ನವದೆಹಲಿ: ಭಾರತ ವಿಶ್ವದ ಮೂರನೇ ಅತೀ ದೊಡ್ಡ ಗ್ರಾಹಕ ಮಾರುಕಟ್ಟೆಯಾಗುವತ್ತ ದಾಪುಗಾಲಿಡುತ್ತಿದೆ. ಮೊದಲ ಸ್ಥಾನದಲ್ಲಿ ಅಮೆರಿಕಾ ಮತ್ತು ಎರಡನೇ ಸ್ಥಾನದಲ್ಲಿ ಚೀನಾ ಇರಲಿದೆ ವರ್ಲ್ಡ್ ಎಕನಾಮಿಕ್ ಫೋರಂ ಹೇಳಿದೆ.
‘ಫ್ಯೂಚರ್ ಆಫ್ ಕನ್ಸಂಪ್ಶನ್ ಇನ್ ಫಾಸ್ಟ್-ಗ್ರೋತ್ ಕಂಸ್ಯೂಮರ್ ಮಾರ್ಕೆಟ್-ಇಂಡಿಯಾ’ ಎಂಬ ತನ್ನ ವರದಿಯಲ್ಲಿ, ಭಾರತದಲ್ಲಿ ಏರುತ್ತಿರುವ ಮಧ್ಯಮವರ್ಗದ ಸಂಖ್ಯೆ 25 ಮಿಲಿಯನ್ ಮನೆಗಳನ್ನು ಬಡತನದಿಂದ ಹೊರತರಲಿದೆ ಎಂದಿದೆ.
ಪ್ರಸ್ತುತ ಭಾರತದಲ್ಲಿ ಗ್ರಾಹಕ ವೆಚ್ಚ ಯುಎಸ್ಡಿ 1.5 ಟ್ರಿಲಿಯನ್ ಡಾಲರ್ ಇದ್ದು, 2030ರ ವೇಳೆಗೆ ಇದು ಯುಎಸ್ಡಿ 6 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ ಎಂದಿದೆ.
ವರ್ಲ್ಡ್ ಎಕನಾಮಿಕ್ ಫೋರಂ ಪ್ರಕಾರ, ಶೇ.7.5ರಷ್ಟು ಜಿಡಿಪಿ ಪ್ರಗತಿ ದರವನ್ನು ಹೊಂದಿರುವ ಭಾರತ ವಿಶ್ವದ ಆರನೇ ಅತೀದೊಡ್ಡ ಆರ್ಥಿಕತೆ. 2030ರ ವೇಳೆಗೆ ಭಾರತ ಯುಎಸ್ಡಿ 6 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಇದರಿಂದ ಭಾರತ ಮೂರನೇ ಅತೀ ದೊಡ್ಡ ಗ್ರಾಹಕ ಮಾರುಕಟ್ಟೆಯನ್ನು ಹೊಂದಲಿದೆ.
source: economic times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.