ನವದೆಹಲಿ: ಉನ್ನತ ಸಾಧನೆಯನ್ನು ಮಾಡಿದ ಯುವ ಉದ್ಯಮಿಗಳನ್ನು ಗುರುತಿಸಿ, ಸನ್ಮಾನಿಸುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ‘ರಾಷ್ಟ್ರೀಯ ಉದ್ಯಮಶೀಲತ್ವ ಪ್ರಶಸ್ತಿ’ನ್ನು ನೀಡುತ್ತಾ ಬಂದಿದೆ. ಮೂರನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ದೆಹಲಿಯಲ್ಲಿ ಜರುಗಲಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತ್ವ ಸಚಿವಾಲಯ ದೆಹಲಿಯಲ್ಲಿ ಇಂದು ‘ರಾಷ್ಟ್ರೀಯ ಉದ್ಯಮಶೀಲತ್ವ ಪ್ರಶಸ್ತಿ’ ಪ್ರಧಾನ ಸಮಾರಂಭವನ್ನು ಏರ್ಪಡಿಸಿದೆ.
ಈ ವರ್ಷ ಒಟ್ಟು 43 ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರಲ್ಲಿ 39 ಪ್ರಶಸ್ತಿಗಳನ್ನು ವಿವಿಧ ವಲಯಗಳ ಯುವ ಉದ್ಯಮಿಗಳಿಗೆ ನೀಡಲಾಗುತ್ತಿದೆ. ಇನ್ನು ನಾಲ್ಕು ಪ್ರಶಸ್ತಿಗಳನ್ನು ಉದ್ಯಮಶೀಲತೆಯ ವಾತಾವರಣವನ್ನು ನಿರ್ಮಾಣ ಮಾಡಿದ ಯುವಕರಿಗೆ ನೀಡಲಾಗುತ್ತಿದೆ.
ಪ್ರಶಸ್ತಿ ವಿಜೇತರಿಗೆ ಟ್ರೋಫಿ, ಸರ್ಟಿಫಿಕೇಟ್, 5-10 ಲಕ್ಷ ರೂಪಾಯಿಗಳವರೆಗೆ ನಗದು ಪುರಸ್ಕಾರ ಸಿಗಲಿದೆ.
ಮಹಿಳಾ, ವಿಕಲಚೇತನಾ, ಪರಿಶಿಷ್ಠ ಜಾತಿ ಮತ್ತು ಪಂಗಡ ಮುಂತಾದ ಕಡಿಮೆ ಅವಕಾಶ ವರ್ಗದ ಯುವ ಉದ್ಯಮಿಗಳಿಗೆ ವಿಶೇಷ ಪ್ರಶಸ್ತಿಗಳು ಸಿಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.