ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಶನಿವಾರ ರಾಜಸ್ಥಾನದಲ್ಲಿ ರೂ.5,379 ಕೋಟಿಯ ಹೆದ್ದಾರಿ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ.
ದಂಗಿಯವಾಸ್-ಕೆರು-ನಾಗ್ಪುರ ಸೆಕ್ಷನ್ನ ಜೋಧ್ಪುರ ರಿಂಗ್ ರೋಡ್ನ ಅಗಲೀಕರಣ, ಗಗರಿಯಾ-ಬೌವ್ರಿ ಕಲನ್-ಸೆದ್ವಾ-ಬಖಾಸರ್ ಸೆಕ್ಷನ್ನ ರಾಷ್ಟ್ರೀಯ ಹೆದ್ದಾರಿ 925, ಸತ-ಗಂಧವ್ ಸೆಕ್ಷನ್ನ ಎನ್ಎಚ್ 925ಎ ಮತ್ತು ಮುಂಬವ್-ಅಸುತರ್-ಗೊಟರು-ತಾನೊಟ್ ಸೆಕ್ಷನ್ನ ಎನ್ಎಚ್ 70 ಅಗಲೀಕರಣವನ್ನು ಈ ಯೋಜನೆ ಒಳಗೊಂಡಿದೆ. 545.456 ಕಿಮೀ ಉದ್ದದ ಯೋಜನೆ ಇದಾಗಿದ್ದು, 3,631.20 ಕೋಟಿ ವೆಚ್ಚ ತಗುಲಲಿದೆ. ಇಷ್ಟೇ ಅಲ್ಲದೇ ಇನ್ನೂ ಹಲವಾರು ಯೋಜನೆಗಳಿಗೆ ಅವರು ಚಾಲನೆಯನ್ನು ನೀಡಲಿದ್ದಾರೆ.
ಪಶ್ಚಿಮ ರಾಜಸ್ಥಾನದ ಆರ್ಥಿಕ ಸಬಲೀಕರಣ, ಭದ್ರತೆ, ಸಂಪರ್ಕವನ್ನು ಉತ್ತಮಗೊಳಿಸಲು ಈ ಯೋಜನೆ ಸಹಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.