ಭುವನೇಶ್ವರ: ಕೇಂದ್ರ ಸರ್ಕಾರದ ‘ಗಿವ್ಇಟ್ಅಪ್’ ಕರೆಗೆ ಓಗೊಟ್ಟು ದೇಶದ ಅನೇಕ ಮಂದಿ ಶ್ರೀಮಂತರು ತಮ್ಮ ಎಲ್ಪಿಜಿ ಸಬ್ಸಿಡಿಯನ್ನು ತೊರೆದಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಬಡವರಿಗೆ ಉಚಿತ ಅಡುಗೆ ಅನಿಲ ನೀಡುವುದು ಸುಲಭವಾಗುತ್ತಿದೆ. ಆದರೆ ಕೆಲವು ಶ್ರೀಮಂತರು ಮಾತ್ರ ಇನ್ನೂ ಸಬ್ಸಿಡಿ ಪಡೆದು ಬಡವರ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಒರಿಸ್ಸಾದ ಸಚಿವ ಎಸ್ಎನ್ ಪಾತ್ರೋ ಅವರು ಈಗಲೂ ಎಲ್ಪಿಜಿ ಸಬ್ಸಿಡಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಕಿಡಿಕಾರಿದ್ದಾರೆ.
‘ನವೀನ್ ಪಟ್ನಾಯಕ್ ಸಂಪುಟದ ಎಸ್ಎನ್ ಪಾತ್ರೋ ಅವರು ಈ ವರ್ಷ ರೂ.1850 ಎಲ್ಪಿಜಿ ಸಬ್ಸಿಡಿಯನ್ನು ಪಡೆದುಕೊಂಡಿದ್ದಾರೆ. ಅವರು ಪಡೆಯುತ್ತಿರುವುದು ಬಡವರಿಗೆ ಸೇರಬೇಕಾದ ಹಣ’ ಎಂದು ಪ್ರಧಾನ್ ಹೇಳಿದ್ದಾರೆ.
ಆದರೆ ಪಾತ್ರೋ ಮಾತ್ರ, ನಾನು ಸಬ್ಸಿಡಿ ಹಣ ತೆಗೆದುಕೊಳ್ಳುತ್ತಿಲ್ಲ, ಅದು ಯಾವಾಗ ನನ್ನ ಬ್ಯಾಂಕ್ಗೆ ಜಮಾ ಆಯಿತೋ ಗೊತ್ತಿಲ್ಲ ಎಂದಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.