ಸಿಕ್ಕಿಂ: ಈಶಾನ್ಯ ಭಾಗದ ಪ್ರಮುಖ ರಾಜ್ಯಗಳಲ್ಲೊಂದಾದ ಸಿಕ್ಕಿಂ ಸಾರ್ವತ್ರಿಕ ಸಮಾನ ಆದಾಯ(ಯೂನಿವರ್ಸಲ್ ಬೆಸಿಕ್ ಇನ್ಕಂ)ವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ, ಈ ನೀತಿ ಅಳವಡಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ.
ಸಿಕ್ಕಿಂ ಸಿಎಂ ಪವಣ್ ಕುಮಾರ್ ಚಮ್ಲಿಂಗ್ ಅವರು, 2022ರ ವೇಳೆಗೆ ತನ್ನ ರಾಜ್ಯ ಪ್ರತಿಯೊಬ್ಬರಿಗೂ ಸಾರ್ವತ್ರಿಕ ಸಮಾನ ಆದಾಯವನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಈ ಘೋಷಣೆ ಮಾಡಿದ್ದಾರೆ.
ತಮ್ಮ ಸಕ್ಕಿಂ ಡೆಮಾಕ್ರಾಟಿಕ್ ಫ್ರಾಂಟ್ ಮತ್ತೊಂದು ಬಾರಿಗೆ ಅಧಿಕಾರಕ್ಕೇರಿದರೆ, ಸಾರ್ವತ್ರಿಕ ಮೂಲ ಆದಾಯವನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಸಾರ್ವಜನಿಕ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡುವುದು, ಸರ್ಕಾರದಿಂದ ಒಂದಿಷ್ಟು ಹಣವನ್ನು ನಾಗರಿಕರಿಗೆ ನೀಡುವುದು ಸಾರ್ವತ್ರಿಕ ಸಮಾನ ಆದಾಯದ ಮುಖ್ಯ ಉದ್ದೇಶವಾಗಿದೆ.
ಜನರಿಗೆ ಒಂದಿಷ್ಟು ಸಮಾನ ಪ್ರಮಾಣದ ಹಣವನ್ನು ಹಂಚಿಕೆ ಮಾಡುವುದೇ ಸಾರ್ವತ್ರಿಕ ಸಮಾನ ಆದಾಯ ಎಂಬುದಾಗಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ವಿಶ್ಲೇಷಿಸುತ್ತದೆ. ಹಲವು ರಾಷ್ಟ್ರಗಳಲ್ಲಿ ಇದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ ಇದಕ್ಕೆ ಪರ ವಿರೋಧಗಳು ಇದೆ. ಈ ಪದ್ಧತಿಯನ್ನು ಅನುಷ್ಠಾನಕ್ಕೆ ತರುವುದರಿಂದ ಕೆಲಸ ಮಾಡದೆಯೂ ಜನ ಹಣ ಪಡೆಯುತ್ತಾರೆ, ಜನರ ಸೋಮಾರಿಗಳಾಗುತ್ತಾರೆ ಎಂಬ ವಾದವಿದೆ. ಇನ್ನೊಂದೆಡೆ, ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿ ಆರ್ಥಿಕ, ಸಾಮಾಜಿಕ ಸಮಾನತೆ ಸಿಗುತ್ತದೆ ಎಂಬುದು ಇನ್ನೂ ಕೆಲವರ ವಾದವಾಗಿದೆ.
source: betterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.