ನವದೆಹಲಿ: ಭಾರತದ ಸ್ಟಾರ್ಟ್ಅಪ್ 2018ರಲ್ಲಿ ಫಂಡಿಂಗ್ನಲ್ಲಿ $ 38.3 ಬಿಲಿಯನ್ಗೆ ಏರಿಕೆಯಾಗಿದೆ. ಈ ಮೂಲಕ ಯುಎಸ್, ಚೀನಾದ ಬಳಿಕ ಮೂರನೇ ದೊಡ್ಡ ಸ್ಟಾರ್ಟ್ಅಪ್ ಆಗಿ ಹೊರಹೊಮ್ಮಿದೆ ಎಂದು ಯೋಸ್ಟಾರ್ಟ್ಅಪ್ ವರದಿ ಮಾಡಿದೆ.
ಫ್ಲಿಪ್ಕಾರ್ಟ್ ಅಮೆರಿಕನ್ ರಿಟೈಲರ್ ವಾಲ್ಮಾರ್ಟ್ನೊಂದಿಗೆ ಮಾಡಿಕೊಂಡ $ 16 ಬಿಲಿಯನ್ ಅತೀದೊಡ್ಡ ಡೀಲ್ ಎಂದು ಅಂದಾಜಿಸಲಾಗಿದೆ. ಮೂರು ಡೀಲ್ಗಳ ಮೂಲಕ ಸ್ವಿಗ್ಗಿ $1.3ಬಿಲಿಯನ್ಗೆ ಏರಿದೆ. ಒವೈಒ(OYO) 2018ರಲ್ಲಿ $1ಬಿಲಿಯನ್ಗೆ ಏರಿದೆ.
ಪೇಟಿಎಂ ಮಾಲ್($885 ಮಿಲಿಯನ್), ರೆನ್ಯೂ ಪವರ್($495 ಮಿಲಿಯನ್), ಬೈಜು ($423 ಮಿಲಿಯನ್) ಮತ್ತು ಝೋಮ್ಯಾಟೊ($410 ಮಿಲಿಯನ್) ಇನ್ನಿತರ ಅತೀದೊಡ್ಡ ಫಂಡಿಂಗ್ ಡೀಲ್ ಎಂದು ವಿಶ್ಲೇಷಿಸಲಾಗಿದೆ.
2018ರಲ್ಲಿ ಇ-ಕಾಮರ್ಸ್, ಫೆನ್ಟೆಕ್, ನವೀಕರಿಸಬಹುದಾದ ಎನರ್ಜಿ, ಸಾರಿಗೆ, ಆರೋಗ್ಯ, ಪ್ರವಾಸೋದ್ಯಮ ಮುಂತಾದ ವಲಯದ ಭಾರತೀಯ ಸ್ಟಾರ್ಟ್ಅಪ್ಗಳಲ್ಲಿ ಸುಮಾರು 1,000 ಡೀಲ್ಗಳು ನಡೆದಿದ್ದು, ಅತ್ಯಧಿಕ ಹೂಡಿಕೆಯನ್ನು ಆಕರ್ಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.