ನವದೆಹಲಿ: ಜೈಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಮಹಿಳೆಯರ ಬಗ್ಗೆ ಅವಮಾನಕಾರಿಯಾದ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್, ಪ್ರಧಾನಿಗೆ ’ನೀವು ಗಂಡಸಿನಂತೆ ಇರಿ’ ಎಂದಿದ್ದಾರೆ. ಮಾತ್ರವಲ್ಲ, ರಫೆಲ್ ಪ್ರಕರಣದಲ್ಲಿ ತಮ್ಮನ್ನು ಡಿಫೆಂಡ್ ಮಾಡಿಕೊಳ್ಳಲು ಪ್ರಧಾನಿಗೆ ಸಾಧ್ಯವಾಗಿಲ್ಲ, ಅದಕ್ಕಾಗಿ ಮಹಿಳೆಯನ್ನು ಮುಂದೆ ತಂದು ನಿಲ್ಲಿಸಿದ್ದಾರೆ ಎಂದಿದ್ದಾರೆ. ಈ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣವನ್ನು ಕುಟುಕುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಲ್ಲದೇ,
ಅವರ ಈ ಹೇಳಿಕೆ ಮಹಿಳಾ ಸಮುದಾಯದ ಭಾವನೆಯನ್ನು ಕೆರಳಿಸಿದೆ. ಇದಕ್ಕಾಗಿ ಮಹಿಳಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
’ಯಾವ ಅರ್ಥದಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ರಾಜಕಾರಣಿಯಾಗಿ ಸ್ತ್ರೀದ್ವೇಷಿಯಾದಂತಹ ವರ್ತನೆಯನ್ನು ಅವರು ತೋರಿಸಬಾರದು’ ಎಂದು ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ.
’ಪ್ರಧಾನಿಗಳು ನನ್ನನ್ನು ರಕ್ಷಿಸಿ ಎಂದು ಒರ್ವ ಮಹಿಳೆಯಲ್ಲಿ ಕೇಳಿಕೊಂಡಿದ್ದಾರೆ’ ಎನ್ನುವ ಮೂಲಕ ರಾಹುಲ್ ಮಹಿಳೆಯರು ದುರ್ಬಲರು ಎಂಬುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ರಾಹುಲ್ ಮಾಡಿಕೊಂಡ ಎಡವಟ್ಟು ಕಾಂಗ್ರೆಸ್ಗೆ ತಿರುಗುಬಾಣವಾಗುವ ಲಕ್ಷಣ ತೋರುತ್ತಿದೆ.
source: www.india.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.