ನವದೆಹಲಿ: ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ಚದುರಿಸುವ ಸಲುವಾಗಿ ಬಳಸುವ ಪೆಲ್ಲೆಟ್ ಶಾಟ್ಗೆ ಪರ್ಯಾಯವಾಗಿ, ಕಡಿಮೆ ಹಾನಿಕಾರಕ ಪ್ಲಾಸ್ಟಿಕ್ ಬುಲೆಟ್ನ್ನು ಬಳಸಲು ಚಿಂತನೆ ನಡೆಸಲಾಗುತ್ತಿದೆ.
ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್ (DRDO) ಪ್ಲಾಸ್ಟಿಕ್ ಬುಲೆಟ್ನ್ನು ಅಭಿವೃದ್ಧಿಪಡಿಸಿದೆ. ಈ ಬುಲೆಟ್ನ್ನು ಎಕೆ-47 ರೈಫಲ್ನಿಂದಲೂ ಫೈಯರ್ ಮಾಡಬಹುದಾಗಿದೆ.
ಪೆಲ್ಲೆಟ್ ಬುಲೆಟ್ಗಳ ಬಳಕೆಯಿಂದ ಹೆಚ್ಚಿನ ಹಾನಿಗಳು ಉಂಟಾಗುತ್ತದೆ. ಈಗಾಗಲೇ ಹಲವಾರು ಮಂದಿಯ ದೃಷ್ಟಿಗೆ ಸಮಸ್ಯೆಯಾಗಿದೆ. ಆದ್ದರಿಂದ ಇದರ ಬಳಕೆಗೆ ಭಾರೀ ವಿರೋಧಗಳು ಕೇಳಿ ಬರುತ್ತಿದ್ದವು. ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಬುಲೆಟ್ ಬಳಕೆಗೆ ನಿರ್ಧರಿಸಲಾಗಿದೆ.
ಈ ಬುಲೆಟ್ ಉದ್ರಿಕ್ತ ಜನರನ್ನು ಚದುರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.