ಸಿಕ್ಕಿಂ: ಸಿಕ್ಕಿಂನ ಭಾರತ-ಗಡಿ ಪ್ರದೇಶದಲ್ಲಿ ಭೀಕರ ಹಿಮಪಾತದಲ್ಲಿ ಸಿಲುಕಿ ಹಾಕಿಕೊಂಡಿದ್ದ 2,500 ಮಂದಿಯನ್ನು ಭಾರತೀಯ ಯೋಧರು ರಕ್ಷಣೆ ಮಾಡಿದ್ದಾರೆ.
ಗಂಗ್ಟೋಕ್ನ ನಾಥುಲಾ ಸಮೀಪ ವಿಪರೀತ ಹಿಮಪಾತದಿಂದಾಗಿ 400ಕ್ಕೂ ಅಧಿಕ ವಾಹನಗಳು ಸಿಲುಕಿ ಹಾಕಿಕೊಂಡಿದ್ದವು, ಶುಕ್ರವಾರ ರಾತ್ರಿ ಯೋಧರು ವಾಹನಗಳೊಳಗಿದ್ದ ಎಲ್ಲರನ್ನೂ ರಕ್ಷಣೆ ಮಾಡಿ ಅವರಿಗೆ ಆಹಾರ, ವಸತಿ, ವೈದ್ಯಕೀಯ ಚಿಕಿತ್ಸೆಗಳನ್ನು ನೀಡಿದ್ದಾರೆ.
ಟ್ವಿಟ್ ಮಾಡಿರುವ ಭಾರತೀಯ ಸೇನೆ, ‘ಸಿಕ್ಕಿಂನ ನಾಥುಲಾ ಸಮೀಪ ಹಿಮಪಾತದಲ್ಲಿ ಸಿಲುಕಿಹಾಕಿಕೊಂಡಿದ್ದ ಸುಮಾರು 400 ವಾಹನಗಳಲ್ಲಿದ್ದ ಸುಮಾರು 2,500 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎಲ್ಲರಿಗೂ ಆಹಾರ, ಚಿಕಿತ್ಸೆ, ವಸತಿ ಒದಗಿಸಲಾಗಿದೆ’ ಎಂದಿದೆ.
ನಾಥುಲಾ ಪೂರ್ವ ಸಿಕ್ಕಿಂನಲ್ಲಿನ ಹಿಮಪರ್ವತದ ಪ್ರದೇಶವಾಗಿದ್ದು, ಸಮುದ್ರ ಮಟ್ಟಕ್ಕಿಂತ 4,310 ಮೀಟರ್ ಎತ್ತರದಲ್ಲಿದೆ. ಗಂಗ್ಟೋಕ್ ಸ್ಥಳಿಯಾಡಳಿತದ ಅನುಮತಿ ಪಡೆದು ಕೇವಲ ಭಾರತೀಯರಷ್ಟೇ ಇಲ್ಲಿಗೆ ತೆರಳಬಹುದಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.