ನವದೆಹಲಿ: 2022ರ ವೇಳೆಗೆ ಎಲ್ಲರಿಗೂ ವಸತಿಯನ್ನು ಒದಗಿಸುವ ಮಹತ್ವದ ಗುರಿಯೊಂದಿಗೆ ಆರಂಭಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೇ 68.5 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ.
2015ರ ಜೂನ್ನಿಂದ ಆವಾಸ್ ಯೋಜನೆ ಅನುಷ್ಠಾನದಲ್ಲಿದ್ದು, ಸ್ಲಂ ನಿವಾಸಿಗಳಿಗೆ, ವಸತಿ ಹೀನರಿಗೆ ಮನೆಯನ್ನು ನಿರ್ಮಿಸಿಕೊಡುವ ಸಲುವಾಗಿ ಸ್ಥಳಿಯಾಡಳಿತಗಳಿಗೆ ಸಹಾಯ ಮಾಡುತ್ತಿದೆ. ರಾಜ್ಯಗಳಿಗೆ ನರೆವು ಒದಗಿಸುತ್ತಿದೆ.
ಈ ಯೋಜನೆಯಡಿ ರೂ.3,56,397ಕೋಟಿ ಹೂಡಿಕೆಯನ್ನು ಮಾಡಲಾಗಿದ್ದು. ಕೇಂದ್ರ ರೂ.1,00,275 ಕೋಟಿ ನೆರವು ನೀಡಲಿದೆ. ಇದರಲ್ಲಿ ಈಗಾಗಲೇ ರೂ.33,455 ಕೋಟಿಯನ್ನು ರಾಜ್ಯ/ಕೇಂದ್ರಾಡಳಿತಗಳಿಗೆ ನೀಡಲಾಗಿದೆ, ವಸತಿ ಸಾಲಗಳ ಸಬ್ಸಿಡಿ ಬಡ್ಡಿದರ ರೂ.6,943.95 ಕೋಟಿಗಳನ್ನು 3,14,703 ಫಲಾನುಭವಿಗಳಿಗೆ ನೇರ ವರ್ಗಾವಣೆ ಮಾಡಲಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.