ನವದೆಹಲಿ: ಭಯೋತ್ಪಾದನೆಯನ್ನು ಹತ್ತಿಕ್ಕುವಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ಪಾಕಿಸ್ಥಾನದ ಮೇಲೆ ಒತ್ತಡವಿದ್ದರೂ, ಆ ರಾಷ್ಟ್ರ ಮಾತ್ರ ಬೇರೆ ಬೇರೆ ವಿಧಾನದ ಮೂಲಕ ಉಗ್ರರರನ್ನು ಪೋಷಿಸುವ ಕಾರ್ಯ ಮಾಡುತ್ತಿದೆ. ಇದೀಗ ‘ಸಮುದ್ರ ಜಿಹಾದ್’ ಮಾರ್ಗವನ್ನೂ ಅದು ಅನುಸರಿಸುತ್ತಿದೆ ಎನ್ನಲಾಗಿದೆ.
ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಅಹೀರ್ ಅವರು ಈ ಬಗ್ಗೆ ಬುಧವಾರ ಲೋಕಸಭೆಗೆ ಮಾಹಿತಿಯನ್ನು ನೀಡಿದ್ದು, ಹಲವಾರು ಉಗ್ರ ಸಂಘಟನೆಗಳು ತಮ್ಮ ಪಡೆಗಳಿಗೆ ಅಂಡರ್ವಾಟರ್ ಕಾರ್ಯಾಚರಣೆಯ ತರಬೇತಿಯನ್ನು ನೀಡಿ. ಸಮುದ್ರ ಜಿಹಾದ್ಗೆ ಅವರನ್ನು ಸಜ್ಜುಗೊಳಿಸುತ್ತಿವೆ ಎಂದಿದ್ದಾರೆ.
ಸಮುದ್ರ ಮಾರ್ಗದ ಮೂಲಕ ಉಗ್ರರರನ್ನು ಭಾರತದೊಳಗೆ ನುಸುಳಿಸಬೇಕು ಎಂಬ ಗುರಿಯೊಂದಿಗೆ ಉಗ್ರರಿಗೆ ಅಂಡರ್ ವಾಟರ್ ತರಬೇತಿಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ನಮಗೆ ಮಾಹಿತಿಗಳು ಲಭ್ಯವಾಗಿದೆ. ಪಾಕಿಸ್ಥಾನ ಬೆಂಬಲ ಇದಕ್ಕಿರಬಹುದು ಎಂದಿದ್ದಾರೆ.
26/11ನಂತಹ ದೊಡ್ಡ ಮಟ್ಟದಲ್ಲಿ ಬಂದರು, ಕಾರ್ಗೋಶಿಪ್ಗಳಿಗೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.