ನವದೆಹಲಿ: ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ಪ್ಲಾಸ್ಟಿಕ್ ಸರ್ಜರಿಯನ್ನು ಪ್ರಾಚೀನ ಭಾರತದಲ್ಲಿ ಮೊದಲ ಬಾರಿಗೆ ನಡೆಸಲಾಯಿತು ಎಂದು ಕೊಲಂಬಿಯಾ ಯೂನಿವರ್ಸಿಟಿ ಹೇಳಿದೆ.
2500 ವರ್ಷಗಳ ಹಿಂದೆಯೇ ಶುಶ್ರೂತ ವಿವಿಧ ತರನಾದ ಪ್ಲಾಸ್ಟಿಕ್ ಸರ್ಜರಿಯನ್ನು ನಡೆಸುತ್ತಿದ್ದ, ಮೂಗು ಕತ್ತರಿಸುವ, ಕಿವಿ ಕತ್ತರಿಸುವ ಶಿಕ್ಷೆಗೊಳಗಾದವರಿಗೆ ಮರುರೂಪವನ್ನು ನೀಡುತ್ತಿದ್ದ. ದೇಹದ ಬೇರೆ ಭಾಗದಿಂದ ಚರ್ಮವನ್ನು ತೆಗೆದು ಅಗತ್ಯವಿದ್ದಲ್ಲಿಗೆ ಜೋಡಿಸುತ್ತಿದ್ದ ಎಂದಿದೆ.
‘ಪ್ಲಾಸ್ಟಿಕ್ ಸರ್ಜರಿ ಇಂದಿನದ್ದು ಎಂದು ಅಂದುಕೊಂಡಿದ್ದೀರಾ? ಮತ್ತೊಮ್ಮೆ ಯೋಚಿಸಿ. 2500 ವರ್ಷಗಳ ಹಿಂದೆಯೇ ಸೌಂದರ್ಯವರ್ಧಕ ಚಿಕಿತ್ಸೆ, ಮರುರಚನಾ ಪ್ರಕ್ರಿಯೆಗಳ ಬೇರು ಇತ್ತು. ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಎಂದರೆ ಕೃತಕ ವಸ್ತು ಎಂಬುದು ತಪ್ಪು ತಿಳುವಳಿಕೆ. ಗ್ರೀಕ್ ಶಬ್ದ ಪ್ಲಾಸ್ಟಿಕೋಸ್ನಿಂದ ಈ ಶಬ್ದ ಬಂದಿದೆ. ಇದರರ್ಥ ಅಚ್ಚು ಅಥವಾ ರೂಪ ನೀಡಿ. 6ನೇ ಶತಮಾನದಲ್ಲೇ ಭಾರತೀಯ ವೈದ್ಯ ‘ಶಸ್ತ್ರಚಿಕಿತ್ಸೆಯ ಪಿತಾಮಹ’ ಎಂದು ಕರೆಯಲ್ಪಡುವ ಶುಶ್ರೂತ, ಮೂರು ವಿಧಾನ ಚರ್ಮ ಶಸ್ತ್ರಚಿತ್ಸೆ ಮತ್ತು ಮೂಗಿಗೆ ಮರು ರೂಪ ನೀಡುವಿಕೆಯನ್ನು ನಡೆಸುತ್ತಿದ್ದ. ಒಂದು ಭಾಗದ ಚರ್ಮ ತೆಗೆದು ಇನ್ನೊಂದು ಭಾಗಕ್ಕೆ ಜೋಡಿಸುತ್ತಿದ್ದ’ ಎಂಬುದಾಗಿ ಕೊಲಂಬಿಯಾ ಯೂನಿವರ್ಸಿಟಿಯ ಐರ್ವಿಂಗ್ ಮೆಡಿಕಲ್ ಸೆಂಟರ್ನ ವೈಬ್ಸೈಟ್ನಲ್ಲಿ ಹೇಳಲಾಗಿದೆ.
ಕೊಲಂಬಿಯಾ ಯೂನಿವರ್ಸಿಟಿ ವೆಬ್ಸೈಟ್ನಲ್ಲಿನ ಈ ಮಾಹಿತಿ ಭಾರತೀಯರ ಪ್ರಾಚೀನ ಜ್ಞಾನವನ್ನು ಮತ್ತೆ ಸಾಬೀತುಪಡಿಸಿದೆ. ಭಾರತೀಯರ ವೈಜ್ಞಾನಿಕ ಜ್ಞಾನದ ಬಗ್ಗೆ ಕೊಂಕು ಮಾತನಾಡುವವರು ಈ ಬಗ್ಗೆ ಆಳವಾಗಿ ಅಧ್ಯಯನ ನಡೆಸುವ ಅಗತ್ಯವಿದೆ.
source: theanalyst.co.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.