ನವದೆಹಲಿ: ಚೀನಾ ಮತ್ತು ಪಾಕಿಸ್ಥಾನದ ಗಡಿಗಳಲ್ಲಿ ಪರಿಸ್ಥಿತಿಗಳನ್ನು ಭಾರತೀಯ ಸೇನೆ ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ, ಅಲ್ಲಿ ಆತಂಕ ಪಡುವಂತಹ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ವಾರ್ಷಿಕ ಪತ್ರಿಕಾ ಪ್ರಕಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚೀನಾ ಮತ್ತು ಪಾಕಿಸ್ಥಾನದ ಗಡಿಗಳ ಪರಿಸ್ಥಿತಿಯನ್ನು ಸೇನೆ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ. ಅಲ್ಲಿ ಆತಂಕಪಡುವ ವಾತಾವರಣ ಇಲ್ಲ. ಆದರೆ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಬೇಕಾಗಿದೆ’ ಎಂದಿದ್ದಾರೆ.
‘ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುವ ಅಗತ್ಯವಿದೆ. ನಾವು ಕೇವಲ ಶಾಂತಿಯ ಸ್ಥಾಪಕರಷ್ಟೇ’ ಎಂದಿದ್ದಾರೆ.
ಅಪ್ಘಾನಿಸ್ಥಾನದಲ್ಲೂ ನಮ್ಮ ಹಿತಾಸಕ್ತಿಗಳಿವೆ ಆದರೆ ನಾವು ತಾಲಿಬಾನ್ ಮಾತಕತೆಯ ವಿಷಯದಲ್ಲಿ ದುಂಬಾಲು ಬೀಳುವವರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.