುಗಳನ್ನು ನಿರ್ವಹಣೆ ಮಾಡಿವೆ. ಹಿಂದಿನ ವರ್ಷಕ್ಕೆ ಪರಿಗಣಿಸಿದರೆ ಈ ವರ್ಷ ಶೇ. 3.77 ರಷ್ಟು ಪ್ರಗತಿಯಾಗಿದೆ. ಹಿಂದಿನ ವರ್ಷ 499.7 ಮಿಲಿಯನ್ ಟನ್ ಸರಕು ನಿರ್ವಹಣೆ ಮಾಡಲಾಗಿತ್ತು.
2018ರ ಎಪ್ರಿಲ್ನಿಂದ ಡಿಸೆಂಬರ್ವರೆಗೆ ಕೋಲ್ಕತ್ತಾ, ಪರದೀಪ್, ವಿಶಾಖಪಟ್ಟಣಂ, ಕಾಮರಾಜರ್, ಕೊಚ್ಚಿನ್, ನವ ಮಂಗಳೂರು, ಜೆಎನ್ಪಿಟಿ ಮತ್ತು ದೀನ್ದಯಾಳ್ ಬಂದರುಗಳು ಸರಕು ಸಾಗಾಣೆಯಲ್ಲಿ ಮಹತ್ವದ ಪ್ರಗತಿಯನ್ನು ದಾಖಲಿಸಿವೆ ಎಂದು ಕೇಂದ್ರ ಶಿಪ್ಪಿಂಗ್ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ದೀನ್ ದಯಾಳ್ ಬಂದರು 84.91 ಮಿಲಿಯನ್ ಟನ್, ಪರದೀಪ್ 80.43 ಮಿಲಿಯನ್ ಟನ್, ಜೆಎನ್ಪಿಟಿ 52.53 ಮಿಲಿಯನ್ ಟನ್, ವಿಶಾಖಪ್ಟಣಂ 49.28 ಮಿಲಿಯನ್ ಟನ್, ಕೋಲ್ಕತ್ತಾ 45.82 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಣೆ ಮಾಡಿವೆ.
ದೇಶದ ಪ್ರಮುಖ ಬಂದರುಗಳ ಶೇ.60ರಷ್ಟು ಸರಕುಗಳನ್ನು ಈ ಬಂದರುಗಳು ನಿರ್ವಹಣೆ ಮಾಡಿವೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.