ನವದೆಹಲಿ: ಉತ್ತರಪ್ರದೇಶದ ಪ್ರಯಾಗ್ರಾಗ್ ಮಹಾಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜ.15ರಿಂದ ಮಾರ್ಚ್ 30ರವರೆಗೆ ಜಗತ್ತಿನ ಅತೀದೊಡ್ಡ ಸಮಾವೇಶ ಎಂದು ಕರೆಯಲ್ಪಡುವ ಕುಂಭ ಮೇಳ ಜರುಗಲಿದೆ. ಈ ಸಮಾವೇಶದ ವೇಳೆ ಭಕ್ತರ ಸುಗಮ ಸಂಚಾರಕ್ಕಾಗಿ ಏರ್ಇಂಡಿಯಾ ‘ಅಲಹಾಬಾದ್ನಿಂದ ದೆಹಲಿ’ಗೆ ವಿಶೇಷ ವಿಮಾನ ಸಂಚಾರವನ್ನು ನಡೆಸಲಿದೆ.
ವಾರದ ಐದು ದಿನ-ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಅಲಹಾಬಾದ್-ದೆಹಲಿ ವಾಯುಮಾರ್ಗದ ಮೂಲಕ ಏರ್ಇಂಡಿಯಾ ವಿಮಾನ ಸಂಚಾರ ನಡೆಸಲಿದೆ.
ಕೋಲ್ಕತ್ತಾ-ಅಲಹಾಬಾದ್ ವಾಯುಮಾರ್ಗದ ಮೂಲಕ ವಾರಕ್ಕೆ ಎರಡು ದಿನ-ಬುಧವಾರ ಮತ್ತು ಶನಿವಾರ ಏರ್ ಇಂಡಿಯಾ ಹಾರಟ ನಡೆಸಲಿದೆ.
ಏರ್ ಇಂಡಿಯಾದ ವಿಶೇಷ ವಿಮಾನಗಳು ಜ.13ರಿಂದ ಹಾರಾಟ ನಡೆಸಲಿವೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.