ನವದೆಹಲಿ: ಜನವರಿ 1ರಿಂದ ಭಾರತ ಎರಡು ದಿನಗಳ ಕಾಲ ಅರಬ್ ಲೀಗ್ ಸಭೆಯನ್ನು ನವದೆಹಲಿಯಲ್ಲಿ ಆಯೋಜನೆಗೊಳಿಸುತ್ತಿದೆ. ಅರಬ್ ಲೀಗ್ ಸ್ಟೇಟ್ಗಳ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರುಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.
22 ಸದಸ್ಯರುಳ್ಳ ಅರಬ್ ಲೀಗ್ನ ನಡುವೆ ಸಹಕಾರವನ್ನು ವೃದ್ಧಿಸುವ ಸಲುವಾಗಿ ರಚನೆಯಾದ ಅರಬ್-ಇಂಡಿಯಾ ಕೋಅಪರೇಶನ್ ಫೋರಂ ವತಿಯಿಂದ ನಡೆಸಲಾಗುತ್ತಿರುವ ಎರಡನೇ ಸಚಿವ ಮಟ್ಟದ ಸಭೆ ಇದಾಗಿದೆ. ಮೊದಲ ಸಭೆ 2016ರ ಜನವರಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೇತೃತ್ವದಲ್ಲಿ ಬಹರೈನ್ನಲ್ಲಿ ಜರುಗಿತ್ತು.
ಜ.31ರಂದು ದೆಹಲಿಯಲ್ಲಿ ಅರಬ್ ಮತ್ತು ಭಾರತದ ಸಚಿವರುಗಳು ಸೇರಿ ಸಭೆ ನಡೆಸಲಿದ್ದಾರೆ. ಎನರ್ಜಿ, ಸೆಕ್ಯೂರಿಟಿ, ಪ್ರಾದೇಶಿಕ, ಜಾಗತಿಕ ವಿಷಯಗಳನ್ನು ಕೇಂದ್ರೀಕರಿಸಿದ ಮಾತುಕತೆಗಳು ಜರುಗಲಿವೆ ಎಂದು ಮೂಲಗಳು ತಿಳಿಸಿವೆ.
ಬಹರೈನ್, ಕುವೈಟ್, ಒಮನ್, ಖತಾರ್, ಸೌದಿ ಅರೇಬಿಯಾ, ಯುಎಇಗಳು ಅರಬ್ ಲೀಗ್ನ ಪ್ರಮುಖ ರಾಷ್ಟ್ರಗಳಾಗಿವೆ. ಇವುಗಳು ಧಾರ್ಮಿಕ, ಸಾಂಸ್ಕೃತಿಕ ಕೊಂಡಿಗಳನ್ನು ಒಳಗೊಂಡ ಭಾರತದ ಪ್ರಮುಖ ಆರ್ಥಿಕ ಪಾಲುದಾರ ರಾಷ್ಟ್ರಗಳೂ ಆಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.