ಸೋಲಾಪುರ್: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಕಲ್ಪಿಸುವ ಮಸೂದೆ, ಸುಳ್ಳುಗಳನ್ನು ಹಬ್ಬಿಸುವವರಿಗೆ ನೀಡಿದ ದಿಟ್ಟ ಉತ್ತರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಲಾಪುರದಲ್ಲಿ ರೂ.970 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೆದ್ದಾರಿ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಹೆದ್ದಾರಿ ಯೋಜನೆ ಸೋಲಾಪುರ್-ತುಲ್ಜಾಪುರ್-ಒಸ್ಮಾನಾಬಾದ್ ಸೆಕ್ಷನ್ ಎನ್ಎಚ್-211(ನ್ಯೂ ಎನ್ಎಸ್-52) ಆಗಿದ್ದು 4 ಲೇನ್ಗಳನ್ನು ಒಳಗೊಂಡಿದೆ. 2 ಪ್ರಮುಖ ಮತ್ತು 17 ಸಣ್ಣ ಸೇತುವೆಗಳು, 4 ವೆಹ್ಹಿಕ್ಯುಲರ್ ಮತ್ತು 10 ಸಾದಾಚಾರಿ ಅಂಡರ್ಪಾಸ್ಗಳನ್ನು ಈ ಯೋಜನೆ ಒಳಗೊಂಡಿದೆ. ತಲ್ಜಾಪುರದಲ್ಲಿ 3.4 ಕಿಮೀಗಳ ಬೈಪಾಸ್ ಇದೆ.
‘ಸಾಮಾನ್ಯ ವರ್ಗಕ್ಕೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸಲು ಇತರ ಮೀಸಲಾತಿಗಳ ಪ್ರಮಾಣವನ್ನು ಕುಗ್ಗಿಸಲಾಗುವುದಿಲ್ಲ. ಪ್ರತಿಪಕ್ಷಗಳು ನಾವು ಇತರ ಮೀಸಲಾತಿಯನ್ನು ಕಡಿತಗೊಳಿಸುವುದನ್ನೇ ನಿರೀಕ್ಷಿಸುತ್ತಿದ್ದವು, ಆದರೆ ನಾವು ಹಾಗೆ ಮಾಡಿಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಸ್ತುತ ಇರುವ ಮೀಸಲಾತಿಗೆ ಹೆಚ್ಚುವರಿಯಾಗಿ ಸಾಮಾನ್ಯ ವರ್ಗದ ಮೀಸಲಾತಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದರು.
ಅಲ್ಲದೇ ಲೋಕಸಭೆಯಲ್ಲಿ ಮಸೂದೆ ಮಂಡನೆಗೊಳಿಸಿದ ತನ್ನ ಸರ್ಕಾರದ ಸಾಧನೆಯನ್ನು ಅವರು ಶ್ಲಾಘಿಸಿದರು. ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.