ಗುವಾಹಟಿ: ಭಾರತ ಗುರುವಾರ ಐದು ಮಂದಿಯನ್ನೊಳಗೊಂಡ ರೊಹಿಂಗ್ಯಾ ಮುಸ್ಲಿಂ ಕುಟುಂಬವನ್ನು ಬಸ್ ಮೂಲಕ ನೆರೆಯ ಮಯನ್ಮಾರ್ಗೆ ಕಳುಹಿಸಿಕೊಟ್ಟಿದೆ. ಕಳೆದ 4 ತಿಂಗಳಲ್ಲಿ ಭಾರತದಿಂದ ಹೊರಗೆ ಕಳುಹಿಸಲಾಗುತ್ತಿರುವ ಎರಡನೇ ರೊಹಿಂಗ್ಯಾ ತಂಡ ಇದೆಂದು ಹೇಳಲಾಗಿದೆ.
ಅಕ್ರಮವಾಗಿ ಒಳನುಸುಳಿರುವ ರೊಹಿಂಗ್ಯಾಗಳು ಭಾರತದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ಭಾರತ ಸರ್ಕಾರ ಹೇಳುತ್ತಲೇ ಬಂದಿದ್ದು, ಅವರನ್ನು ಗುರುತಿಸಿ ತನ್ನ ನೆಲದಿಂದ ಹೊರಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಸುತ್ತಿದೆ.
2014ರಲ್ಲಿ ಭಾರತವನ್ನು ಪ್ರವೇಶಿಸಿದ್ದಕ್ಕಾಗಿ ಜೈಲು ಪಾಲಾಗಿದ್ದ ತಂದೆ ತಾಯಿ ಮತ್ತು ಮೂರು ಮಕ್ಕಳನ್ನೊಳಗೊಂಡ ಕುಟುಂಬವನ್ನು ಗುರುವಾರ ಮಯನ್ಮಾರ್ಗೆ ವಾಪಾಸ್ ಕಳುಹಿಸಲಾಗಿದೆ. ಗಡಿಯಲ್ಲಿ ಮಯನ್ಮಾರ್ ಅಧಿಕಾರಿಗಳು ಅವರನ್ನು ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಅಸ್ಸಾಂ ಜೈಲಿನಲ್ಲಿ 20 ರೊಹಿಂಗ್ಯಾಗಳಿದ್ದು, ಅವರ ಗುರುತು ಖಚಿತವಾದ ತಕ್ಷದಣ ಮಯನ್ಮಾರ್ಗೆ ಕಳುಹಿಸುವ ಏರ್ಪಾಡು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
source: economictimes.indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.