ನವದೆಹಲಿ: ರಾಜ್ಯಗಳು ನೀಡುವ ಶಾಲಾ ಶಿಕ್ಷಣದ ಗುಣಮಟ್ಟವನ್ನು ನಿರ್ಣಯಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, 70 ಪಾಯಿಂಟ್ಗಳ ಗ್ರೇಡಿಂಗ್ ಸೂಚ್ಯಾಂಕವನ್ನು ಹೊರತಂದಿದ್ದಾರೆ.
‘ರಾಜ್ಯಗಳ ಶಿಕ್ಷಣ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಗ್ರೇಡಿಂಗ್ನ್ನು ತರಲು ನಿರ್ಧರಿಸಿದ್ದೇವೆ. 70 ನಿಯತಾಂಕಗಳಲ್ಲಿ 1,000 ಸ್ಕೋರ್ಗಳಲ್ಲಿ ರಾಜ್ಯಗಳಿಗೆ ಗ್ರೇಡಿಂಗ್ನ್ನು ನೀಡಲಾಗುತ್ತದೆ’ ಎಂದಿದ್ದಾರೆ.
ಪ್ರತಿ ರಾಜ್ಯಗಳ ಕಾರ್ಯಕ್ಷಮತೆ ಈ ಗ್ರೇಡಿಂಗ್ನಿಂದ ಸಿಗಲಿದೆ. ಶಿಕ್ಷಣದಲ್ಲಿನ ಗ್ರೇಡಿಂಗ್ ಹೆಚ್ಚಿಸಲು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಲಿದೆ ಎಂದಿದ್ದಾರೆ.
ಅಲ್ಲದೇ ಎನ್ಸಿಇಆರ್ಟಿ ಪುಸ್ತಕಗಳ ಕೊರತೆಯನ್ನು ತಗ್ಗಿಸಲು ಹೆಚ್ಚುವರಿ ಪುಸ್ತಕಗಳನ್ನು ಪ್ರಿಂಟ್ ಮಾಡಲು ನಿರ್ಧರಿಸಲಾಗಿದೆ. ಈ ವರ್ಷ 6 ಕೋಟಿ ಪುಸ್ತಕ ಪ್ರಿಂಟ್ ಮಾಡುವುದು ನಮ್ಮ ಗುರಿ ಎಂದಿದ್ದಾರೆ.
source: m.rtnow.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.