ನವದೆಹಲಿ: ದೇಶದಲ್ಲಿ ಮೂರು ಹೊಸ ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಸಮಿತಿ ಗುರುವಾರ ಅನುಮೋದನೆಯನ್ನು ನೀಡಿದೆ. ಜಮ್ಮು, ಕಾಶ್ಮೀರದಲ್ಲಿ ಎರಡು ಮತ್ತು ಗುಜರಾತನಲ್ಲಿ ಒಂದು ಏಮ್ಸ್ ಸ್ಥಾಪನೆಗೊಳ್ಳಲಿದೆ.
ಜಮ್ಮುವಿನ ಸಂಬಾದ ವಿಜಯನಗರದಲ್ಲಿ ರೂ.1,661 ಕೋಟಿ ವೆಚ್ಚದಲ್ಲಿ ಏಮ್ಸ್ ನಿರ್ಮಾಣವಾಗಲಿದೆ, ಕಾಶ್ಮೀರದ ಪುಲ್ವಾಮದ ಅವಂತಿಪುರದಲ್ಲಿ ರೂ.1,661 ಕೋಟಿ ವೆಚ್ಚದಲ್ಲಿ ಏಮ್ಸ್ ನಿರ್ಮಾಣವಾಗಲಿದೆ ಮತ್ತು ಗುಜರಾತಿನ ರಾಜ್ಕೋಟ್ನಲ್ಲಿ ರೂ.1,828 ಕೋಟಿ ವೆಚ್ಚದಲ್ಲಿ ಏಮ್ಸ್ ನಿರ್ಮಾಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿರುವ ಜೆಪಿ ನಡ್ಡಾ ಅವರು, ಪ್ರಧಾನಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರವನ್ನು ಇದು ಎತ್ತಿ ಹಿಡಿಯುತ್ತದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಮ್ಸ್ ನಿರ್ಮಾಣದ ಘೋಷಣೆಯನ್ನು ಪ್ರಧಾನಿಯವರು ’ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್’ ಅಡಿ ಘೋಷಣೆ ಮಾಡಿದ್ದರು ಮತ್ತು ರಾಜ್ಕೋಟ್ನಲ್ಲಿ ಏಮ್ಸ್ ಸ್ಥಾಪನೆಯ ನಿರ್ಧಾರವನ್ನು ವಿತ್ತ ಸಚಿವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು.
source: news18
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.