ಸಿಯಾಚಿನ್: ಭಾರತೀಯ ಯೋಧರು ಮತ್ತೊಂದು ಅಮೋಘ ಸಾಧನೆಯನ್ನು ಮಾಡಿದ್ದಾರೆ, 17 ಸಾವಿರ ಅಡಿ ಎತ್ತರವಿರುವ ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್ನಲ್ಲಿ ಪತನವಾಗಿದ್ದ ಹೆಲಿಕಾಫ್ಟರ್ನ್ನು ರಿಪೇರಿ ಮಾಡಿ, ಸಿಯಾಚಿನ್ ಬೇಸ್ ಕ್ಯಾಂಪ್ಗೆ ತರುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
203 ಆರ್ಮಿ ಆವಿಯೇಶನ್ ಸ್ಕ್ವಾಡ್ರಾನ್ಗೆ ಸೇರಿದ ಹೆಲಿಕಾಫ್ಟರ್ ಧ್ರುವ್, ಕಳೆದ ಜನವರಿಯಲ್ಲಿ 17 ಸಾವಿರ ಅಡಿ ಎತ್ತದ ಖಂಡಾ ಪೋಸ್ಟ್ ಬಳಿ ಪತನಗೊಂಡಿತ್ತು. ವಿಪರೀತ ಹಿಮಪಾತ ಪತನಕ್ಕೆ ಕಾರಣವಾಗಿತ್ತು.
ಈ ಹೆಲಿಕಾಫ್ಟರ್ನ್ನು ಸತತವಾಗಿ ಪರೀಕ್ಷೆಗೊಳಪಡಿಸಿದ ಬಳಿಕ ರಿಪೇರಿ ಮಾಡಬಹುದು ಎಂಬುದನ್ನು ಅರಿತ ಸೇನೆ, ಇದಕ್ಕೆ ಬೇಕಾದ ಅನುಮತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿತ್ತು.
15 ದಿನಗಳ ಪ್ರಯಾಣವನ್ನು ನಡೆಸಿ ಖಂಡಾಗೆ ತೆರಳಿದ ಯೋದರು, ಮೈನಸ್ 25-30 ಡಿಗ್ರಿ ಸೆಲ್ಸಿಯಸ್ನ ವಿಪರೀತ ಚಳಿಯ ನಡುವೆಯೂ 60-90 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಹೆಲಿಕಾಫ್ಟರ್ನ್ನು ರಿಪೇರಿ ಮಾಡಿದ್ದಾರೆ ಮತ್ತು ಅದನ್ನು ಸಿಯಾಚಿನ್ ಬೇಸ್ ಕ್ಯಾಂಪ್ಗೆ ತಂದಿದ್ದಾರೆ.
ಸಿಯಾಚಿನ್ನಲ್ಲಿ ಪತನಗೊಂಡ ಹೆಲಿಕಾಫ್ಟರ್ನ್ನು ಸೇನೆ ರಿಪೇರಿಗೊಳಪಡಿಸಿರುವುದು ಇದೇ ಮೊದಲು. 1984ರ ಏಪ್ರಿಲ್ 13ರಂದು ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸರಿ ಸುಮಾರು 40 ಹೆಲಿಕಾಪ್ಟರ್ ಗಳು ಗ್ಲೇಸಿಯರ್ ನಲ್ಲಿ ಕೆಟ್ಟು ನಿಂತಿವೆ ಅಥವಾ ಅಪಘಾತಕ್ಕೀಡಾಗಿವೆ. ಈ ಹೆಲಿಕಾಫ್ಟರ್ ಗಳನ್ನು ವಾಪಸ್ ತರಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಧ್ರುವ್ ಹೆಲಿಕಾಫ್ಟರ್ ರಿಪೇರಿ ಮೂಲಕ ನಮ್ಮ ಯೋಧರು ವಿಶ್ವದಾಖಲೆಯನ್ನೇ ಮಾಡಿದ್ದಾರೆ.
source: swarajyamag.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.