ಪಾಟ್ನಾ: ಬಿಹಾರದಲ್ಲಿ ಹಲವಾರು ಉದ್ಯಮಿಗಳ ಹತ್ಯೆಯಾದ ಹಿನ್ನಲೆಯಲ್ಲಿ ‘ಬಿಹಾರ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಬಿಐಎಸ್ಎಫ್)ನ್ನು ರಚನೆ ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮಾದರಿಯಲ್ಲೇ ಬಿಹಾರ ಕೈಗಾರಿಕಾ ಭದ್ರತಾ ಪಡೆ ರಚನೆಯಾಗಲಿದೆ, ಕೈಗಾರಿಕೋದ್ಯಮಿಗಳಿಗೆ ಮತ್ತು ಉದ್ಯಮಿಗಳಿಗೆ ಈ ಪಡೆ ಭದ್ರತೆಯನ್ನು ಒದಗಿಸಲಿದೆ ಎಂದು ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಬಿಐಎಸ್ಎಫ್ನ ಎರಡು ಬೆಟಾಲಿಯನ್ಗಳು ಬೆಗುಸರಾಯ್ ಮತ್ತು ಬಕ್ಸರ್ ಜಿಲ್ಲೆಗಳಲ್ಲಿ ಶೀಘ್ರವೇ ನಿಯೋಜಿತವಾಗಲಿದೆ ಎಂದಿದ್ದಾರೆ.
ಯಾವ ಉದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಭದ್ರತೆಯ ಅವಶ್ಯಕತೆ ಇದೆ ಎಂಬುದನ್ನು ಇನ್ಸ್ಪೆಕ್ಟರ್ ಜನರಲ್(ಸೆಕ್ಯೂರಿಟಿ) ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಅಧ್ಯಯನವನ್ನು ಮಾಡಲಾಗುತ್ತದೆ ಎಂದಿದ್ದಾರೆ.
ಕಳೆದ ಕೆಲ ವಾರಗಳಲ್ಲೇ ಬಿಹಾರದಲ್ಲಿ ಯುವ ಉದ್ಯಮಿಗಳು ಸೇರಿದಂತೆ 6 ಉದ್ಯಮಿಗಳ ಹತ್ಯೆಯಾಗಿದೆ. ಹೀಗಾಗಿ ಅಲ್ಲಿನ ಉದ್ಯಮ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಹಫ್ತಾ ವಸೂಲಿ ಗ್ಯಾಂಗ್ ಈ ಕೃತ್ಯಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.
ಘಟನೆಗಳನ್ನು ಖಂಡಿಸಿ 100ಕ್ಕೂ ಅಧಿಕ ಉದ್ಯಮಿಗಳು ಪಾಟ್ನಾದಲ್ಲಿ ಡಿ.24ರಂದು ಕ್ಯಾಂಡಲ್ ಮಾರ್ಚ್ ನಡೆಸಿದ್ದರು.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.